Advertisement
ಗುರುವಾರ 248 ಮಂದಿಯನ್ನು ಕರೆತರಲಾಗಿತ್ತು. ಶನಿವಾರ 250 ಮಂದಿ ಬರಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಭಾರತೀಯರನ್ನು ಕಳುಹಿಸಿಕೊಡಲು ಪಾಕಿಸ್ಥಾನ ಜೂ.25ರಿಂದ 27ರವರೆಗೆ ವಾಘಾ ಗಡಿಯನ್ನು ತೆರೆದಿದೆ. ಪಾಕಿಸ್ಥಾನದಲ್ಲಿ ಬಾಕಿಯಾದ ಭಾರತೀಯರಲ್ಲಿ ಹೆಚ್ಚಿನವರು ಆ ದೇಶದಲ್ಲಿರುವ ಸಂಬಂಧಿಗಳನ್ನು ಭೇಟಿಯಾಗಲು ಬಂದವರಾಗಿದ್ದರು.
ಏತನ್ಮಧ್ಯೆ ಪಾಕಿಸ್ಥಾನದಲ್ಲಿ ಶುಕ್ರವಾರ ಅತಿ ಕಡಿಮೆ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಕಂಡಿವೆ. 2775 ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1.95 ಲಕ್ಷದ ಗಡಿ ದಾಟಿದೆ. ಈ ಮೊದಲು ಜೂ.13ರಂದು ಅತ್ಯಧಿಕ 6825 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗಿನ ಸರ್ವಾಧಿಕವಾಗಿತ್ತು. ಮೇ 29ರಂದು 2429 ಪ್ರಕರಣಗಳು ಕಂಡುಬಂದಿದ್ದು, ಈವರೆಗಿನ ಅತಿ ಕಡಿಮೆ ಸಂಖ್ಯೆಯ ಪ್ರಕರಣಗಳಾಗಿತ್ತು. ಪಾಕ್ ಆರೋಗ್ಯ ಇಲಾಖೆ ಪ್ರಕಾರ, ಈ ಹಿಂದಿನ 24 ತಾಸುಗಳಲ್ಲಿ 3962 ಮಂದಿ ಕೋವಿಡ್‌ನಿಂದಾಗಿ ಸಾವಿಗೀಡಾಗಿದ್ದಾರೆ. 84168 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸಿಂಧ್ ಪ್ರಾಂತ್ಯದಲ್ಲಿ ಅತ್ಯಧಿಕ ಸೋಂಕು ಪತ್ತೆಯಾಗಿದ್ದು 75168 ಮಂದಿಗೆ ರೋಗ ತಗುಲಿದೆ. ಪಂಜಾಬ್‌ನಲ್ಲಿ 71987, ಖೈಬರ್ ಪಂಖು¤ಂಖ್ವಾದಲ್ಲಿ 24303, ಇಸ್ಲಾಮಾಬಾದ್‌ನಲ್ಲಿ 11981, ಬಲೂಚಿಸ್ಥಾನದಲ್ಲಿ 9946, ಗಿಲಿYಟ್ ಬಾಲ್ಟಿಸ್ಥಾನದಲ್ಲಿ 1398, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 962 ಪ್ರಕರಣಗಳು ಕಂಡುಬಂದಿವೆ. ಈವರೆಗೆ ಒಟ್ಟು 11 ಲಕ್ಷಕ್ಕೂ ಹೆಚ್ಚು ಮಂದಿಯ ಪರೀಕ್ಷೆ ನಡೆಸಲಾಗಿದೆ. ಕಳೆದ 24 ತಾಸಿನಲ್ಲಿ 21041 ಪರೀಕ್ಷೆ ನಡೆಸಲಾಗಿದೆ. ಕೋವಿಡ್ ನಿಭಾವಣೆ ವಿಚಾರದಲ್ಲಿ ಪ್ರಧಾನಿ ಇಮ್ರಾನ್ ಖಾನ್ ಸರಕಾರವನ್ನು ಸಂಸತ್ತಿನಲ್ಲಿ ಸಮರ್ಥಿಸಿಕೊಂಡಿದ್ದು, ಯಾವುದೇ ಗೊಂದಲವಿಲ್ಲದೆ ಕೋವಿಡ್ ನಿಯಂತ್ರಣಕ್ಕೆ ನಿಯಮಾವಳಿ ರೂಪಿಸಿ ಹೋರಾಡುತ್ತಿರುವ ವಿಶ್ವದ ಏಕೈಕ ಸರಕಾರ ನಮ್ಮದು ಎಂದು ಹೇಳಿದ್ದಾರೆ.