ಕೋಝಿಕೋಡ್(ಕೇರಳ): ಕೇರಳದ ಕೋಝಿಕೋಡ್ ನ ನೈನಂವಲಪ್ಪು ಸಮೀಪದ ಬೀಚ್ ನಲ್ಲಿ ದಿಢೀರ್ ಆಗಿ ಘಟಿಸಿದ ಬೆಳವಣಿಗೆಯಲ್ಲಿ ಸಮುದ್ರದ ಅಲೆಗಳು 50 ಮೀಟರ್ ವರೆಗೆ ಹಿಂದಕ್ಕೆ ಸರಿದ ಘಟನೆ ನಡೆದಿದ್ದು, ಇದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಹೆಮ್ಮಾಡಿ: ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರ ಕಾರು ಅಪಘಾತ; ಅಪಾಯದಿಂದ ಪಾರು
ಇದೊಂದು ಪ್ರಕೃತಿ ಸಹಜವಾದ ಸಾಮಾನ್ಯ ಪ್ರಕ್ರಿಯೆಯಾಗಿದೆ ಎಂದು ಪ್ರತಿಕ್ರಿಯಿಸಿರುವ ಕೇರಳ ರಾಜ್ಯದ ವಿಪತ್ತು ನಿರ್ವಹಣಾ ಅಧಿಕಾರಿಗಳು, ಯಾವುದೇ ರೀತಿಯ ಸುನಾಮಿ ಸಾಧ್ಯತೆಗಳನ್ನು ಅಲ್ಲಗಳೆದಿದೆ ಎಂದು ವರದಿ ತಿಳಿಸಿದೆ.
ಭಾರತೀಯ ಭೂಗರ್ಭಶಾಸ್ತ್ರ ಇಲಾಖೆಯಾಗಲಿ ಇತರೆ ಯಾವುದೇ ತಜ್ಞರು ಭೂಕಂಪ ಅಥವಾ ತ್ಸುನಾಮಿಯಂತಹ ಘಟನೆಗಳ ಬಗ್ಗೆ ಎಚ್ಚರಿಕೆಯ ಸಂದೇಶ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಸಮುದ್ರ ತೀರದ ಪ್ರದೇಶದಲ್ಲಿರುವ ಜನರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಸಂಜೆ 4ಗಂಟೆ ಸುಮಾರಿಗೆ ನೈನಂವಳಪ್ಪುವಿನಲ್ಲಿ ಸಮುದ್ರ ತೀರದಲ್ಲಿ ಸುಮಾರು 50 ಮೀಟರ್ ನಷ್ಟು ದೂರದವರೆಗೆ ಸಮುದ್ರದ ಅಲೆಗಳು ಹಿಂದಕ್ಕೆ ಸರಿದಿರುವುದು ಸ್ಥಳೀಯರಲ್ಲಿ ಗಾಬರಿ ಮೂಡಿಸಿತ್ತು ಎಂದು ವರದಿ ತಿಳಿಸಿದೆ.
ಇದೊಂದು ಅಪರೂಪದ ಘಟನೆಗೆ ಜಿಲ್ಲೆಯ ಇತರ ಭಾಗದ ಜನರು ಕೂಡಾ ಸಾಕ್ಷಿಯಾಗಿದ್ದು, ಪೊಲೀಸರು, ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡ ನೆರೆದಿದ್ದ ಜನಸಮೂಹಕ್ಕೆ ತೆರಳುವಂತೆ ಸೂಚನೆ ನೀಡಿರುವುದಾಗಿ ವರದಿ ಹೇಳಿದೆ.