Advertisement

ಪುಲ್ವಾಮಾ ಎನ್‌ಕೌಂಟರ್ ‌: ಒಬ್ಬ ಉಗ್ರನ ಹತ್ಯೆ

02:38 AM Jun 19, 2020 | Hari Prasad |

ಶ್ರೀನಗರ/ಇಸ್ಲಾಮಾಬಾದ್‌: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಗುರುವಾರ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಉಗ್ರನನ್ನು ಭದ್ರತಾ ಪಡೆ ಹೊಡೆದುರುಳಿಸಿದೆ.

Advertisement

ಪುಲ್ವಾ­ಮಾದ ಪಂಪೋರಿ ಪ್ರದೇಶದಲ್ಲಿ ಶೋಧ ಕಾರ್ಯಾ­ಚರಣೆ ಆರಂಭಿಸಿದ್ದ ವೇಳೆ ಗುಂಡಿನ ಚಕಮಕಿ ಆರಂಭವಾಗಿದ್ದು, ಒಬ್ಬ ಉಗ್ರನನ್ನು ಹತ್ಯೆಗೈ­ಯುವಲ್ಲಿ ಭದ್ರತಾ ಪಡೆ ಯಶಸ್ವಿಯಾಯಿತು. ಮಂಗಳವಾರವಷ್ಟೇ ಮೂವರು ಉಗ್ರರನ್ನು ಶೋಪಿಯಾನ್‌ ಜಿಲ್ಲೆಯಲ್ಲಿ ಹೊಡೆದುರುಳಿಸಲಾಗಿತ್ತು.

ಪ್ರಸಕ್ತ ವರ್ಷ ವಿವಿಧ ಕಾರ್ಯಾ­ಚರಣೆಗಳಲ್ಲಿ 100ಕ್ಕೂ ಹೆಚ್ಚು ಭಯೋತ್ಪಾ­ದಕರನ್ನು ಭದ್ರತಾಪಡೆ ಹತ್ಯೆಗೈದಿದೆ.
ಪಾಕ್‌ ಆರೋಪ: ಗಡಿಯಲ್ಲಿ ಸತತ ಕದನ ವಿರಾಮ ಉಲ್ಲಂಘನೆ ಮಾಡುತ್ತಾ ಬಂದಿರುವ ಪಾಕಿಸ್ತಾನವು ಈಗ ಭಾರತದ ಮೇಲೆಯೇ ಗೂಬೆ ಕೂರಿಸಿದ್ದು, ಭಾರತದ ಸೇನೆಯ ದಾಳಿಯಿಂದ ನಾಲ್ವರು ನಾಗರಿಕರು ಮೃತಪಟ್ಟಿರುವುದಾಗಿ ಆರೋಪಿಸಿದೆ.

ಗಡಿ ನಿಯಂತ್ರಣ ರೇಖೆ ಯುದ್ದಕ್ಕೂ ಪಾಕಿಸ್ಥಾನದ ಗಡಿ ಗ್ರಾಮ­ಗಳಾದ ನಿಕಿಯಾಲ್‌ ಮತ್ತು ಬಾಗ್ಸರ್‌ ವಲಯ­ವನ್ನು ಗುರಿಯಾಗಿಸಿಕೊಂಡು ಭಾರತದ ಸೇನೆ ದಾಳಿ ನಡೆಸಿದ್ದು, ಒಬ್ಬ ಮಹಿಳೆ ಸೇರಿದಂತೆ ನಾಲ್ವರು ನಾಗರಿಕರು ಅಸುನೀಗಿ­ದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ ಎಂದು ಪಾಕ್‌ ಸಶಸ್ತ್ರ ಪಡೆಗಳ ವಕ್ತಾರ ಮೇಜರ್‌ ಜನರಲ್‌ ಬಾಬರ್‌ ಇಫ್ತಿಕಾರ್‌ ಆರೋಪಿಸಿದ್ದಾರೆ. ಭಾರ­ತವೇ ಅಪ್ರಚೋದಿತವಾಗಿ ಕದನ ವಿರಾಮ ಉಲ್ಲಂಘಿಸಿದೆ ಎಂದೂ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next