Advertisement
ರಾಜ್ಯದಲ್ಲಿ 370ಕ್ಕೂ ಅಧಿಕ ಕೆಪಿಎಸ್‌ಗಳಿವೆ. ಪೂರ್ವ ಪ್ರಾಥಮಿಕದಿಂದ ಪಿಯುಸಿ ವರೆಗಿನ ಶಿಕ್ಷಣವನ್ನು ಸರಕಾರಿ ವ್ಯವಸ್ಥೆಯಲ್ಲಿ ನೀಡಲಾಗುತ್ತಿದೆ. ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ವಿಭಾಗ ಸೇರಿಸಿ ಕೆಪಿಎಸ್‌ಗಳ ರಚನೆ ಮಾಡಿರುವುದರಿಂದ ಸದ್ಯ ಮೂರು ಪ್ರತ್ಯೇಕ ಎಸ್‌ಡಿಎಂಸಿಗಳಿವೆ. ಇದ ರಿಂದ ಶಾಲೆಯ ಆಡಳಿತಾತ್ಮಕ ಅಥವಾ ಶೈಕ್ಷಣಿಕ ಅಭಿವೃದ್ಧಿಗೆ ಏಕರೂಪದ ನಿರ್ಣಯ ತೆಗೆದು ಕೊಳ್ಳಲು ತೊಡಕಾಗುವ ಜತೆಗೆ ಎಸ್‌ಡಿಎಂಸಿ ಸದಸ್ಯರ ನಡುವೆ ಭಿನ್ನಾಭಿಪ್ರಾಯವೂ ಹೆಚ್ಚಿತ್ತು. ಹೀಗಾಗಿ ಎಸ್‌ಡಿಎಂಸಿಗಳನ್ನು ಪುನಾರಚಿಸಿ, ಹೊಸಬರ ಸೇರ್ಪಡೆಗೂ ಸರಕಾರ ನಿರ್ಧರಿಸಿದೆ.
Related Articles
ಎಸ್‌ಡಿಎಂಸಿಯಲ್ಲಿ 16 ಮಂದಿ
ಪೋಷಕ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ. ಇವರಲ್ಲೇ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ನಡೆಯುತ್ತದೆ. ಸ್ಥಳೀಯ ಶಾಸಕರು ಗೌರವಾಧ್ಯಕ್ಷ ರಾಗಿರುತ್ತಾರೆ.ಶಾಲಾ ವ್ಯಾಪ್ತಿಯ ಗ್ರಾ.ಪಂ. ಅಧ್ಯಕ್ಷ ಅಥವಾ ನಗರಸಭೆ, ಪುರ ಸಭೆ, ಪ.ಪಂ. ವಾರ್ಡ್ ಸದಸ್ಯರು ಎಸ್‌ಡಿಎಂಸಿಗಳ ಪದ ನಿಮಿತ್ತ ಸದಸ್ಯರಾಗಲಿದ್ದಾರೆ. ಶಾಲಾ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆ, ಪ್ರಾ.ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ವಿದ್ಯಾರ್ಥಿ ನಿಲಯಗಳ ವಾರ್ಡನ್, 6 ಮಂದಿ ವಿದ್ಯಾರ್ಥಿ ಗಳು, ಶಾಲೆಯ ದಾನಿಗಳು, ಶಾಲಾ ವ್ಯಾಪ್ತಿಯ ಶಿಕ್ಷಣ ತಜ್ಞ ಅಥವಾ ನಿವೃತ್ತ ಶಿಕ್ಷಕ, ಸ್ಥಳೀಯ ಯುವಕ, ಯುವತಿ ಸಂಘದ ಓರ್ವ ಪ್ರತಿನಿಧಿ ನಾಮನಿರ್ದೇಶಿತರಾಗಲಿದ್ದಾರೆ.
Advertisement
ಸ್ಥಾಯಿ ಸಮಿತಿಎಸ್ಡಿಎಂಸಿಗಳಲ್ಲೇ ಮೂರು ಉಪಸಮಿತಿ ಅಥವಾ ಸ್ಥಾಯೀಸಮಿತಿ ರಚನೆ ಮಾಡಲಾಗು ವುದು. ಭೌತಿಕ ಸೌಲಭ್ಯ ಉಸ್ತುವಾರಿಸಮಿತಿ ಶಾಲೆಯ ಸಿವಿಲ್ ಕಾಮಗಾರಿ ಸಂದರ್ಭ ಮೇಲುಸ್ತು ವಾರಿ ನೋಡಿಕೊಳ್ಳಲಿದೆ. ಶೈಕ್ಷಣಿಕ ಗುಣಮಟ್ಟ ಖಾತರಿ ಸಮಿತಿಯು ಮಕ್ಕಳ, ಶಿಕ್ಷಕರ ಹಾಜರಾತಿ, ವಾರ್ಷಿಕ ಕಾರ್ಯಸೂಚಿ, ವೇಳಾ ಪಟ್ಟಿ, ಪಠ್ಯಬೋಧನೆ ಖಾತ್ರಿ, ಕಲಿಕಾ ಪ್ರಗತಿ ಮತ್ತು ಮಕ್ಕಳ, ಪಾಲಕರ ಕೌನ್ಸೆಲಿಂಗ್ ಇತ್ಯಾದಿ ಕಾರ್ಯ ನಿರ್ವಹಿಸಲಿದೆ. ಸುರಕ್ಷಾ ಸಮಿತಿ ಶಾಲಾವರಣದಲ್ಲಿ ಮಕ್ಕಳಿಗೆ ಯಾವುದೇ ಸಮಸ್ಯೆಯಾಗದಂತೆ ಗಮನ ಹರಿಸಲಿದೆ. ಒಂದೇ ಎಸ್‌ಡಿಎಂಸಿ ರಚಿಸಿ, ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಿ ವಿವಿಧ ಇಲಾಖೆಯ ಪ್ರತಿನಿಧಿ ಗಳನ್ನು, ಸಂಘಸಂಸ್ಥೆಯ ಸದಸ್ಯ ರನ್ನು ಸೇರಿಸ ಲಾಗುವುದು. ಇದರಲ್ಲೇ ಸ್ಥಾಯಿ ಸಮಿತಿಯೂ ಇರಲಿದೆ.
– ಬಿ.ಸಿ. ನಾಗೇಶ್, ಶಿಕ್ಷಣ ಸಚಿವ ಹೊಸದಾಗಿ ಎಸ್‌ಡಿಎಂಸಿ ರಚನೆ ಮಾಡುವಾಗ ಈ ಹಿಂದೆ ಇದ್ದ ಪ್ರತ್ಯೇಕ ಎಸ್‌ಡಿಎಂಸಿಗಳು ರದ್ದಾಗಲಿವೆ. ಹೊಸದಾಗಿ ರಚಿಸುವ ಕೆಪಿಎಸ್ ಶಾಲೆಗಳ ಎಸ್‌ಡಿಎಂಸಿಯ ಜಂಟಿ ಖಾತೆಗೆ ಉಳಿಕೆ ಅನುದಾನ ವರ್ಗಾವಣೆ ಆಗಲಿದೆ.
-ಎಸ್.ಆರ್.ಎಸ್. ನಾಧನ್, ವಿಶೇಷಾಧಿಕ ಮತ್ತು ಅಧೀನ ಕಾರ್ಯದರ್ಶಿ (ಯೋಜನೆ) ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ -ರಾಜು ಖಾರ್ವಿ ಕೊಡೇರಿ