Advertisement

ಹಳೆ ವಿದ್ಯಾರ್ಥಿಗಳ ಪರಿವಾರ ಸಂಭ್ರಮ

05:42 PM Dec 29, 2019 | Naveen |

ಸೇಡಂ: ಹತ್ತಾರು ವರ್ಷಗಳಿಂದ ದೂರದ ತೀರಕ್ಕೆ ಜಾರಿದ್ದ ದೋಸ್ತಾನಾ. ಚಿಕ್ಕವರಿದ್ದಾಗ ಮಾಡಿದ ಕೀಟಲೆ, ಆಡಿದ ಆಟ, ನೋಡಿದ ವಾತಾವರಣ, ಹಳೆ ಶಿಕ್ಷಕರನ್ನು ಕಂಡು ಮನದಲ್ಲಿ ಮೂಡಿ ದ ಗೌರವ, ಎಲ್ಲವೂ ಒಂದು ಕ್ಷಣ ಕಣ್ಣ ಮುಂದೆ ಬಂದು ಹೋದ ಅನುಭವ.

Advertisement

ಈ ರೀತಿ ವಾತಾವರಣ ಕಂಡಿದ್ದು ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ತನ್ನ 50ನೇ ವರ್ಷದ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಶನಿವಾರ ನೃಪತುಂಗ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ “ಪರಿವಾರ ಸಂಭ್ರಮ’ ಕಾರ್ಯಕ್ರಮದಲ್ಲಿ. ಸಂಸ್ಥೆಯಲ್ಲಿ ಓದಿ ರಾಜ್ಯ, ಹೊರರಾಜ್ಯಗಳಲ್ಲಿ ವಿವಿಧ ಹುದ್ದೆ, ಸೇವಾ ಕಾರ್ಯದಲ್ಲಿ ತೊಡಗಿರುವ ಹಳೆ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನೆನಪಿನ ಕ್ಷಣಗಳನ್ನು ಪರಸ್ಪರ ಹಂಚಿಕೊಂಡರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಮಕ್ಕಳ ಹೃದ್ರೋಗ ತಜ್ಞೆ ಡಾ| ವಿಜಯಲಕ್ಷ್ಮೀ ಬಾಳೆಕುಂದ್ರಿ, ಕಾನ್ವೆಂಟ್‌ ಶಾಲೆಗಳಿಂದ ಹರಡುತ್ತಿರುವ ಮಮ್ಮಿ, ಡ್ಯಾಡಿ ಸಂಸ್ಕೃತಿ ಹೋಗಿ ಅಮ್ಮ ಸಂಸ್ಕೃತಿ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ ಕಾರ್ಯ ಮಾಡುತ್ತಿದೆ ಎಂದರು.

ಮುಂಬೈ ವಿಶ್ವವಿದ್ಯಾಲಯದ ಮಾಸ್ಟರ್‌ ಇನ್‌ ಲೀಡರ್‌ಶಿಪ್‌ ಸೈನ್ಸ್‌ನ ಉಪ ನಿರ್ದೇಶಕ ರಾಧಾಕೃಷ್ಣ ಪಿಳ್ಳೆ ಮಾತನಾಡಿ, ಸಂಸ್ಕೃತಿ ಬೆಳೆಸಬೇಕಾದರೆ ಭಾಷೆಯ ಉಳಿವು ಅತ್ಯವಶ್ಯಕ. ಸಮಾಜದಲ್ಲಿರುವ ಸಮಸ್ಯೆಗಳನ್ನು ಪರಿಪೂರ್ಣವಾಗಿ ಸರ್ಕಾರಗಳು ಪೂರೈಸಲು ಸಾಧ್ಯವಿಲ್ಲ ಜನರೂ ಕೈಜೋಡಿಸಬೇಕು ಎಂದು ಹೇಳಿದರು.

ಸಮಿತಿ ಸಂರಕ್ಷಕ, ಮಾಜಿ ರಾಜ್ಯಸಭಾ ಸದಸ್ಯ ಡಾ| ಬಸವರಾಜ ಪಾಟೀಲ, ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಶ್ರೀ ಕೊತ್ತಲ ಬಸವೇಶ್ವರ ಸಂಸ್ಥಾನದ ಸದಾಶಿವ ಸ್ವಾಮೀಜಿ ಮಾತನಾಡಿದರು. ಸಂಸ್ಥೆ ಲಕೋಟೆ ಬಿಡುಗಡೆ: ಸಮಿತಿಯ ಅಂಚೆ ಲಕೋಟೆಯನ್ನು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಬಿಡುಗಡೆಗೊಳಿಸಿದರು. ಮಾಜಿ ಶಾಸಕ ನಾಗರೆಡ್ಡಿ ಪಾಟೀಲ, ಪೂಜ್ಯ ಮಲ್ಲಿಕಾರ್ಜುನ ದೇವರು ಶಿವಮೊಗ್ಗ, ಅಂಚೆ ಇಲಾಖೆ ಹಿರಿಯ ಅಧಿಧೀಕ್ಷಕ ಬಿ.ಆರ್‌. ಮನಜಗಿ, ಬಿ.ಎಲ್‌. ಚಿತಕೋಟೆ ಇದ್ದರು.

