Advertisement

SDM Ujire: ರಚನಾತ್ಮಕ ಚಿಂತನೆಯಿಂದ ನವ ಮನ್ವಂತರ: ಡಾ.ಡಿ.ವೀರೇಂದ್ರ ಹೆಗ್ಗಡೆ

02:29 AM Oct 29, 2024 | Team Udayavani |

ಬೆಳ್ತಂಗಡಿ: ವಿಜ್ಞಾನ, ತಂತ್ರಜ್ಞಾನ, ಮಾನವಿಕ ಸಹಿತ ವಿವಿಧ ಜ್ಞಾನಶಿಸ್ತುಗಳಿಗೆ ಸಂಬಂಧಿಸಿದ ಆಳವಾದ ಜ್ಞಾನ ಆಧಾರಿತ ತಾರ್ಕಿಕ ಚಿಂತನೆ ಬಲದಲ್ಲಿ ದೇಶದ ರಚನಾತ್ಮಕ ಬೆಳವಣಿಗೆಯ ಸಂಪನ್ಮೂಲಗಳಾಗಿ ರೂಪುಗೊಳ್ಳುವುದರ ಕಡೆಗೆ ವಿದ್ಯಾರ್ಥಿ ಸಮೂಹ ಗಮನ ಕೇಂದ್ರೀಕರಿಸಬೇಕು ಎಂದು ಎಸ್‌.ಡಿ ಎಂ. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಉಜಿರೆಯ ಇಂದ್ರಪ್ರಸ್ಥ ಸಭಾಂಗಣ ದಲ್ಲಿ ಎಸ್‌.ಡಿ.ಎಂ. ಕಾಲೇಜು ಪದವಿ ಮತ್ತು ಸ್ನಾತಕೋತ್ತರ ಪದವೀಧರರು ಮತ್ತು ರ್‍ಯಾಂಕ್‌ ಮನ್ನಣೆಯ ವಿದ್ಯಾರ್ಥಿ ಗಳಿಗೆ ಪ್ರಮಾಣಪತ್ರ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದದರು. ಪದವೀಧರರಾದ ಕೂಡಲೇ ಕಲಿಕೆಯ ಯಾನ ನಿಲ್ಲುವುದಿಲ್ಲ. ಕಲಿಕೆಯ ಶ್ರದ್ಧೆ ಮತ್ತು ಜ್ಞಾನಾರ್ಜನೆಯ ಹೆಜ್ಜೆಗಳು ನಿರಂತರವಾಗಿರುತ್ತವೆ. ಇದನ್ನು ಅರ್ಥೈಸಿಕೊಂಡು ವಿವಿಧ ಕ್ಷೇತ್ರಗಳ ಕುರಿತು ವಿಸ್ಕೃತ ಜ್ಞಾನ ಪಡೆದು ದೇಶಕ್ಕೆ ಬೇಕಾದ ರಚನಾತ್ಮಕ ಮೌಲಿಕ ಸಂಪನ್ಮೂಲಗಳಾಗಿ ಯುವಸಮೂಹ ರೂಪುಗೊಳ್ಳಬೇಕು ಎಂದರು.

ಘಟಿಕೋತ್ಸವ ಭಾಷಣ ಪ್ರಸ್ತುತ ಪಡಿಸಿದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷ ಪ್ರೊ| ಎಸ್‌.ಆರ್‌. ನಿರಂಜನ ಅವರು, ಮುಂದಿನ ಮೂರು ದಶಕಗಳ ಅವಧಿಯಲ್ಲಿ ಕೌಶಲಾಧಾರಿತ ಶೈಕ್ಷಣಿಕ ಮತ್ತು ಬೌದ್ಧಿಕ ಸಾಮರ್ಥ್ಯವೇ ನಿರ್ಣಾಯಕವಾಗಲಿದೆ. ಕೌಶಲಾಧಾರಿತ ಶೈಕ್ಷಣಿಕ ಮತ್ತು ಬೌದ್ಧಿಕ ಸಾಮರ್ಥ್ಯದೊಂದಿಗೆ ವೃತ್ತಿಪರ ಅವ ಕಾಶಗಳನ್ನು ಪಡೆದು ಆ ಮೂಲಕ ಅಭಿವೃದ್ಧಿಯ ಹೆಜ್ಜೆಗಳಿಗೆ ಸಮಗ್ರತೆಯ ಸ್ಪರ್ಶ ನೀಡುವುದರ ಕಡೆಗೆ ಪದವೀ ಧರರು ಗಮನಹರಿಸಬೇಕು ಎಂದರು.

ಮಂಗಳೂರು ವಿವಿ ಕುಲಪತಿ ಪ್ರೊ| ಪಿ. ಎಲ್‌. ಧರ್ಮ ಪದವೀಧರರು ಮತ್ತು ರ್‍ಯಾಂಕ್‌ ಪಡೆದವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಎಸ್‌.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ.ಹರ್ಷೇಂದ್ರ ಕುಮಾರ್‌, ಡಾ| ಸತೀಶ್ವಂದ್ರ ಎಸ್‌., ಪ್ರಾಂಶುಪಾಲ ಡಾ| ಬಿ.ಎ. ಕುಮಾರ ಹೆಗ್ಡೆ, ಸ್ನಾತಕೋತ್ತರ ಕೇಂದ್ರದ ಡೀನ್‌ ಡಾ| ವಿಶ್ವನಾಥ ಪಿ., ಉಪಪ್ರಾಂಶುಪಾಲ ಡಾ| ಕೆ.ಎನ್‌.ಶಶಿಶೇಖರ ಕಾಕತ್ಕರ್‌ ಉಪಸ್ಥಿತರಿದ್ದರು. ಡಾ| ನೆಫೀಸತ್‌ ಪಿ., ಸ್ವಾತಿ ಬಿ. ಕಾರ್ಯಕ್ರಮ ನಿರೂಪಿಸಿದರು. ಡಾ| ಬಿ.ಎ.ಕುಮಾರ ಹೆಗ್ಡೆ ಸ್ವಾಗತಿಸಿದರು. ಆಡಳಿತಾತ್ಮಕ ಕುಲಸಚಿವ ಡಾ| ಶಲೀಪ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next