Advertisement
2ನೇ ಏಕದಿನ ಪಂದ್ಯವನ್ನು 15 ರನ್‌ಗಳಿಂದ ಜಯಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಯುವಿ- ಧೋನಿ ಸಿಡಿಲಬ್ಬರದ ಬ್ಯಾಟಿಂಗ್‌ನಿಂದ ರನ್ ಮಳೆಯನ್ನೇ ಹರಿಸಿತು. 50 ಓವರ್‌ಗಳಲ್ಲಿ 6 ವಿಕೆಟ್‌ಗೆ ಬರೋಬ್ಬರಿ 381 ರನ್ ಪೇರಿಸಿತು.
Related Articles
Advertisement
ಧೋನಿ- ಯುವಿ ಮ್ಯಾಜಿಕ್: ಮೊನ್ನೆ ಮೊನ್ನೆಯ ತನಕ ಯುವರಾಜ್-ಧೋನಿ ಜತೆಯಾಗಿ ಆಡುತ್ತಾರೆ ಎಂಬುದು ಕಲ್ಪನೆಗೂ ನಿಲುಕದ ಸಂಗತಿಯಾಗಿತ್ತು. ಆದರೆ ಗುರುವಾರ ಇವರಿಬ್ಬರು ಸೇರಿಕೊಂಡು ಭಾರತೀಯ ಕ್ರಿಕೆಟನ್ನು ಗತ ಕಾಲಕ್ಕೆ ಕೊಂಡೊಯ್ದರು. ನಿರ್ದಿಷ್ಟವಾಗಿ ಹೇಳಬೇಕೆಂದರೆ, 2011ರ ವಿಶ್ವಕಪ್ ಪಂದ್ಯಾವಳಿಯನ್ನು ನೆನಪಿಸಿದರು ಎನ್ನಬಹುದು! ಯುವಿ ಬ್ಯಾಟಿಂಗ್ 2011ರ ವರ್ಲ್ಡ್ಕಪ್ ಟೂರ್ನಿಯ ಮುಂದುವರಿದ ಭಾಗದಂತಿತ್ತು. ಅವರ ಕೊನೆಯ ಶತಕ ಕೂಡ ಆ ವಿಶ್ವಕಪ್‌ನಲ್ಲೇ ದಾಖಲಾಗಿತ್ತೆಂಬುದನ್ನು ನೆನಪಿಸಿಕೊಳ್ಳಬಹುದು. ಭಾರೀ ಸ್ಪಿರಿಟ್‌ನಲ್ಲಿದ್ದ ಯುವಿ ಇಂಗ್ಲೆಂಡ್ ಬೌಲರ್‌ಗಳನ್ನು ಕಣ್ಣು ಮುಚ್ಚಿಕೊಂಡು ದಂಡಿಸುತ್ತ ಹೋದರು.
“ಬಾರಾಬತಿ ಸ್ಟೇಡಿಯಂ’ನಲ್ಲಿ ಕಿಕ್ಕಿರಿದು ನೆರೆದಿದ್ದ ವೀಕ್ಷಕರು ಹುಚ್ಚೆದ್ದು ಕುಣಿಯಲಾರಂಭಿಸಿದರು. 98 ಎಸೆತಗಳಲ್ಲಿ ಯುವಿ ಶತಕ ಪೂರ್ತಿಗೊಂಡಿತು. ಯುವರಾಜ್ ಸೆಂಚುರಿ ಪೂರ್ತಿಯಾಗುವುದನ್ನೇ ಧೋನಿ ಕಾಯುತ್ತಿದ್ದರೋ ಏನೋ. ಅಲ್ಲಿಯ ತನಕ ಜತೆಗಾರನಿಗೆ ಬೆಂಬಲ ನೀಡುತ್ತ ಇದ್ದ ಧೋನಿ, ಬಳಿಕ ಒಮ್ಮೆಲೇ ಸ್ಫೋಟಗೊಂಡರು.
