Advertisement

ಕೋವಿಡ್ ಹೆಸರಲ್ಲಿ ಬಿಜೆಪಿ ರಾಜಕೀಯ

04:01 PM May 17, 2020 | Naveen |

ಸೇಡಂ: ಕೋವಿಡ್ ಹೆಸರಲ್ಲಿ ಬಿಜೆಪಿ ನಾಯಕರು ರಾಜಕೀಯ ಪಿತೂರಿ ನಡೆಸಿ ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರ ಹೆಸರಿಗೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ದಾಮೋದರರೆಡ್ಡಿ ಆರೋಪಿಸಿದರು.

Advertisement

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ನಡೆಸಿದ ಸಭೆ ರಾಜಕೀಯ ಪ್ರೇರಿತ ಎಂದು ಸುಳ್ಳು ಪ್ರಚಾರ ಮಾಡುತ್ತಿರುವ ಬಿಜೆಪಿ ನಾಯಕರು ಸತ್ಯ ಮೊದಲು ಅರ್ಥೈಸಿಕೊಳ್ಳಬೇಕು. ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಾಸ್ಕ್, ಸ್ಯಾನಿಟೈಸರ್‌ ಹಂಚಲು ಮಾತ್ರ ಸಾಮಾಜಿಕ ಅಂತರ ಕಾಪಾಡಿಕೊಂಡು ಸಭೆ ಸೇರಲಾಗಿತ್ತು. ಆದರೆ ಆ ವಿಷಯ ತಿರುಚಿ ರಾಜಕೀಯ ಪ್ರಭಾವ ಬಳಸಿ ಶರಣಪ್ರಕಾಶ ಪಾಟೀಲ ಅವರ ಮೇಲೆ ದೂರು ದಾಖಲಿಸುವಂತೆ ಬಿಜೆಪಿಯವರೇ ಮಾಡಿದ್ದಾರೆ. ಪ್ರಜೆಗಳ ಆರೋಗ್ಯ ವಿಚಾರಿಸುವ ಹಕ್ಕು ಹಾಲಿ ಶಾಸಕರಿಗೆ ಇದ್ದಷ್ಟೇ ಹಕ್ಕು ಮಾಜಿ ಶಾಸಕರಿಗೂ ಇರಲಿದೆ ಎಂದರು.

ಮುಖಂಡ ಜೈಭೀಮ ಊಡಗಿ, ಎಪಿಎಂಸಿ ಅಧ್ಯಕ್ಷ ಸಿದ್ದು ಬಾನಾರ ಮಾತನಾಡಿ, ಶರಣಪ್ರಕಾಶ ಪಾಟೀಲ ರಾಜಕೀಯ ಸಭೆ ನಡೆಸಿಲ್ಲ. ಜನರಿಗೆ ಆಗಿರುವ ನೀರಿನ ಸಮಸ್ಯೆ ಆಲಿಸಿದ್ದಾರೆ. ನರೇಗಾದಡಿ ಕಾರ್ಯಗಳ ಬಗ್ಗೆ ಪರೀಶೀಲಿಸಿದ್ದಾರೆ. ಬಿಜೆಪಿಯವರಿಗೆ ಸಾಮಾನ್ಯ ಜ್ಞಾನವೂ ಇಲ್ಲ. ಅದರಿಂದ ತಮ್ಮ ಪ್ರಭಾವ ಬಳಸಿ ಸುಲೇಪೇಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಎರಡು ವರ್ಷದಲ್ಲಿ ಸೇಡಂ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯ ಶೂನ್ಯವಾಗಿದೆ ಎಂದು ಟೀಕಿಸಿದರು.

ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ನಾಗೇಶ್ವರರಾವ ಮಾಲಿಪಾಟೀಲ ಮಾತನಾಡಿ, ಮಾಜಿ ಸಚಿವ ಶರಣಪ್ರಕಾಶ ಪಾಟೀಲ ಹಾಗೂ ಮಾಜಿ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಅವರ ಹೆಸರಿಗೆ ಕಪ್ಪು ಚುಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಮುಖಂಡರಾದ ಸುದರ್ಶನರೆಡ್ಡಿ ಪಾಟೀಲ, ದತ್ತು ಪಾಟೀಲ, ರುದ್ರು ಪಿಲ್ಲಿ, ಉಮಾರೆಡ್ಡಿ ಹಂದರಕಿ, ಬಸ್ಸಯ್ಯಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next