Advertisement
ರಾಜ್ಯಶಾಸ್ತ್ರದಲ್ಲಿ ಹೊಸದಾಗಿ 4,555 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 135 ಮಂದಿ ಗೈರಾಗಿದ್ದರು. ಪುನರಾ ವರ್ತಿತ ವಿಭಾಗದಲ್ಲಿ 55 ವಿದ್ಯಾರ್ಥಿಗಳು ಪರೀಕ್ಷೆ ಬರೆ ದಿದ್ದು, 12 ಮಂದಿ ಗೈರಾಗಿದ್ದರು. ಸಂಖ್ಯಾಶಾಸ್ತ್ರದಲ್ಲಿ ಹೊಸದಾಗಿ 5,118 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 21 ಮಂದಿ ಗೈರಾಗಿದ್ದರು. 32 ಮಂದಿ ಪುನರಾವರ್ತಿತ ವಿದ್ಯಾ ರ್ಥಿಗಳು ಪರೀಕ್ಷೆ ಬರೆದಿದ್ದು, 9 ಮಂದಿ ಗೈರಾಗಿದ್ದರು ಎಂದು ಪ. ಪೂ. ಶಿಕ್ಷಣ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ಉಡುಪಿ: ಜಿಲ್ಲೆಯಲ್ಲಿ ಶನಿವಾರ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 86 ವಿದ್ಯಾರ್ಥಿಗಳು ಗೈರಾಗಿದ್ದು, ಯಾವುದೇ ಅಕ್ರಮ, ಡಿಬಾರ್ ದಾಖಲಾಗಿಲ್ಲ. ರಾಜ್ಯಶಾಸ್ತ್ರ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 1,681 ವಿದ್ಯಾರ್ಥಿಗಳಲ್ಲಿ 1,620 ಪರೀಕ್ಷೆ ಬರೆದಿದ್ದಾರೆ. ಸಂಖ್ಯಾಶಾಸ್ತ್ರ ಪರೀಕ್ಷೆಗೆ 2,907 ವಿದ್ಯಾರ್ಥಿಗಳು ನೋಂದಾ ಯಿಸಿಕೊಂಡಿದ್ದು, 2,882 ಮಂದಿ ಹಾಜರಾಗಿದ್ದಾರೆ.