ಯುವಿಗಿಂತ ಬಿರುಸಿನಿಂದ ಬ್ಯಾಟ್ ಬೀಸತೊಡಗಿದರು.106 ಎಸೆತಗಳಲ್ಲಿ ಶತಕವೂ ಪೂರ್ತಿಗೊಂಡಿತು.
ಯುವಿ-ಧೋನಿ ಹಲವು ಸಾಧನೆಯುವಿ-ಧೋನಿ ಒಂದೇ ಪಂದ್ಯದಲ್ಲಿ ಶತಕ ಬಾರಿಸಿದ “35 ಪ್ಲಸ್’ವಯಸ್ಸಿನ 2ನೇ ಜೋಡಿ ಎನಿಸಿಕೊಂಡಿತು. 2015ರ ವಿಶ್ವಕಪ್ ಕೂಟದ ಬಾಂಗ್ಲಾದೇಶ ಹಾಗೂ ಸ್ಕಾಟ್ಲೆಂಡ್ ಎದುರಿನ ಪಂದ್ಯದಲ್ಲಿ ಲಂಕೆಯ ದಿಲ್ಶನ್-ಸಂಗಕ್ಕರ ಈ ಸಾಧನೆ ಮಾಡಿದ್ದರು. ಯುವರಾಜ್-ಧೋನಿ ಸೇರಿಕೊಂಡು 10ನೇ ಶತಕದ ಜತೆಯಾಟದಾಖಲಿಸಿದರು. ಈ ಸಾಧನೆಗೈದ ಭಾರತದ 5ನೇ ಜೋಡಿ ಎನಿಸಿತು. ಉಳಿದವರೆಂದರೆ ಗಂಗೂಲಿ- ಸಚಿನ್ (26), ಸೆಹವಾಗ್-ಸಚಿನ್ (13),ದ್ರಾವಿಡ್-ಗಂಗೂಲಿ (11) ಮತ್ತು ದ್ರಾವಿಡ್-ಸಚಿನ್ (11). ಯುವಿ-ಧೋನಿ ಎಲ್ಲ ವಿಕೆಟ್‌ಗಳಿಗೆ ಅನ್ವಯಿಸುವಂತೆ ಭಾರತದ 5ನೇ ಅತೀ ದೊಡ್ಡ ಜತೆಯಾಟ ನಡೆಸಿದರು. ಯುವರಾಜ್-ಧೋನಿ ಏಕದಿನ ಇತಿಹಾಸದಲ್ಲಿ 4ನೇ ವಿಕೆಟಿಗೆ 2ನೇ ಸರ್ವಾಧಿಕ ರನ್ ಪೇರಿಸಿದರು (256 ರನ್). 1998ರಲ್ಲಿ ಜಿಂಬಾಬ್ವೆ ವಿರುದ್ಧ ಅಜರುದ್ದೀನ್-ಜಡೇಜ 275ರನ್ ಸಂಗ್ರಹಿಸಿದ್ದು ವಿಶ್ವದಾಖಲೆ. ಯುವರಾಜ್ ಇಂಗ್ಲೆಂಡ್ ಎದುರು 6ನೇ ಸರ್ವಾಧಿಕ ರನ್ ಬಾರಿಸಿದರು. 1984ರ ಮ್ಯಾಂಚೆಸ್ಟರ್ ಪಂದ್ಯದಲ್ಲಿ ವಿವಿಯನ್ ರಿಚರ್ಡ್ಸ್ ಮತ್ತು 2013ರ ಸೌತಾಂಪ್ಟನ್ ಪಂದ್ಯದಲ್ಲಿ ಮಾರ್ಟಿನ್ ಗಪ್ಟಿಲ್ ಅಜೇಯ 189 ರನ್ ಬಾರಿಸಿ ಜಂಟಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಧೋನಿ 3 ವರ್ಷಗಳ ಅನಂತರ ಮೊದಲ ಶತಕ ಹೊಡೆದರು. ಅವರು ಕೊನೆಯ ಸಲ ಮೂರಂಕೆಯ ಗಡಿ ಮುಟ್ಟಿದ್ದು ಆಸ್ಟ್ರೇಲಿಯ ವಿರುದಟಛಿದ 2013ರ ಮೊಹಾಲಿ ಮುಖಾಮುಖೀಯಲ್ಲಿ. ಸಚಿನ್ ಬಳಿಕ ಸ್ವದೇಶದಲ್ಲಿ
ಧೋನಿ 4 ಸಾವಿರ ರನ್
