ಹೊಸದಿಲ್ಲಿ : ಹೂಡಿಕೆದಾರರಿಗೆ ಬಾಕಿ ಇಟ್ಟಿರುವ 14,000 ಕೋಟಿ ರೂ.ಗಳ ಪಾವತಿಗಾಗಿ ಸಹಾರಾ ಸಮೂಹದ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಆಗಿರುವ ಆ್ಯಂಬಿ ವ್ಯಾಲಿಯನ್ನು ಹರಾಜು ಹಾಕುವಂತೆ ಸುಪ್ರಿಂ ಕೋರ್ಟ್ ಆದೇಶ ಹೊರಡಿಸಿದೆ.
ಈ ವರ್ಷ ಫೆಬ್ರವರಿ ತಿಂಗಳಲ್ಲಿ ಜಸ್ಟಿಸ್ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಸಹಾರಾ ಸಮೂಹದ ಆ್ಯಂಬಿ ವ್ಯಾಲಿ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಅನ್ನು ಜಫ್ತಿ ಮಾಡುವಂತೆ ಆದೇಶಿಸಿತ್ತು.
2019ರ ಜುಲೈ ಒಳಗಾಗಿ ಹೂಡಿಕೆದಾರರಿಗೆ ಸಂಪೂರ್ಣವಾಗಿ ಬಾಕಿ ಮೊತ್ತವನ್ನು ಪಾವತಿಸುವ ಸಹಾರಾ ಸಮೂಹದ ಈ ಹಿಂದಿನ ಪ್ರಸ್ತಾವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.
ಸಹಾರಾ ಸಮೂಹವು ಮಾಡಿರುವ ಘೋಷಣೆಯ ಪ್ರಕಾರ ಅದರ ಆ್ಯಂಬಿ ವ್ಯಾಲಿ ರಿಯಲ್ ಎಸ್ಟೇಟ್ ಪ್ರಾಜೆಕ್ಸ್ 39,000 ಕೋಟಿ ರೂ. ಬೆಲೆ ಬಾಳುತ್ತದೆ.
ತನ್ನಲ್ಲಿ ಹೂಡಿಕೆ ಮಾಡಿ ನಷ್ಟಕ್ಕೆ ಗುರಿಯಾಗಿರುವ ಹೂಡಿಕೆದಾರರಿಗೆ ತಾನು ಪಾವತಿಸಬೇಕಿರುವ ಮೊತ್ತದ ಶೇ.85ರಷ್ಟನ್ನು ತಾನು ಈಗಾಗಲೇ ಪಾವತಿಸಿಯಾಗಿದೆ ಎಂದು ಸಹಾರಾ ಸಮೂಹ ಹೇಳಿದೆ.