ಯಶಸ್ಸು ಎಂಬುದರ ಸಾಮಾನ್ಯ ವ್ಯಾಖ್ಯಾನವೇನು? ಹತ್ತು ಮಂದಿಯನ್ನು ಹಿಂದಿಕ್ಕಿ ಮುಂಚೂಣಿಯಲ್ಲಿ ಇರುವುದು ಎಂದಲ್ಲವೆ? ಓಟದಲ್ಲಿ ಯಾವಾಗಲೂ ಮೊದಲಿಗನಾಗಿ ಇರುವುದು. ಆದರೆ “ನನ್ನ ಪ್ರಕಾರ ಅದು ಯಶಸ್ಸು ಅಲ್ಲ’ ಎನ್ನುತ್ತಾರೆ ಸದ್ಗುರು ಜಗ್ಗಿ ವಾಸುದೇವ್. “ನಾನು ನನ್ನ ಪೂರ್ಣ ಶಕ್ತಿ ಸಾಮರ್ಥ್ಯಗಳನ್ನು ಉಪ ಯೋಗಿಸಿಕೊಳ್ಳಲು ಶಕ್ತನಾಗಿದ್ದೇನೆಯೇ? ನಾನು ಏನಾಗಿದ್ದೇನೆಯೋ ಅದರ ಸಂಪೂರ್ಣ ಸಾಧ್ಯತೆಗಳನ್ನು ಬಳಸಿಕೊಳ್ಳಲು ನನ್ನಿಂದ ಸಾಧ್ಯವಿದೆಯೇ?’ ಎಂಬ ಪ್ರಶ್ನೆಗಳನ್ನು ನಮಗೆ ನಾವು ಕೇಳಿಕೊಳ್ಳಬೇಕು. ಇದು ಸಾಧ್ಯವಾಗಬೇಕಿದ್ದರೆ ನಮ್ಮಲ್ಲಿ ವಾಸ್ತವದ ಗ್ರಹಿಕೆ ಸರಿಯಾಗಿರಬೇಕು ಮತ್ತು ವಿವೇಕ ಜಾಗೃತವಾಗಿರಬೇಕು.
ಶೆರ್ಲಾಕ್ ಹೋಮ್ಸ್ ಮತ್ತು ವಾಟ್ಸನ್ ನಿಮಗೆ ಗೊತ್ತಿರಬಹುದು. ಒಮ್ಮೆ ಹೀಗಾಯಿತು. ಇಬ್ಬರೂ ಪರ್ವತವೊಂದಕ್ಕೆ ಟ್ರೆಕಿಂಗ್ ಹೋಗಿದ್ದರು. ರಾತ್ರಿ ಟೆಂಟ್ ಹೂಡಿ ನಿದ್ರಿಸಿದರು. ನಡುರಾತ್ರಿ ಶೆರ್ಲಾಕ್ ಹೋಮ್ಸ್, ವಾಟ್ಸನ್‌ನನ್ನು ತಟ್ಟಿ ಎಬ್ಬಿಸಿದ. “ನಿನಗೇನು ಕಾಣಿಸುತ್ತಿದೆ’ ಎಂದು ಪ್ರಶ್ನಿಸಿದ. ವಾಟ್ಸನ್ ಕಣ್ಣುಜ್ಜಿ ಕೊಂಡು ಮಿನುಗುವ ತಾರೆ ಗಳಿರುವ ವಿಶಾಲ ಆಕಾಶ ಕಾಣಿಸುತ್ತಿದೆ’ ಎಂದ. “ಅದರ ಬಗ್ಗೆ ನಿನಗೇನನಿಸುತ್ತದೆ’ ಎಂಬುದು ಶೆರ್ಲಾಕ್ ಹೋಮ್ಸ್‌ನ ಪ್ರಶ್ನೆ. “ನಾಳೆಗಳು ನಮ್ಮ ಪಾಲಿಗೆ ಹೀಗೆ ಮಿನುಗುವ ಸುಂದರ ದಿನಗಳಾಗಿ ರುತ್ತವೆ’ ಎಂದು ವಾಟ್ಸನ್ ಹೇಳಿದ.
“ಮೂರ್ಖ, ನಮ್ಮ ಟೆಂಟನ್ನು ಯಾರೋ ಕದ್ದಿದ್ದಾರೆ’ ಎಂದನಂತೆ ಶೆರ್ಲಾಕ್ ಹೋಮ್ಸ್!
