Advertisement
ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಕಾಪು ಕ್ಷೇತ್ರದಲ್ಲಿ ಹಲವು ಬೃಹತ್ ಯೋಜನೆಗಳು ಅನುಷ್ಠಾನಹಂತದಲ್ಲಿವೆ. ಜತೆಗೆ ಹೊಸ ಯೋಜನೆ ಗಳ ಅನುಷ್ಠಾನಕ್ಕೆ ರಾಜ್ಯ ಹಣಕಾಸು ಇಲಾಖೆಯ ಮಂಜೂರಾತಿ ಅಗತ್ಯವಿದ್ದು, ಸರಕಾರದ ಸೂಚನೆಯಂತೆ ಉಸ್ತುವಾರಿ ಕಾರ್ಯದರ್ಶಿ ಭೇಟಿ ನೀಡಿದ್ದಾರೆ. ಹೆಜಮಾಡಿ ಬಂದರು, ಮಿನಿ ವಿಧಾನ ಸೌಧ ನಿರ್ಮಾಣ, ಕುರ್ಕಾಲು ಕುಡಿ ಯುವ ನೀರಿನ ಯೋಜನೆ, ಬೀಚ್ ಅಭಿವೃದ್ಧಿ ಕುರಿತು ಚರ್ಚಿಸಲಾಗಿದೆ ಎಂದವರು ತಿಳಿಸಿದರು.
ಪಾದೂರು ಐಎಸ್‌ಪಿಆರ್‌ಎಲ್ ಯೋಜನೆಯ ಪ್ರಥಮ ಹಂತದ ಯೋಜನೆಯ ಅನುಷ್ಠಾನ ಸಂದರ್ಭ ನಡೆಸಿರುವ ಬಂಡೆ ಸ್ಫೋಟದಿಂದ ತೊಂದರೆಗೊಳಗಾದ ಸಂತ್ರಸ್ತರಿಗೆ ಈವರೆಗೂ ಪೂರ್ಣ ನಷ್ಟ ಪರಿಹಾರ ನೀಡಿಲ್ಲ. ಈಗ ಸರಕಾರ ಎರಡನೇ ಹಂತದ
ಯೋಜನೆಯ ವಿಸ್ತರಣೆಗೆ ಮುಂದಾಗಿರುವುದು ಸರಿಯಲ್ಲ. ಅದರೊಂದಿಗೆ ಜಮೀನು ಕಳೆದುಕೊಳ್ಳುವ ರೈತರಿಗೆ ನೀಡುವ ಭೂ ಮೌಲ್ಯವನ್ನೂ ಹೆಚ್ಚಿಸಬೇಕು ಎಂದು ಉಡುಪಿ ಜಿ.ಪಂ.ಸದಸ್ಯೆ ಶಿಲ್ಪಾ ಜಿ. ಸುವರ್ಣ ಅವರು ಉಸ್ತುವಾರಿ ಕಾರ್ಯದರ್ಶಿಯವರಲ್ಲಿ ಮನವಿ ಮಾಡಿದರು. ಜಿಲ್ಲಾಧಿಕಾರಿ ಜಿ. ಜಗದೀಶ್, ತಹಶೀಲ್ದಾರ್ ಮಹಮ್ಮದ್ ಇಸಾಕ್, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವಡ, ಕಂದಾಯ ಪರಿವೀಕ್ಷಕ ಕೆ. ರವಿಶಂಕರ್, ಉಪ ತಹಶೀಲ್ದಾರ್ ಚಂದ್ರಹಾಸ ಬಂಗೇರ, ಪ್ರವಾಸೋ ದ್ಯಮ ಇಲಾಖೆಯ ಸಹಾಯಕ ನಿರ್ದೇಶಕ
ಚಂದ್ರಶೇಖರ ನಾಯಕ್, ಮೆಸ್ಕಾಂ ಅಧಿಕಾರಿ ಹರೀಶ್ ಕುಮಾರ್, ಪುರಸಭೆ ಸದಸ್ಯರಾದ ಅನಿಲ್ ಕುಮಾರ್, ಮಮತಾ ಸಾಲ್ಯಾನ್, ವಿವಿಧ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
Related Articles
ಕಾಪು ತಾಲೂಕಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 3 ಕೋ. ರೂ. ಅನುದಾನ ಮಂಜೂರಾಗಿದೆ. 6 ಕೋ. ರೂ.ವೆಚ್ಚದ ಹೊಸ ಯೋಜನೆಯೂ ಸಿದ್ಧಗೊಳ್ಳು ತ್ತಿದೆ. ಈ ಯೋಜನೆಗಳಡಿ ಪಡುಬಿದ್ರಿ ಮತ್ತು ಕಾಪು ಬೀಚ್‌ಗಳನ್ನು ಸಮಗ್ರ ಅಭಿವೃದ್ಧಿಗೆ
ಯೋಜನೆ ರೂಪಿಸಲಾಗಿದ್ದು, ಬ್ಲೂ ಫ್ಲಾ ಗ್ ಯೋಜನೆಯಡಿ ಪಡುಬಿದ್ರಿ ಬೀಚ್‌ನ್ನು ರಾಜ್ಯದಲ್ಲೇ ಮಾದರಿಯಾಗಿ ಅಭಿವೃದ್ಧಿಗೊಳಿಸಲಾಗುವುದು. ಮಿನಿ ವಿಧಾನಸೌಧ ನಿರ್ಮಾಣ ಯೋಜನೆಯ ಯೋಜನ ಪಟ್ಟಿ ಅಂತಿಮ
ಹಂತದಲ್ಲಿದ್ದು, ಕಾಮಗಾರಿಗೆ ಶೀಘ್ರ ಚಾಲನೆ ದೊರಕಲಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಹೇಳಿದರು.
Advertisement