ಕಟಪಾಡಿ, ಜೂ.6: ಉದ್ಯಾವರ ಕಲಾಯಿಬೈಲ್ ಎಂಬಲ್ಲಿನ ವಿವಾಹಿತ ಮಹಿಳೆಯೋರ್ವರಿಗೆ ಕೊರೊನಾ ಪೊಸಿಟಿವ್ ವರದಿ ಕಂಡು ಬಂದ ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.
ಈಕೆ ಯು ವಾಸ್ಕವ್ಯವಿದ್ದ ಮನೆಯ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿರುತ್ತದೆ
ಈಕೆ ಮುಂಬೈನಿಂದ 14 ದಿನಗಳ ಹಿಂದೆ ಆಗಮಿಸಿದ್ದು, 7 ದಿನದ ಕ್ವಾರಂಟೈನ್ ಅವಧಿಯನ್ನು ಪೂರೈಸಿ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲಾಯಿಬೈಲ್ ಬಳಿಯ ತನ್ನ ಮನೆಗೆ ಆಗಮಿಸಿದ್ದರು.
ಇದೀಗ ಉದ್ಯಾವರ ಗ್ರಾಮ ಪಂಚಾಯತ್ ಮನೆಯನ್ನು ಸ್ಯಾನಿಟೈಸ್ ಮಾಡಲಾಗಿರುತ್ತದೆ
ಉದ್ಯಾವರ ಗ್ರಾ.ಪಂ. ಉಪಾಧ್ಯಕ್ಷ ರಿಯಾಜ್ ಪಳ್ಳಿ, ಸದಸ್ಯ ರವಿ ಸಾಲ್ಯಾನ್, ಸೋಮನಾಥ್, ಪಿ.ಡಿ.ಒ. ಪ್ರವೀಣ್ ಡಿಸೋಜ, ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶೈನೀ, ಕಟಪಾಡಿ ಪೊಲೀಸ್ ಹೊರಠಾಣಾ ಎ.ಎಸ್.ಐ. ದಯಾನಂದ್, ಆರಕ್ಷಕ ಮೋಹನ್‍ಚಂದ್ರ, ಗ್ರಾಮ ಕರಣಿಕ ಉಪೇಂದ್ರ, ಸಹಾಯಕ ರಾಜಾ, ಗ್ರಾ.ಪಂ. ಸಿಬಂದಿ ನಾರಾಯಣ, ಸಂಜೀವ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.