Advertisement
ಆರ್‌ಸಿಬಿ ಪಾಲಿಗೆ ಇದು ಸೇಡಿನ ಪಂದ್ಯ. ಎ. 6ರಂದು “ಈಡನ್ ಗಾರ್ಡನ್ಸ್’ನಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಕೆಕೆಆರ್ 81 ರನ್ನುಗಳಿಂದ ಬೆಂಗಳೂರು ತಂಡ ವನ್ನು ಮಗುಚಿತ್ತು. ಇದು ಪ್ರಸಕ್ತ ಋತುವಿನಲ್ಲಿ ಕೋಲ್ಕತಾಕ್ಕೆ ಒಲಿದ ಮೊದಲ ಜಯವೂ ಆಗಿತ್ತು. ಇದಕ್ಕೀಗ ಆರ್‌ಸಿಬಿ ಪ್ರತಿಕಾರ ತೀರಿಸಬೇಕಿದೆ.
ಆರ್‌ಸಿಬಿ ಕೇವಲ ಇಬ್ಬರು, ತಪ್ಪಿದರೆ ಮೂವರು ಬ್ಯಾಟರ್‌ಗಳನ್ನು ನೆಚ್ಚಿಕೊಂಡಿರುವ ತಂಡ. ಡು ಪ್ಲೆಸಿಸ್, ಕೊಹ್ಲಿ, ಮ್ಯಾಕ್ಸ್‌ವೆಲ್ ಬಿಟ್ಟರೆ ಉಳಿದವರೆಲ್ಲ ಲೆಕ್ಕದ ಭರ್ತಿ ಗೆಂಬಂತೆ ಇದ್ದಾರೆ. ಅದರಲ್ಲೂ ರಾಜಸ್ಥಾನ್ ವಿರುದ್ಧ ಕೊಹ್ಲಿ ಸೊನ್ನೆ ಸುತ್ತಿ ಹೋಗಿದ್ದರು. ಡು ಪ್ಲೆಸಿಸ್- ಮ್ಯಾಕ್ಸ್‌ವೆಲ್ ಕ್ರೀಸ್ ಆಕ್ರಮಿಸಿಕೊಂಡು ಸ್ಫೋಟಿಸದೆ ಹೋಗಿದ್ದರೆ ಏನಾಗುತ್ತಿತ್ತು ಎಂಬುದನ್ನು ಒಮ್ಮೆ ಯೋಚಿಸಬೇಕಿದೆ. ಇದಕ್ಕೆ ಪಕ್ಕದಲ್ಲೇ ನಿದರ್ಶನವಿದೆ. ಕೆಕೆಆರ್ ವಿರುದ್ಧ 205 ರನ್ ಚೇಸಿಂಗ್ ವೇಳೆ ಆರ್‌ಸಿಬಿ 17.4 ಓವರ್‌ಗಳಲ್ಲಿ 123ಕ್ಕೆ ಮಗುಚಿತ್ತು. ಕೊಹ್ಲಿ 21, ಡು ಪ್ಲೆಸಿಸ್ 23, ಮ್ಯಾಕ್ಸ್‌ವೆಲ್ 5 ರನ್ನಿಗೆ ವಿಕೆಟ್ ಒಪ್ಪಿಸಿದ್ದರು. ಕೆಕೆಆರ್‌ಗೆ ಸೋಲಿನೇಟು ನೀಡಬೇಕಾದರೆ ಈ ಮೂವರು ಸಿಡಿದು ನಿಲ್ಲಬೇಕಿದೆ. ಹಾಗೆಯೇ ತಂಡದ ಸಂಯೋಜನೆಯಲ್ಲಿ ಕೆಲವು ಬದಲಾವಣೆ ಮಾಡಿಕೊÛಬೇಕಾದ ಅಗತ್ಯವೂ ಇದೆ. ವನಿಂದು ಹಸರಂಗ ಬದಲು ಮೈಕಲ್ ಬ್ರೇಸ್‌ವೆಲ್ ಸೇವೆ ಬೇಕಿದೆ. ಈ ಕಿವೀಸ್ ಸವ್ಯಸಾಚಿಯ ಫಿನಿಶಿಂಗ್ ರೋಲ್ ಗಮನಾರ್ಹ ಮಟ್ಟದಲ್ಲಿದೆ.
