Advertisement

ಬೀಜ ಸಂರಕ್ಷಣೆ ಮಾಡಿಕೊಂಡು ಬಿತ್ತುವುದು ಸೂಕ್ತ

10:30 AM May 26, 2020 | Suhan S |

ನರಗುಂದ: ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜ ವಿತರಿಸುವ ಸರಕಾರದ ಉದ್ದೇಶ ಸಾರ್ಥಕತೆ ಪಡೆದುಕೊಳ್ಳಬೇಕು. ಇದರೊಂದಿಗೆ ರೈತರು ಸ್ವಯಂ ಉತ್ಪಾದಿಸಿದ ಬೀಜ ಸಂರಕ್ಷಣೆ ಮಾಡಿಕೊಂಡು ಬಿತ್ತನೆ ಮಾಡುವುದು ಕೂಡ ಸೂಕ್ತವಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ಸಿ.ಸಿ. ಪಾಟೀಲ ಹೇಳಿದರು.

Advertisement

ಸೋಮವಾರ ಪಟ್ಟಣದ ಕೃಷಿ ಇಲಾಖೆಯಿಂದ ರೈತ ಸಂಪರ್ಕ ಕೇಂದ್ರದಲ್ಲಿ ಪ್ರಸಕ್ತ ಸಾಲಿನ ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡಿ ಅವರು ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ಪ್ರತಿ ರೈತರಿಗೆ ಗರಿಷ್ಠ 5 ಎಕರೆಗೆ 5 ಪ್ಯಾಕೇಟ್‌ಗಳಲ್ಲಿ 3 ಹೆಸರು ಬೀಜ, ಉಳಿದೆರಡು ಪ್ಯಾಕೇಟ್‌ ಬೇರೆ ಬೀಜ ಪೂರೈಕೆ ಮಹತ್ವದ್ದು. ಇದರಿಂದ ಪರ್ಯಾಯ ಬೆಳೆಗೆ ಅನುಕೂಲವಾಗುತ್ತದೆ ಎಂದು ಸಚಿವ ಪಾಟೀಲ ಹೇಳಿದರು.

ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ಮಾತನಾಡಿ, ಬೇರೆ ಬೆಳೆಗಾಗಿ ಪ್ರತಿ ರೈತರಿಗೆ 2 ಪ್ಯಾಕೇಟ್‌ ಬೇರೆ ಬೀಜ ವಿತರಣೆ ಮಾಡಲಾಗುತ್ತದೆ. ರೈತರು ಉತ್ಪಾದಿಸಿದ ಬೀಜ ಬಿತ್ತನೆಗೆ ಸಂರಕ್ಷಣೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ತಾಪಂ ಅಧ್ಯಕ್ಷ ವಿಠuಲ ತಿಮ್ಮರಡ್ಡಿ, ಚಂದ್ರು ದಂಡಿನ, ಬಿ.ಬಿ. ಐನಾಪೂರ, ಟಿಎಪಿಸಿಎಂಎಸ್‌ ಅಧ್ಯಕ್ಷ ಅಜ್ಜಪ್ಪ ಹುಡೇದ, ಜಿಪಂ ಸದಸ್ಯೆ ರೇಣುಕಾ ಕಲಹಾಳ, ಗುರಪ್ಪ ಆದೆಪ್ಪನವರ, ಎಂ.ಎಸ್‌. ಪಾಟೀಲ, ವಸಂತ ಜೋಗಣ್ಣವರ, ಬಿ.ಜಿ. ಸುಂಕದ, ಮಲ್ಲಪ್ಪ ಮೇಟಿ, ಉಮೇಶಗೌಡ ಚಿನ್ನಪ್ಪಗೌಡ್ರ, ಹನಮಂತಪ್ಪ ಹದಗಲ್ಲ, ಮಂಜು ಮೆಣಸಗಿ, ಸಿದ್ದೇಶ ಹೂಗಾರ ಮತ್ತು ಕೃಷಿ ಇಲಾಖೆ ಸಿಬ್ಬಂದಿ, ರೈತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next