Advertisement

Ayodhye ಈಗ ಭದ್ರಕೋಟೆ: ನಗರದಾದ್ಯಂತ ಕಮಾಂಡೋಗಳ ಸರ್ಪಗಾವಲು

10:43 PM Jan 21, 2024 | Team Udayavani |

ಬಹು ಹಂತದ ಭದ್ರತಾ ಯೋಜನೆ ಅನ್ವಯ ಅಯೋಧ್ಯಾ ನಗರವು ಪೊಲೀಸರ ಭದ್ರಕೋಟೆಯಾಗಿ ಮಾರ್ಪಾಡಾಗಿದೆ. ಈಗಾಗಲೇ ಎನ್‌ಎಸ್‌ಜಿ, ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ (ಸಿಎಪಿಎಫ್)ಯ ತಂಡಗಳು ಸೇರಿದಂತೆ ನೂರಾರು ಪೊಲೀಸ್‌ ಸಿಬ್ಬಂದಿಯನ್ನು ಅಯೋಧ್ಯೆಯಲ್ಲಿ ನಿಯೋಜಿಸಲಾಗಿದೆ.

Advertisement

“ಅಯೋಧ್ಯೆಯಲ್ಲಿ ಸಿಎಪಿಎಫ್ 7 ತುಕಡಿಗಳು, ಎರಡು ಎನ್‌ಎಸ್‌ಜಿ ಸ್ನೆ„ಪರ್‌ ತಂಡ, ಎರಡು ಡ್ರೋನ್‌ ನಿಗ್ರಹ ವ್ಯವಸ್ಥೆ, 25 ವಿಆರ್‌ ಕಾರ್‌, 10 ವಾಹನ ದಲ್ಲಿ ಅಳವಡಿಸಿದ ಜಾಮರ್‌ಗಳು, ಆರು ವಾಹನದಲ್ಲಿ ಅಳವಡಿಸಿದ ಎಕ್ಸ್‌ ರೇ ಬ್ಯಾಗೇಜ್‌ ಸ್ಕಾನರ್‌ಗಳನ್ನು ನಿಯೋಜಿ ಸ ಲಾಗಿದೆ’ ಎಂದು ಉ.ಪ್ರದೇಶ ಪೊಲೀಸ್‌ ವಿಶೇಷ ಮಹಾ ನಿರ್ದೇಶಕ ಪ್ರಶಾಂತ್‌ ಕುಮಾರ್‌, ತಿಳಿಸಿದ್ದಾರೆ.

10,000 ಸಿಸಿಟಿವಿ: ಅಯೋಧ್ಯೆಯಲ್ಲಿ 10,000 ಸಿಸಿಟಿವಿಗಳನ್ನು ಅಳವಡಿಸ ಲಾಗಿದೆ. ರಾಸಾಯನಿಕ, ಜೈವಿಕ, ವಿಕಿರಣ, ಪರಮಾಣು ಸೇರಿದಂತೆ ಯಾವುದೇ ರೀತಿಯ ದಾಳಿಯನ್ನು ಎದುರಿಸುವ ಸಾಮರ್ಥ್ಯವುಳ್ಳ ಎನ್‌ಡಿಆರ್‌ಎಫ್(ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ತಂಡವನ್ನು ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next