Advertisement

ಜತೆಗೆ ಸಮಿತಿಯ ಕ್ಯಾಲೆಂಡರ್‌ ಲೋಕಾರ್ಪಣೆ ಮಾಡಲಾಯಿತು. ಅನುರಾಧಾ ಪಾಟೀಲ, ಆರತಿ ಕಡಗಂಚಿ ನಿರೂಪಿಸಿದರು, ಸಮಿತಿ ಕಾರ್ಯದರ್ಶಿ ಡಾ| ಉದಯಕುಮಾರ ಶಹಾ ಸ್ವಾಗತಿಸಿದರು, ಅನೀಲ ಮಾಲಪಾಣಿ ಪರಿಚಯಿಸಿದರು. ರೇಣುಕಾ ತಾಡೇಪಲ್ಲಿ ವೈಯಕ್ತಿಕ ಗೀತೆ ಹಾಡಿದರು. ಮಾತೃಛಾಯಾ ಶಾಲೆ ಮಕ್ಕಳು ಪ್ರಾರ್ಥಿಸಿದರು. ಡಾ| ಸದಾನಂದ ಬೂದಿ ವಂದಿಸಿದರು.

ಇಂದಿನ ಶಾಲೆಗಳು ಅಂಡಮಾನ್‌ ಜೈಲಿನಂತಾಗಿವೆ. ಶಿಕ್ಷಣ ವ್ಯಾಪಾರೀಕರಣವಾಗಿದೆ. ಕೆಲ ಶಾಲೆಗಳು ತಮ್ಮ ಬೋರ್ಡ್‌ಗಳಲ್ಲಿ ಶುದ್ಧ ಶಾಖಾಹಾರಿ ಊಟ ನೀಡುತ್ತೇವೆ ಎಂದು ಬರೆದುಕೊಳ್ಳುತ್ತಿದ್ದಾರೆ. ಡೈರಿ ಮಿಲ್ಕ್ ಚಾಕೋಲೆಟ್‌, ಬಿಸ್ಕೆಟ್‌ ಆಸೆ ತೋರಿಸಿ ಮಕ್ಕಳನ್ನು ಶಾಲೆಗೆ ಕರೆದೊಯ್ಯಲಾಗುತ್ತಿದೆ. ಮಕ್ಕಳು ಪಾಲಕರನ್ನು ಗೌರವಿಸಬೇಕಾದರೆ ಎಸ್ಸೆಸ್ಸೆಲ್ಸಿ ವರೆಗೆ ಕನ್ನಡದಲ್ಲೇ ಓದಿಸಿ.
ಪೂಜ್ಯ ಸದಾಶಿವ ಸ್ವಾಮೀಜಿ,
ಶ್ರೀ ಕೊತ್ತಲ ಬಸವೇಶ್ವರ ಸಂಸ್ಥಾನದ ಪೀಠಾಧಿಪತಿ

2025ಕ್ಕೆ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣ ಜಯಂತಿ ಪ್ರಯುಕ್ತ ನಡೆಯುವ ಮಹೋತ್ಸವ ದೇಶದಲ್ಲೇ ಅಲೌಕಿಕ ಕಾರ್ಯಕ್ರಮವಾಗಲಿದೆ. 200 ಎಕರೆ ಪ್ರದೇಶದಲ್ಲಿ ಸತತ ಒಂಭತ್ತು ದಿನಗಳ ಕಾಲ ಸಮಾರಂಭ ಜರುಗಲಿದ್ದು, 30 ಲಕ್ಷ ಜನ ಭಾಗಿಯಾಗಲಿದ್ದಾರೆ. 80 ಕೋಟಿ ಜನರ ಮೇಲೆ ಈ ಕಾರ್ಯಕ್ರಮ ಪರಿಣಾಮ ಬೀರಲಿದ್ದು, ವಿಶ್ವದ ಅನೇಕ ಮೂಲೆಗಳಿಂದ ಅಸಾಧಾರಣ ವ್ಯಕ್ತಿಗಳು ಆಗಮಿಸಲಿದ್ದಾರೆ.
ಡಾ| ಬಸವರಾಜ ಪಾಟೀಲ ಸೇಡಂ,
ರಾಜ್ಯಸಭೆ ಮಾಜಿ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next