Advertisement
ಎಐಜಿ ಆಸ್ಪತ್ರೆಗಳ ಸಂಶೋಧಕರ ತಂಡ ಮಾಡಿದ ಅಧ್ಯಯನದಲ್ಲಿ, ಸೋಂಕಿಗೆ ಒಳಗಾದವರನ್ನು ಸೋಂಕನ್ನು ಹೊಂದಿರದವರಿಗೆ ಹೋಲಿಸಿದರೆ ಸೋಂಕಿಗೆ ಒಳಗಾದವರಲ್ಲೇ ಹೆಚ್ಚಿನ ಪ್ರತಿಕಾಯ ಕಂಡು ಬಂದಿದೆ. ಹಾಗಾಗಿ, ಸೋಂಕಿಗೆ ಒಳಗಾದವರಿಗೆ ಲಸಿಕೆಯ ಒಂದು ಡೋಸ್ ನೀಡಿದರೆ ಸಾಕು ಎಂದು ಸಂಶೋಧಕರ ತಂಡ ತಿಳಿಸಿದೆ.
Related Articles
Advertisement
ಈ ಬಗ್ಗೆ ಮಾಹಿತಿ ನೀಡಿದ ಎಐಜಿ ಆಸ್ಪತ್ರೆಗಳ ಅಧ್ಯಕ್ಷ ಡಾ. ಡಿ. ನಾಗೇಶ್ವರ ರೆಡ್ಡಿ, ವಿಶ್ವದಾದ್ಯಂತ ಕೋವಿಡ್ ಲಸಿಕೆಯ ಕೊರತೆ ಹಾಗೂ ಲಸಿಕೆಗಳ ಸಂಗ್ರಹಣೆಯ ಸಂದರ್ಭದಲ್ಲಿ ಈ ಅಧ್ಯಯನವನ್ನು ನಡೆಸಲಾಗಿದೆ. ಸೋಂಕಿಗೆ ಒಳಗಾದವರಿಗೆ ಒಂದು ಡೋಸ್ ಲಸಿಕೆ ಸಾಕಾಗುತ್ತದೆ. ಎರಡನೇ ಡೋಸ್ ನೀಡುವ ಅವಶ್ಯಕತೆ ಇಲ್ಲ. ಮೊದಲ ಡೋಸ್ ನಿಂದಲೇ ಸಾಕಷ್ಟು ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ರೀತಿಯಲ್ಲಿ ಸಮಸ್ಯೆಗಳು ಎದುರಾಗುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ : ಬ್ರಾಹ್ಮಣ್ಯ ವಿರೋಧಿ ಹೇಳಿಕೆ: ವಿಚಾರಣೆಗೆ ಹಾಜರಾಗುವಂತೆ ನಟ ಚೇತನ್ ಗೆ ನೋಟಿಸ್