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ನಂತರ ಸ್ವದೇಶಿ ನೆಲದಲ್ಲಿ ಮಹೇಂದ್ರ ಸಿಂಗ್ ಧೋನಿ 4 ಸಾವಿರ ರನ್ ಗಡಿ ದಾಟಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಧೋನಿ 134 ರನ್ ಬಾರಿಸಿ ಈ ಮೈಲುಗಲ್ಲು ದಾಟಿದ್ದಾರೆ. ಭಾರತದಲ್ಲಿ ಈ ಸಾಧನೆ ಮಾಡಿದವರು ಇಬ್ಬರೇ ಆಟಗಾರರು. ಒಂದು ಸಚಿನ್ ತೆಂಡುಲ್ಕರ್ ಮತ್ತು ಈಗ ಧೋನಿ. ಸಚಿನ್ ಸ್ವದೇಶದಲ್ಲಿ 6976 ರನ್ ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ. ಉಳಿದಂತೆ ರಾಹುಲ್ ದ್ರಾವಿಡ್ 3406 ರನ್ ಬಾರಿಸಿ ಸ್ವದೇಶದಲ್ಲಿ ಅತೀ ಹೆಚ್ಚು ರನ್ ಬಾರಿಸಿದವರಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಯುವಿ ವೈಯಕ್ತಿಕ
ಶ್ರೇಷ್ಠ 150 ರನ್
ಕಟಕ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಯುವರಾಜ್ ಸಿಂಗ್ ವೈಯಕ್ತಿಕ ಶ್ರೇಷ್ಠ ರನ್
(150) ದಾಖಲಿಸಿದ್ದಾರೆ. ಈ ಹಿಂದೆ ಅವರು 2004ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ 139ರನ್ ಬಾರಿಸಿರುವುದೇ ದೊಡ್ಡ ಮೊತ್ತವಾಗಿತ್ತು. ಉಳಿದಂತೆ 2008ರಲ್ಲಿ ಇಂಗ್ಲೆಂಡ್ ವಿರುದ್ಧ ರಾಜ್‌ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ ಅಜೇಯ 138 ರನ್ ಬಾರಿಸಿದ್ದಾರೆ. ಗುರುವಾರ ಇಂಗ್ಲೆಂಡ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿದ ಯುವಿ 127 ಎಸೆತದಲ್ಲಿ 21 ಬೌಂಡರಿ, 3 ಸಿಕ್ಸರ್ ಸೇರಿದಂತೆ 150 ರನ್ ಬಾರಿಸಿದ್ದಾರೆ. 5 ವರ್ಷಗಳ ನಂತರ
ಯುವರಾಜ್ ಶತಕ
ಯುವರಾಜ್ ಸಿಂಗ್ 5 ವರ್ಷಗಳ ನಂತರ ಏಕದಿನ ಪಂದ್ಯದಲ್ಲಿ ಶತಕ ದಾಖಲಿಸಿದ್ದಾರೆ. ಇದಕ್ಕೂ ಮುನ್ನ ಅವರು ವೆಸ್ಟ್ ಇಂಡೀಸ್ ವಿರುದ್ಧ 2011ರಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಶತಕ (113 ರನ್) ದಾಖಲಿಸಿರುವುದೇ ಕೊನೆಯದಾಗಿತ್ತು. ಹೀಗಾಗಿ ದೀರ್ಘಕಾಲದ ನಂತರ ಯುವಿ ಶತಕ ಬಾರಿಸಿದಂತಾಗಿದೆ. ಗುರುವಾರ ಇಂಗ್ಲೆಂಡ್ ವಿರುದ್ಧ ಬಾರಿಸಿರುವುದು ಅವರ 14ನೇ ಶತಕವಾಗಿದೆ. 