Advertisement
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ಪ್ರವೇಶ ಪತ್ರ, ನೀಲಿ ಅಥವಾ ಕಪ್ಪು ಬಣ್ಣದ ಪೆನ್, ಸ್ಕೇಲ್, ಪೆನ್ಸಿಲ್, ಸಿಂಪಲ್ ಕ್ಯಾಲ್ಕುಲೇಟರ್, ಮುಳ್ಳು ಮಾತ್ರ ಹೊಂದಿರುವ ಸಾಮಾನ್ಯ ಕೈಗಡಿಯಾರ, ಟ್ರಾನ್ಸ್‌ಪರೆಂಟ್ ವಾಟರ್ ಬಾಟಲ್, ಔಷಧ, ಕನ್ನಡ ಮತ್ತು ಬಸ್ ಪಾಸ್ ಮರೆಯದೆ ತೆಗೆದುಕೊಂಡು ಹೋಗ ಬೇಕು. ಇದನ್ನು ಹೊರತುಪಡಿಸಿ, ಅಗತ್ಯವಿಲ್ಲದ ಯಾವುದೇ ವಸ್ತು ಕೊಂಡೊ ಯ್ಯಲು ಅವಕಾಶ ಇಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
ಬೆಂಗಳೂರು: ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಮ್ಮ ಫೇಸ್‌ಬುಕ್ ಖಾತೆ ಮೂಲಕ ಅಭಯ ಹಾಗೂ ನೈತಿಕ ಬಲ ತುಂಬಿದ್ದಾರೆ. ಈ ಮೂಲಕ ಪರೀಕ್ಷಾ ಭದ್ರತಾ ಕ್ರಮ ಮತ್ತು ಸರ್ಕಾರದಿಂದ ತೆಗೆದುಕೊಂಡಿರುವ ಮುನ್ನೆಚ್ಚರಿಕೆ ಕ್ರಮದ ಕುರಿತು ಮಕ್ಕಳ, ಪಾಲಕ ಪೋಷಕರ ಗಮನಕ್ಕೆ ತಂದಿದ್ದಾರೆ.
Related Articles
Advertisement
ವಿದ್ಯಾರ್ಥಿಗಳೇ ಗಮನಿಸಿ..: ಬೆಳಗ್ಗೆ ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಹೊರಡುವ ಮುನ್ನ ಪ್ರವೇಶ ಪತ್ರ, ಪೆನ್, ಸ್ಕೇಲ್, ಸಾಮಾನ್ಯ ಕ್ಯಾಲ್ಕುಲೇಟರ್, ಸಾಮಾನ್ಯ ಕೈಗಡಿಯಾರ, ಔಷಧ, ಕನ್ನಡ ಇತ್ಯಾದಿ ಮರೆಯದೇ ಕೊಂಡೊಯ್ಯಬೇಕು. ಪ್ರವೇಶ ಪತ್ರ ಇಲ್ಲದೇ ಪರೀಕ್ಷಾ ಕೇಂದ್ರ ಒಳಗೆ ಪ್ರವೇಶವಿಲ್ಲ. ಗೊಂದಲ ಮಾಡಿಕೊಳ್ಳದೇ ಪ್ರವೇಶ ಪತ್ರ ಮತ್ತು ಇತರೆ ಅಗತ್ಯ ವಸ್ತು ತಮ್ಮ ಬಳಿಯೇ ಇರುವುದನ್ನು ಖಚಿತಪಡಿಸಿಕೊಂಡೇ ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಹೊರಡಬೇಕು. ಅಲ್ಲದೆ, ಪಾಲಕ, ಪೋಷಕರೂ ಮಕ್ಕಳು ಮನೆಯಿಂದ ಪರೀಕ್ಷೆಗೆ ಹೊರಡುವಾಗ ಅಂತಿಮ ಹಂತದ ಪರಿಶೀಲನೆ ನಡೆಸುವುದು ಉತ್ತಮ ಎಂದು ತಿಳಿಸಲಾಗಿದೆ.
ವಿದ್ಯಾರ್ಥಿ ಜೀವನದ ಬಹುಮುಖ್ಯ ಘಟ್ಟವಾದ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳ ಅಗಣಿತ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ. ಭವಿಷ್ಯ ಉಜ್ವಲವಾಗಲಿ. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ನಾಡಿನ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ. ಪರೀಕ್ಷಾ ಯಶಸ್ಸು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮೆಟ್ಟಿಲಾಗಲಿದೆ.-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