Advertisement

ಇಂದಿನಿಂದ ದ್ವಿತೀಯ ಪಿಯು ತರಗತಿ

12:44 PM May 02, 2018 | Harsha Rao |

ಮಂಗಳೂರು: ವಿದ್ಯಾರ್ಥಿಗಳು, ಪೋಷಕರು ಮತ್ತು ಉಪನ್ಯಾಸಕರ ತೀವ್ರ ಅಸಮಾಧಾನದ ನಡುವೆಯೇ ದ್ವಿತೀಯ ಪಿಯುಸಿ ತರಗತಿಗಳು ಬುಧವಾರ ಆರಂಭವಾಗುತ್ತಿವೆ. ಒಂದು ತಿಂಗಳ ರಜೆಯನ್ನು ಕಡಿತಗೊಳಿಸಿದ ಪ.ಪೂ. ಶಿಕ್ಷಣ ಇಲಾಖೆ ಕ್ರಮದಿಂದ ಬೇಸರವಾದರೂ ಅನಿವಾರ್ಯವಾಗಿ ವಿದ್ಯಾರ್ಥಿಗಳು ಕಾಲೇಜಿಗೆ ತೆರಳುತ್ತಿದ್ದಾರೆ.

Advertisement

ಸಾಮಾನ್ಯವಾಗಿ ಫೆಬ್ರವರಿ, ಮಾರ್ಚ್‌ನಲ್ಲಿ ಪಿಯುಸಿ ಪರೀಕ್ಷೆಗಳು ಮುಗಿದು ಎಪ್ರಿಲ್‌, ಮೇ ತಿಂಗಳಿಡೀ ವಿದ್ಯಾರ್ಥಿಗಳಿಗೆ ರಜಾ ಅವಧಿಯಾಗಿದ್ದು, ಜೂನ್‌ 1ರಿಂದ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತದೆ. ಆದರೆ ಈ ಬಾರಿ ಪಿಯುಸಿ ಶೈಕ್ಷಣಿಕ ವೇಳಾಪಟ್ಟಿಯನ್ನು ದಿಢೀರ್‌ ಬದಲಾವಣೆ ಮಾಡಿರುವ ಪ.ಪೂ. ಶಿಕ್ಷಣ ಇಲಾಖೆ ಜೂನ್‌ 1ರ ಬದಲಾಗಿ ಮೇ 2ರಂದೇ ತರಗತಿಗಳನ್ನು ಆರಂಭಿಸಲು ಕಾಲೇಜುಗಳಿಗೆ ಸೂಚನೆ ನೀಡಿದೆ. ಅದರಂತೆ ಬುಧವಾರದಿಂದ ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next