Advertisement
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೇಡಂ ತಾಲೂಕು ವ್ಯಾಪ್ತಿಯಲ್ಲಿ 1720 ಹಾಗೂ ಚಿಂಚೋಳಿ ತಾಲೂಕಿನ ಸೇಡಂ ವಿಧಾನಸಭಾ ವ್ಯಾಪ್ತಿಯ 180 ಜನರನ್ನು ಗುರುತಿಸಲಾಗಿದ್ದು, ಅವರಿಗೆ ನೆರವಾಗಲೆಂದು 7 ಕೆ.ಜಿ ಅಕ್ಕಿ, 1 ಕೆಜಿ ಬೇಳೆಯ ಕಿಟ್ ನೀಡಲಾಗಿದೆ. ಇದಲ್ಲದೆ ಸರ್ಕಾರದ ವತಿಯಿಂದಲೂ ನೆರವು ನೀಡಲಾಗುತ್ತಿದೆ ಎಂದರು. ಲಾಕಡೌನ್‌ನಿಂದ ಕೋವಿಡ್ ಹತೋಟಿಗೆ ತರಬಹುದು. ಆದರೆ ನಿರಂತರ ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ತೊಲಗಿಸಬಹುದು. ಮುಂಜಾಗ್ರತೆ ದೃಷ್ಟಿಯಿಂದ ಜಿಲ್ಲೆಗೆ 400 ಐಸೊಲೇಷನ್ ವಾರ್ಡ್ ಹಾಗೂ ಕನಿಷ್ಟ 200 ವೆಂಟಿಲೇಟರ್ ಅವಶ್ಯಕತೆ ಇದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೂ ಸಹ ವಿಳಂಬವಾಗುತ್ತಿದ್ದು, ಈ ಬಗ್ಗೆ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದರು.
ನಗದು ನೀಡುವ ತೀರ್ಮಾನವಾಗಿದೆ. ಬಹುತೇಕರಿಗೆ ಇನ್ನೂ ಹಣ ತಲುಪಿಲ್ಲ. ಕಿರಾಣಿ ಅಂಗಡಿಗಳಲ್ಲಿ ಹಾಗೂ ಪಡಿತರ ಕೇಂದ್ರಗಳಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಸಹಾಯಕ ಆಯುಕ್ತರು ಕಠಿಣ ಕ್ರಮ ಜರುಗಿಸಬೇಕೆಂದರು. ಹಾಪಕಾಮ್ಸ್ ರಾಜ್ಯ ಅಧ್ಯಕ್ಷ ಬಸವರಾಜ ಪಾಟೀಲ ಊಡಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ವರರಾವ್ ಮಾಲಿಪಾಟೀಲ, ಸುದರ್ಶನರೆಡ್ಡಿ ಪಾಟೀಲ, ವಿಶ್ವನಾಥರೆಡ್ಡಿ ಪಾಟೀಲ, ಗಫೂರ, ನಾಜಿಮೋದ್ದಿನ್, ರಾಜು ಹಡಪದ, ಸಂಪತಕುಮಾರ ಭಾಂಜಿ, ಸಂತೋಷ ತಳವಾರ, ರಶೀದ ರಂಜೋಳ, ರಾಘವೇಂದ್ರ ಮುಸ್ತಾಜರ್, ದತ್ತಾತ್ರೇಯ ಐನಾಪೂರ, ಹಾಜಿ ನಾಡೇಪಲ್ಲಿ, ಸತ್ತಾರ ನಾಡೇಪಲ್ಲಿ, ವಿಲಾಸಗೌತಂ ನಿಡಗುಂದ, ಪ್ರಶಾಂತ ಸೇಡಂಕರ್ ಇನ್ನಿತರರು ಇದ್ದರು.