Advertisement

ದ್ವಿತೀಯ ಪಿಯು ಪರೀಕ್ಷೆ: ಶುಲ್ಕ ಪಾವತಿ ಅವಧಿ ವಿಸ್ತರಣೆ

09:14 PM Mar 09, 2022 | Team Udayavani |

ಬೆಂಗಳೂರು: 2022ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳು ಹಾಗೂ ಅನುತ್ತೀರ್ಣವಾಗಿರುವ ಮತ್ತು ಫ‌ಲಿತಾಂಶ ತಿರಸ್ಕರಿಸಿರುವ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಸಂದಾಯ ಮಾಡಲು ಪದವಿಪೂರ್ವ ಶಿಕ್ಷಣ ಇಲಾಖೆಯು ಕೊನೆಯ ಅವಕಾಶ ನೀಡಿದೆ.

Advertisement

ಪರೀಕ್ಷಾ ಶುಲ್ಕದ ಜೊತೆಗೆ 500 ರೂ. ದಂಡಶುಲ್ಕ, 700 ರೂ. ವಿಶೇಷ ಶುಲ್ಕ ಮತ್ತು 1,320 ರೂ.ಗಳ ಮತ್ತೂಂದು ವಿಶೇಷ ಶುಲ್ಕವನನ್ನು ಮಾ.12ರೊಳಗೆ ಪಾವತಿಸಲು ಅವಕಾಶ ನೀಡಲಾಗಿದೆ. ಕಾಲೇಜಿನವರು ಶುಲ್ಕವನ್ನು ಖಜಾನೆಗೆ ಸಂದಾಯ ಮಾಡಲು ಮಾ.14, ಸ್ಯಾಟ್ಸ್‌ ಪೋರ್ಟಲ್‌ನಲ್ಲಿ ಭರ್ತಿ ಮಾಡಲು ಮಾ.15 ಮತ್ತು ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಸಲ್ಲಿಸಲು ಮಾ.16 ಕೊನೆಯ ದಿನವಾಗಿದೆ ಎಂದು ತಿಳಿಸಿದೆ.

ಪರೀಕ್ಷಾ ಶುಲ್ಕ ಪಾವತಿಸಲು ಈ ವರೆಗೆ ಜ.31 ಕೊನೆಯ ದಿನವಾಗಿತ್ತು. ಇದೀಗ ಪರೀಕ್ಷಾ ದಿನಾಂಕ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ಹಾಗೂ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಪಾವತಿಸಲು ಅವಕಾಶ ನೀಡುವಂತೆ ಮನವಿಗಳು ಬಂದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಮತ್ತೊಂದು ಅವಕಾಶ ಮಾಡಿಕೊಡಲಾಗಿದೆ ಎಂದು ಪಿಯು ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next