Advertisement

12ನೇ ತರಗತಿ ಪರೀಕ್ಷೆ: ಗುರುವಾರ ನಿರ್ಧಾರ

01:13 AM Jun 01, 2021 | Team Udayavani |

ಹೊಸದಿಲ್ಲಿ : ಕೊರೊನಾ ನಡುವೆ 12ನೇ ತರಗತಿ ಪರೀಕ್ಷೆಗಳನ್ನು ನಡೆಸಬೇಕೇ, ಬೇಡವೇ ಎಂಬ ಬಗ್ಗೆ ಇನ್ನೆರಡು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಅರಿಕೆ ಮಾಡಿಕೊಂಡಿದೆ.

Advertisement

ಸಿಬಿಎಸ್‌ಇ ಮತ್ತು ಸಿಐಎಸ್‌ ಸಿಇ ಪರೀಕ್ಷೆ ರದ್ದು ಮಾಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ವೇಳೆ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಈ ಮಾಹಿತಿ ನೀಡಿದ್ದಾರೆ. ಗುರುವಾರ(ಜೂ.3)ದ ವರೆಗೆ ಕಾಲಾವಕಾಶ ನೀಡಿ ಎಂದೂ ಕೋರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ| ಎ.ಎಂ.ಖಾನ್ವಿಳ್ಕರ್‌ ಮತ್ತು ನ್ಯಾ| ದಿನೇಶ್‌ ಮಹೇಶ್ವರಿ ಅವರನ್ನೊಳಗೊಂಡ ನ್ಯಾಯಪೀಠ, “ನೀವು ನಿರ್ಧಾರ ಕೈಗೊಳ್ಳಿ. ಆದರೆ ಕಳೆದ ವರ್ಷ 12ನೇ ತರಗತಿಯ ಬಾಕಿ ವಿಷಯಗಳ ಪರೀಕ್ಷೆಯನ್ನು ಕೊರೊನಾ ಹಿನ್ನೆಲೆ ರದ್ದು ಮಾಡಿದ್ದೀರಿ. ಆ ನೀತಿಯಿಂದ ನೀವು ಈ ಬಾರಿ ಹೊರಬರುವುದಾದರೆ ಅದಕ್ಕೆ ಸೂಕ್ತ ಕಾರಣಗಳನ್ನು ನೀಡಬೇಕು’ ಎಂದು ಸೂಚಿಸಿತು.

ಕಳೆದ ವರ್ಷದ ಜುಲೈ 1ರಿಂದ 15ರ ವರೆಗೆ ನಿಗದಿಯಾಗಿದ್ದ 12ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡುವ ನಿರ್ಧಾರಕ್ಕೆ ಸಿಬಿಎಸ್‌ಇ ಮತ್ತು ಸಿಐಎಸ್‌ ಸಿಇ ಬಂದಿದ್ದವು. ಜತೆಗೆ ವಿದ್ಯಾರ್ಥಿಗಳ ಮೌಲ್ಯಮಾಪನಕ್ಕೆ ನಿರ್ದಿಷ್ಟ ವಿಧಾನ ಅನುಸರಿಸುವುದಾಗಿಯೂ ಹೇಳಿದ್ದವು. ಇದಕ್ಕೆ 2020ರ ಜೂ. 26ರಂದು ಸುಪ್ರೀಂ ಕೋರ್ಟ್‌ ಸಮ್ಮತಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next