ಬದುಕನ್ನು ಅದು ಇರುವಂತೆ ಪರಿಗ್ರಹಿಸಿ ದರೆ ಮಾತ್ರ ಬದುಕಿನಲ್ಲಿ ಯಶಸ್ವಿಯಾಗಿ ಮುನ್ನಡೆಯುವುದು ಸಾಧ್ಯ. ನಾಳೆಗಳ ಬಗ್ಗೆ ಕನಸು ಕಟ್ಟಿಕೊಳ್ಳಬಾರದು ಎಂದಲ್ಲ. ಆದರೆ ನಮ್ಮ ಇಂದಿನ ಗ್ರಹಿಕೆ ಸರಿಯಾಗಿರಬೇಕು. ಇತರರಿಗಿಂತ ವೇಗವಾಗಿ ಮುಂದಕ್ಕೆ ಸಾಗುವುದು ಯಶಸ್ಸು ಎಂದುಕೊಳ್ಳುತ್ತೇವೆ. ಆದರೆ ನಾವು ವೇಗವಾಗಿದ್ದು, ನಮ್ಮ ಗ್ರಹಿಕೆ ಸರಿಯಿಲ್ಲದಿದ್ದರೆ ಕಲ್ಲಿಗೋ ಗೋಡೆಗೋ ಢಿಕ್ಕಿ ಹೊಡೆಯುವುದು ಖಚಿತ.
ನಾವು ಒಂದು ಕೆಲಸದಲ್ಲಿ, ಹೊಸ ವ್ಯಾಪಾರದಲ್ಲಿ, ಹೊಸ ಉದ್ಯೋಗದಲ್ಲಿ, ಒಟ್ಟಾರೆಯಾಗಿ ಬದುಕಿನಲ್ಲಿ ಯಶಸ್ವಿಯಾಗಬೇಕು ಎಂದಾದರೆ ಆಗ ನಮ್ಮ ವಿದ್ಯಾರ್ಹತೆಯಷ್ಟೇ ಮುಖ್ಯವಾಗುವುದಿಲ್ಲ. ನಮ್ಮ ಸುತ್ತಲಿನ ವಾಸ್ತವಗಳನ್ನು ನಾವು ಎಷ್ಟು ನೈಜವಾಗಿ ಗ್ರಹಿಸಲು ಶಕ್ತರಾಗಿದ್ದೇವೆ ಎಂಬುದರ ಮೇಲೆ ಯಶಸ್ಸು ನಿಂತಿದೆ. “ಇವತ್ತ’ನ್ನು ಮಾತ್ರ ಸರಿಯಾಗಿ ಗ್ರಹಿಸಬಲ್ಲ ಒಬ್ಟಾತ ಬೋಂಡಾ ಮಾರಾಟ ಮಾಡಿ ಹಣ ಗಳಿಸಬಹುದು. ನಾಳೆಯನ್ನು ಸರಿಯಾಗಿ ಗ್ರಹಿಸಬಲ್ಲವ ನಾಳೆ ಮಾರಾಟ ಮಾಡು ವುದಕ್ಕಾಗಿ ಇವತ್ತೂಂದು ಸೈಟ್ ಖರೀದಿಸಬಹುದು. ಹತ್ತು ವರ್ಷಗಳ ಆಚೆಗಿನದ್ದನ್ನು ಗ್ರಹಿಸ ಬಲ್ಲವನು ಇನ್ನೇನೋ ಒಂದು ಭಿನ್ನವಾದದ್ದನ್ನು ಮಾಡಬಹುದು.
ವೈಫಲ್ಯಗಳನ್ನು ಅನು ಭವಿಸುವವರಲ್ಲಿ ಎಷ್ಟೋ ಮಂದಿ ಒಳ್ಳೆಯ ವಿದ್ಯಾರ್ಹತೆ ಹೊಂದಿ ರುತ್ತಾರೆ, ಬುದ್ಧಿವಂತರಾಗಿರುತ್ತಾರೆ, ಹಣವೂ ಇರುತ್ತದೆ. ಆದರೂ ಸರಿಯಾದ ಸಮಯದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಸೋಲುತ್ತಾರೆ. ಯಶಸ್ಸನ್ನು ಬಿತ್ತಿ ಬೆಳೆದು ಫಲ ಉಣ್ಣುವವರು ಸಾಧಾರಣ ಬುದ್ಧಿಮತ್ತೆಯವರಾಗಿ ರಬಹುದು. ಆದರೆ ಅವರ ವಾಸ್ತವದ ಗ್ರಹಿಕೆ ಸ್ಪಷ್ಟವಾಗಿರುತ್ತದೆ.
ಹಾಗಾಗಿ ನಾವು ಕೇವಲ ಯಶಸ್ಸಿಗಾಗಿ ಕಾತರಿಸಬಾರದು. ಬದಲಾಗಿ ನಮ್ಮ ಗ್ರಹಿಕೆ, ಸಾಮರ್ಥ್ಯ, ಸ್ಪರ್ಧಾತ್ಮಕತೆಗಳನ್ನು ಅತ್ಯುಚ್ಚ ಮಟ್ಟಕ್ಕೆ ಎತ್ತರಿಸಿಕೊಳ್ಳಬೇಕು. ಆಗ ನಾವು ಏನೇ ಮಾಡಿದರೂ ಯಶಸ್ಸು ಒಲಿಯುತ್ತದೆ. ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ ಎನ್ನುತ್ತಾರಲ್ಲ, ಹಾಗೆ.