Advertisement

ಅಮರನಾಥ ಯಾತ್ರಾರ್ಥಿಗಳಿಗೆ ಭದ್ರತೆ

09:21 AM Aug 04, 2019 | Team Udayavani |

ಮಣಿಪಾಲ: ಅಮರನಾಥ ಯಾತ್ರಾರ್ಥಿಗಳು ಜುಲೈ ಮತ್ತು ಅಗಸ್ಟ್‌ ತಿಂಗಳಲ್ಲಿ ಹೆಚ್ಚು ಭೇಟಿ ಕೊಡುತ್ತಾರೆ. ಈ ಕಾರಣಕ್ಕೆ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊರ ರಾಜ್ಯದವರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಮರನಾಥ ಯಾತ್ರಾರ್ಥಿಗಳು ತೆರಳುತ್ತಿದ್ದಾರೆ. ಅಂದಾಜು 3.5 ಲಕ್ಷ ಮಂದಿ ಈ ವರ್ಷ ತೆರಳಿದ್ದು, ಇದು ಶೇ. 30ರಷ್ಟು ಹೆಚ್ಚು. ಆದರೆ ಭಯೋತ್ಪಾದಕರ ದಾಳಿ ನಡೆಯುವ ಸಾಧ್ಯತೆ ಹಿನ್ನಲೆಯಲ್ಲಿ ಶುಕ್ರವಾರದಿಂದ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

Advertisement

ಹೆಚ್ಚು ಸೈನಿಕರ ನಿಯೋಜನೆ
ಅಮರನಾಥ್‌ ಜಮ್ಮು ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿದೆ. ಯಾತ್ರಾರ್ಥಿಗಳು ಹೆಚ್ಚಿರುವ ಕಾರಣ ಕೇಂದ್ರ ಸರಕಾರ ಹಂತ ಹಂತವಾಗಿ ಭದ್ರತೆಯನ್ನು ಬಿಗಿಗೊಳಿಸುತ್ತಿದೆ. ಈ ಕಾರಣಕ್ಕೆ ಜಮ್ಮು ಮತ್ತು ಕಾಶ್ಮೀರಕ್ಕೆ ಸೇನಾ ತುಕಡಿಗಳನ್ನು ಹೆಚ್ಚು ನಿಯೋಜಿಸಲಾಗಿತ್ತ.

27 ವರ್ಷಗಳಲ್ಲಿ 36 ಭಯೋತ್ಪಾದಕ ದಾಳಿಗಳು ನಡೆದಿದೆ. ಇವುಗಳಲ್ಲಿ 36 ಮಂದಿ ಯಾತ್ರಾರ್ಥಿಗಳು ಮೃತಪಟ್ಟಿದ್ದರು. 167 ಮಂದಿ ದಾಳಿಯಿಂದ ಗಾಯಗೊಂಡಿದ್ದರು. 1990ರಲ್ಲಿ 36 ಭಯೋತ್ಪಾದಕರ ದಾಳಿಗಳು ಕೇವಲ ಅಮರನಾಥ ಯಾತ್ರಾರ್ಥಿಗಳನ್ನೇ ಗುರಿಯಾಗಿಸಿಕೊಂಡು ನಡೆದಿವೆ.

2000 35 ಯಾತ್ರಾರ್ಥಿಗಳು 2000ನೇ ವರ್ಷದಲ್ಲಿ ಭಯೋ ತ್ಪಾದಕರ ದಾಳಿಗೆ ಬಲಿಯಾಗಿದ್ದರು. ಯಾತ್ರಾರ್ಥಿಗಳನ್ನು ಗುರಿಯಾಗಿಸಿಕೊಂಡು ಲಷ್ಕರೆ ಇ-ತೈಬಾ ಗುಂಡಿನ ಮಳೆಗೈದಿತ್ತು. ಯಾತ್ರಾರ್ಥಿಗಳ ಜತೆಗೆ ಅಂಗಡಿ ಮಾಲಕರು, ರಕ್ಷಕರು ಸಾವಿಗೀಡಾಗಿದ್ದರು.

2001ರಲ್ಲಿ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಮಿಲಿಟರಿ ಕ್ಯಾಂಪ್‌ಗ್ಳನ್ನು ನಿಯೋಜನೆಗೊಳಿಸಲಾಗಿತ್ತು. ಇದನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ 13 ಮಂದಿ ಮೃತಪಟ್ಟಿದ್ದರು. ಮೃತಪಟ್ಟವರಲ್ಲಿ ಯಾತ್ರಾರ್ಥಿಗಳೂ ಸೇರಿದ್ದರು.

Advertisement

2002ರಲ್ಲಿ ಆಗಸ್ಟ್‌ ತಿಂಗಳಲ್ಲಿ ಯಾತ್ರಾರ್ಥಿಗಳನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ 9 ಮಂದಿ ಮೃತಪಟ್ಟಿದ್ದರು. ಪವಲ್ಗಾಂನಲ್ಲಿ ನಡೆದ ಈ ದಾಳಿಯ ಹೊಣೆಯನ್ನು ಲಷ್ಕರೆ ಇ-ತೈಬಾ ಹೊತ್ತುಕೊಂಡಿತ್ತು.

2004ರಲ್ಲಿ ಉಗ್ರರು ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 2 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.

2006ರಲ್ಲಿ ರಾಜಸ್ಥಾನದಿಂದ 40 ಯಾತ್ರಾರ್ಥಿಗಳನ್ನು ಸಾಗಿ ಸುತ್ತಿದ್ದ ಬಸ್‌ ಮೇಲೆ ಉಗ್ರರು ಗುಂಡಿನ ಮಳೆಯನ್ನೇ ಸುರಿಸಿದ್ದರು. ಈ ದುರ್ಘ‌ಟನೆಯಲ್ಲಿ 5ಯಾತ್ರಾರ್ಥಿಗಳು ಮೃತಪಟ್ಟಿದ್ದರು.

2017ರಲ್ಲಿ ಅಮರನಾಥ ಯಾತ್ರೆ ಪೂರೈಸಿಕೊಂಡು ಯಾತ್ರಾರ್ಥಿಗಳ ಬಸ್‌ ಹಿಂದಿರುಗುತ್ತಿದ್ದರು. ಅನಂತ್‌ನಾಗ್‌ ಸಮೀಪ ಉಗ್ರರು ಬಸ್‌ ಅನ್ನು ಸುತ್ತುವರಿದಿದ್ದರು. ಈ ವೇಳೆ ನಾಲ್ಕೂ ಕಡೆಯಿಂದ ಉಗ್ರರು ನಡೆಸಿದ ಗುಂಡಿನ ದಾಳಿಗೆ 5 ಮಹಿಳಾ ಯಾತ್ರಾರ್ಥಿಗಳು ಸೇರಿದಂತೆ 13 ಮಂದಿ ಬಲಿಯಾಗಿದ್ದರು.

-  ಸ್ಪೆಷಲ್‌ ಡೆಸ್ಕ್

Advertisement

Udayavani is now on Telegram. Click here to join our channel and stay updated with the latest news.

Next