2003ರಲ್ಲಿ ಬಾಂಗ್ಲಾ ವಿರುದ್ಧ ಮೊದಲ ಶತಕ (102) ದಾಖಲಿಸಿದ್ದರು. ಪಂದ್ಯದ ತಿರುವು
ಮೊದಲು ಬ್ಯಾಟ್ ಮಾಡಿದ ಭಾರತ 25 ರನ್‌ಗೆ ಆರಂಭಿಕ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ಜತೆಯಾದ ಯುವರಾಜ್ ಸಿಂಗ್ ಮತ್ತು ಧೋನಿ 256 ರನ್ ಜತೆಯಾಟ ಆಡಿ ಭಾರತ ಬೃಹತ್ ಮೊತ್ತ ದಾಖಲಿಸುವಂತೆ ಮಾಡಿದರು. ಕೊನೆಯಲ್ಲಿ ಭಾರತೀಯರ ಬೌಲಿಂಗ್ ಪ್ರದರ್ಶನ ಕೂಡ ಪಂದ್ಯದ ತಿರುವಿಗೆ ಕಾರಣವಾಯ್ತು. ನಮ್ಮ ಬ್ಯಾಟಿಂಗ್ ಪ್ರದರ್ಶನ ಉತ್ತಮವಾಗಿತ್ತು. 25 ರನ್‌ಗೆ 3 ವಿಕೆಟ್ ಕಳೆದುಕೊಂಡರೂ 381 ರನ್‌ಗಳ ದೊಡ್ಡಮೊತ್ತವನ್ನು
ಸಂಗ್ರಹಿಸಿದ್ದು ಗೆಲುವಿಗೆ ನೆರವಾಯಿತು.
– ವಿರಾಟ್ ಕೊಹ್ಲಿ, ಭಾರತ ತಂಡದ ನಾಯಕ ಗೆಲುವಿನ ಸಮೀಪಕ್ಕೆ ಹೋಗಿ ಸೋಲುಂಡಿರುವುದು ನಿರಾಶೆ ಯಾಗಿದೆ. ಯುವಿ ಮತ್ತು ಧೋನಿಗೆ ಬೌಲಿಂಗ್ ಮಾಡುವುದು
ಸವಾಲಿನದ್ದಾಗಿತ್ತು. ನಾವು ಗೆಲುವಿಗಾಗಿ ಪ್ರಯತ್ನ ಹಾಕಿದ್ದೇವೆ.
– ಇಯಾನ್ ಮಾರ್ಗನ್, ಇಂಗ್ಲೆಂಡ್ ತಂಡದ ನಾಯಕ ಸ್ಕೋರ್‌ಪಟ್ಟಿ
* ಭಾರತ
ಕೆ.ಎಲ್. ರಾಹುಲ್ ಸಿ ಸ್ಟೋಕ್ಸ್ ಬಿ ವೋಕ್ಸ್ 5
ಶಿಖರ್ ಧವನ್ ಬಿ ವೋಕ್ಸ್ 11
ವಿರಾಟ್ ಕೊಹ್ಲಿ ಸಿ ಸ್ಟೋಕ್ಸ್ ಬಿ ವೋಕ್ಸ್ 8
ಯುವರಾಜ್ ಸಿಂಗ್ ಸಿ ಬಟ್ಲರ್ ಬಿ ವೋಕ್ಸ್ 150
ಎಂ.ಎಸ್. ಧೋನಿ ಸಿ ವಿಲ್ಲಿ ಬಿ ಪ್ಲಂಕೆಟ್ 134
ಕೇದಾರ್ ಜಾಧವ್ ಸಿ ಬಾಲ್ ಬಿ ಪ್ಲಂಕೆಟ್ 22
ಹಾರ್ದಿಕ್ ಪಾಂಡ್ಯ ಔಟಾಗದೆ 19
ರವೀಂದ್ರ ಜಡೇಜ ಔಟಾಗದೆ 16
ಇತರ 16
ಒಟ್ಟು (50 ಓವರ್‌ಗಳಲ್ಲಿ 6 ವಿಕೆಟಿಗೆ) 381
ವಿಕೆಟ್ ಪತನ: 1-14, 2-22, 3-25, 4-281, 5-323, 6-358.
