Advertisement

ಅತ್ಯಾಚಾರ : ಎರಡನೇ ಪಾದ್ರಿಯನ್ನು ಬಂಧಿಸಿದ ಕೇರಳ ಪೊಲೀಸರು

06:39 PM Jul 13, 2018 | Team Udayavani |

ತಿರುವನಂತಪುರ : ಕೇರಳದ ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾಗಿರುವ ಎರಡನೇ ಪಾದ್ರಿಯನ್ನು ಕೇರಳ ಪೊಲೀಸರು ಇಂದು ಬಂಧಿಸಿದ್ದಾರೆ.

Advertisement

ಈ ಪ್ರಕರಣ ಇನ್ನೂ ಇಬ್ಬರು ಪಾದ್ರಿಗಳು ತಲೆಮರೆಸಿಕೊಂಡಿದ್ದು ಅವರಿಗಾಗಿ ಶೋಧ ಕಾರ್ಯಾಚರಣೆ ನಡೆದಿದೆ. 

ಅತ್ಯಾಚಾರ ಆರೋಪಿಯಾಗಿರುವ ಪಾದ್ರಿ ಜಾನ್ಸನ್‌ ಪಿ ಮ್ಯಾಥ್ಯೂ ಅವರನ್ನು ಜಿಲ್ಲೆಯ ಕೊಳಂಶೇರಿಯಲ್ಲಿ  ಬಂಧಿಸಲಾಗಿದ್ದು ಅವರನ್ನು  ಕ್ರೈಮ್‌ ಬ್ರಾಂಚ್‌ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ ಎಂದು ರಾಜಕೀಯ ಮೂಲಗಳು ತಿಳಿಸಿವೆ. ಇವರ ನಿರೀಕ್ಷಣಾ ಜಾಮೀನು ಅರ್ಜಿ ಕೋರ್ಟಿನಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ. 

Advertisement

Udayavani is now on Telegram. Click here to join our channel and stay updated with the latest news.

Next