Advertisement

ಕೇಂದ್ರದ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

02:55 PM Mar 18, 2017 | Team Udayavani |

ವಿಟ್ಲ: ಕೇಂದ್ರ ಸರಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಎಸ್‌ಡಿಪಿಐ ವಿಟ್ಲ ವಲಯ ವತಿಯಿಂದ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಎಸ್‌ಡಿಪಿಐ ಮುಖಂಡ ಮಹಮೂದ್‌ ಕಡಂಬು ಮಾತನಾಡಿ, “ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದರೆ 24 ಗಂಟೆಯೊಳಗೆ ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತರುತ್ತೇವೆ’ ಎಂದಿದ್ದರು. 240 ದಿನ ಕಳೆದರೂ ಬಂದಿಲ್ಲ. ನೋಟು  ನಿಷೇಧಿಸಿ ಬಡವರ್ಗದವರನ್ನು ಸಂಕಷ್ಟಕ್ಕೀಡು ಮಾಡಿದರು. ಎಲ್ಲ ವಸ್ತುಗಳ ಬೆಲೆಯೇರಿಕೆ ಆಗುತ್ತಿದೆ ಎಂದು ಆರೋಪಿಸಿದರು.

ಶಾಕೀರ್‌ ಅಳಕೆಮಜಲು ಮಾತನಾಡಿ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷದಿಂದ ಇಲ್ಲಿಯ ಜನತೆಗೆ ಅಪಾಯವಿದ್ದು, ಈ ಬಗ್ಗೆ ಜನರು ಜಾಗೃತರಾಗಬೇಕು ಎಂದರು.

ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಖಲಂದರ್‌ ಪರ್ತಿಪ್ಪಾಡಿ, ಮುಖಂಡರಾದ ಕಮರುದ್ದೀನ್‌ ಪುಣಚ, ಅಝೀಜ್‌ ಕಡಂಬು, ಅಬ್ದುಲ್‌ರಹಿಮಾನ್‌ ಒಕ್ಕೆತ್ತೂರು, ಹೆ„ದರ್‌ಅಲಿ ಕಡಂಬು, ಇಸ್ಮಾಯಿಲ್‌ ಒಕ್ಕೆತ್ತೂರು ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next