ಬೌಲಿಂಗ್:
ಕ್ರಿಸ್ ವೋಕ್ಸ್ 10-3-60-4
ಡೇವಿಡ್ ವಿಲ್ಲಿ 5-0-32-0
ಜೇಕ್ ಬಾಲ್ 10-0-80-0
ಲಿಯಮ್ ಪ್ಲಂಕೆಟ್ 10-1-91-2
ಬೆನ್ ಸ್ಟೋಕ್ಸ್ 9-0-79-0
ಮೊಯಿನ್ ಅಲಿ 6-0-33-0 ಇಂಗ್ಲೆಂಡ್
ಜಾಸನ್ ರಾಯ್ ಬಿ ಜಡೇಜ 82
ಅಲೆಕ್ಸ್ ಹೇಲ್ಸ್ ಸಿ ಧೋನಿ ಬಿ ಬೂಮ್ರಾ 14
ಜೋ ರೂಟ್ ಸಿ ಕೊಹ್ಲಿ ಬಿ ಅಶ್ವಿನ್ 54
ಇವೋನ್ ಮಾರ್ಗನ್ ರನೌಟ್ 102
ಬೆನ್ ಸ್ಟೋಕ್ಸ್ ಬಿ ಅಶ್ವಿನ್ 1
ಜೋಸ್ ಬಟ್ಲರ್ ಸ್ಟಂಪ್ಡ್ ಧೋನಿ ಬಿ ಅಶ್ವಿನ್ 10
ಮೋಯಿನ್ ಅಲಿ ಬಿ ಕುಮಾರ್ 55
ಕ್ರಿಸ್ ವೋಕ್ಸ್ ಬಿ ಬುಮ್ರಾ 5
ಲಿಯಮ್ ಪ್ಲಂಕೆಟ್ ಔಟಾಗದೆ 26
ಡೇವಿಡ್ ವಿಲ್ಲೆ ಔಟಾಗದೆ 5
ಇತರ 12
ಒಟ್ಟು (50 ಓವರ್‌ಗಳಲ್ಲಿ 8 ವಿಕೆಟಿಗೆ) 366
ವಿಕೆಟ್ ಪತನ: 1-28, 2-128, 3-170, 4-173, 5-206, 6-299, 7-304, 8-354
ಬೌಲಿಂಗ್:
ಭುವನೇಶ್ವರ್ ಕುಮಾರ್ 10-1-63-1
ಜಸ್‌ಪ್ರೀತ್ ಬುಮ್ರಾ 9-0-81-2
ರವೀಂದ್ರ ಜಡೇಜ 10-0-45-1
ಹಾರ್ದಿಕ್ ಪಾಂಡ್ಯ 6-0-60-0
ಆರ್. ಅಶ್ವಿನ್ 10-0-65-3
ಕೇದಾರ್ ಜಾಧವ್ 5-0-45-0 ಪಂದ್ಯಶ್ರೇಷ್ಠ: ಯುವರಾಜ್ ಸಿಂಗ್