Related Articles
ಆಸೀಸ್ ವೇಗಿ ಜೋಶ್ ಹೇಝಲ್‌ವುಡ್ ಈ ಪಂದ್ಯದ ಮೂಲಕ 2023ರ ಐಪಿಎಲ್‌ಗೆ ರಂಗಪ್ರವೇಶ ಮಾಡುವ ಸಾಧ್ಯತೆ ಇದೆ. ಆಗ ಡೇವಿಡ್ ವಿಲ್ಲಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಏನೇ ಆದರೂ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆ ಬಗೆಹರಿದೀತೇ ಎಂಬುದು ಪ್ರಶ್ನೆಯಾ ಗಿಯೇ ಉಳಿಯುತ್ತದೆ.
ಕಳೆದ ಪಂದ್ಯದಲ್ಲಿ ರಾಜಸ್ಥಾನ್ 189 ರನ್ ಬೆನ್ನಟ್ಟಲಿಳಿದಾಗ ಆರ್‌ಸಿಬಿ ಬೌಲಿಂಗ್ ತಕ್ಕಮಟ್ಟಿಗೆ ನಿಯಂತ್ರಣ ಸಾಧಿಸಿತ್ತು. ಕೆಕೆಆರ್ ವಿರುದ್ಧ ಇದಕ್ಕೂ ಮೇಲ್ಮಟ್ಟದ ಪ್ರದರ್ಶನ ನೀಡಬೇಕಿದೆ.
Advertisement
ಸತತ 4 ಸೋಲು!ಕೆಕೆಆರ್ ಸಾಕಷ್ಟು ಬಿಗ್ ಹಿಟ್ಟರ್, ಆಲ್‌ರೌಂಡರ್‌ಗಳನ್ನು ಹೊಂದಿರುವ ತಂಡ. ಸ್ಪಿನ್ ಬೌಲಿಂಗ್ ಅಪಾಯಕಾರಿ ಅಸ್ತ್ರವಾಗಿದೆ. ರೆಹಮಾನುಲ್ಲ ಗುರ್ಬಜ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ರಿಂಕು ಸಿಂಗ್, ಆ್ಯಂಡ್ರೆ ರಸೆಲ್, ಕಳೆದ ಪಂದ್ಯದಲ್ಲಿ ಆರ್‌ಸಿಬಿಯನ್ನು ಕಾಡಿದ ಶಾದೂìಲ್ ಠಾಕೂರ್, ಸುಯಶ್ ಶರ್ಮ ಅವರೆಲ್ಲ ಕೋಲ್ಕತಾ ತಂಡದ ಬೆನ್ನೆಲುಬಾಗಿದ್ದಾರೆ. ಆದರೂ ಈ ತಂಡ ಕಳೆದ ಸತತ 4 ಪಂದ್ಯಗಳಲ್ಲಿ ಮುಗ್ಗರಿಸಿ ಏಟು ಮಾಡಿಕೊಂಡಿದ್ದನ್ನು ನಂಬಲಾಗುತ್ತಿಲ್ಲ. ಹೈದರಾಬಾದ್ ವಿರುದ್ಧ 23 ರನ್, ಮುಂಬೈ ವಿರುದ್ಧ 5 ವಿಕೆಟ್, ಡೆಲ್ಲಿ ವಿರುದ್ಧ 4 ವಿಕೆಟ್, ಚೆನ್ನೈ ವಿರುದ್ಧ 49 ರನ್ನುಗಳಿಂದ ಎಡವಿತ್ತು. ನಾಯಕ ಶ್ರೇಯಸ್ ಅಯ್ಯರ್, ಬಾಂಗ್ಲಾದ ಅನುಭವಿ ಆಲ್‌ರೌಂಡರ್ ಶಕಿಬ್ ಅಲ್ ಹಸನ್ ಅವರ ಗೈರು ಕೆಕೆಆರ್‌ಗೆ ಘಾಸಿ ಮಾಡಿದ್ದನ್ನು ಒಪ್ಪಲೇಬೇಕು