Advertisement

ಎಸ್‌ಡಿಜಿ ಗುರಿ ಸಾಧನೆ: ರಾಜ್ಯಕ್ಕೆ 3ನೇ ಸ್ಥಾನ

11:55 PM Jun 03, 2021 | Team Udayavani |

ಹೊಸದಿಲ್ಲಿ: ರಾಜ್ಯಗಳಿಗೆ ಕೇಂದ್ರ ಸರಕಾರ ನೀಡಿದ್ದ “ಸುಸ್ಥಿರ ಅಭಿವೃದ್ಧಿ ಗುರಿ’ಗಳಲ್ಲಿ (ಎಸ್‌ಡಿಜಿ) ಅತೀ ದೊಡ್ಡ ಸಾಧನೆ ಮಾಡಿದ ರಾಜ್ಯಗಳ ಪಟ್ಟಿಯನ್ನು ನೀತಿ ಆಯೋಗ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕರ್ನಾಟಕವು ಒಟ್ಟು 72 ಅಂಕಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದಿದೆ. ಕೇರಳ ರಾಜ್ಯ, ಕಳೆದ ವರ್ಷದಂತೆ ಈ ವರ್ಷವೂ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದರೆ, ಬಿಹಾರ ರಾಜ್ಯವು ಈ ಪಟ್ಟಿಯಲ್ಲಿ ಕಡೆಯ ಸ್ಥಾನ ಪಡೆಯುವ ಮೂಲಕ ಸುಸ್ಥಿರ ಅಭಿವೃದ್ಧಿಯಲ್ಲಿ ಅತೀ ಕಳಪೆ ಸಾಧನೆ ತೋರಿದ ರಾಜ್ಯವೆಂಬ ಕುಖ್ಯಾತಿಗೆ ಪಾತ್ರವಾಗಿದೆ.

Advertisement

ಸಾಮಾಜಿಕ, ಆರ್ಥಿಕ ಹಾಗೂ ನೈಸರ್ಗಿಕ ಅಭಿವೃದ್ಧಿ ಆಶಯಗಳೊಂದಿಗೆ, ಬಡತನ ನಿರ್ಮೂಲನೆ, ಹಸಿವು ಮುಕ್ತ ರಾಜ್ಯ, ಉತ್ತಮ ಆರೋಗ್ಯ, ಲಿಂಗ ಸಮಾನತೆ, ನೈರ್ಮಲ್ಯ, ಕೈಗೆಟಕುವ ಬೆಲೆಯಲ್ಲಿ ಪರಿಶುದ್ಧ ಇಂಧನ, ಸುಸ್ಥಿರ ನಗರಗಳ ನಿರ್ಮಾಣ ಇತ್ಯಾದಿಗಳ ಗುರಿಗಳ ಸಹಿತ ಒಟ್ಟು 16 ಗುರಿಗಳನ್ನು ನೀಡಲಾ ಗಿತ್ತು. ಈ ಗುರಿಗಳನ್ನು ಮುಟ್ಟುವಲ್ಲಿ ಆಯಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕೈಗೊಂಡ ಕ್ರಮಗಳು ಹಾಗೂ ಮಾಡಿದ ಸಾಧನೆ ಗಳನ್ನು ಮಾನದಂಡವಾಗಿಟ್ಟುಕೊಂಡು ರಾಜ್ಯಗಳಿಗೆ ಅಂಕಗಳನ್ನು ನೀಡಲಾಗಿದ್ದು, ಕೇರಳ ರಾಜ್ಯ ಒಟ್ಟು 75 ಅಂಕಗಳನ್ನು ಗಳಿಸುವ ಮೂಲಕ ಮೊದಲ ರಾಜ್ಯವಾಗಿ ಹೊರಹೊಮ್ಮಿದೆ. ಇನ್ನು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಚಂಡೀಗಢ (79 ಅಂಕ) ಮೊದಲ ಸ್ಥಾನದಲ್ಲಿದ್ದರೆ, ದಿಲ್ಲಿ (68) ಎರಡನೇ ಸ್ಥಾನದಲ್ಲಿದೆ.

ಇಂಧನ ಕ್ಷೇತ್ರದಲ್ಲಿ ಕರ್ನಾಟಕದ ಸಾಧನೆ:

ಕೈಗೆಟಕುವ ಬೆಲೆಯಲ್ಲಿ ಪರಿಶುದ್ಧ ಇಂಧನ ಗುರಿಯನ್ನು ಮುಟ್ಟುವಲ್ಲಿ (ಗುರಿ 7) ಗಮನಾರ್ಹ ಸಾಧನೆ ಮಾಡಿರುವ ಕರ್ನಾಟಕ, ಒಟ್ಟು 72 ಅಂಕ ಗಳನ್ನು ಗಳಿಸಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆಂಧ್ರಪ್ರದೇಶ, ಗೋವಾ, ಉತ್ತರಾಖಂಡ ರಾಜ್ಯಗಳೂ ತಲಾ 72 ಅಂಕ ಪಡೆದು ಈ ಪಟ್ಟಿಯಲ್ಲಿ 3ನೇ ಸ್ಥಾನ ಗಳಿಸಿವೆ. 75 ಅಂಕ ಗಳಿಸಿರುವ ಕೇರಳ, ಮೊದಲ ಸ್ಥಾನದಲ್ಲಿದ್ದರೆ, 74 ಅಂಕ ಗಳಿಸಿರುವ ತಮಿಳುನಾಡು, ಹಿಮಾಚಲ ಪ್ರದೇಶ ರಾಜ್ಯಗಳು ದ್ವಿತೀಯ ಸ್ಥಾನದಲ್ಲಿವೆ.

ಭಾರತದ ಸಮಗ್ರ ಸಾಧನೆ: ಸಮಗ್ರ ದೇಶದ ದೃಷ್ಟಿಕೋನದಲ್ಲಿ ಹೇಳುವುದಾದರೆ, ಒಟ್ಟಾರೆ ಗುರಿಗಳ ಸಾಧನೆಯಲ್ಲಿ, ಕಳೆದ ವರ್ಷ 60 ಅಂಕಗಳನ್ನು ಗಳಿಸಿದ್ದ ಭಾರತ, ಈ ಬಾರಿ 66 ಅಂಕಗಳನ್ನು ಗಳಿಸಿದೆ. 6ನೇ ಗುರಿ (ಸ್ವತ್ಛ ನೀರು ಹಾಗೂ ನೈರ್ಮಲ್ಯ) ಹಾಗೂ 7ನೇ ಗುರಿ (ಕೈಗೆಟಕುವ ಬೆಲೆಯಲ್ಲಿ ಸ್ವತ್ಛ ಇಂಧನ) ಸಾಧನೆಯಲ್ಲಿ ಭಾರತ, ಕ್ರಮವಾಗಿ 83 ಹಾಗೂ 92 ಅಂಕಗಳನ್ನು ಗಳಿಸಿದೆ.

Advertisement

 

ಗುರಿಗಳು ಯಾವುವು? ರಾಜ್ಯಗಳ ಸಾಧನೆಯೇನು? :

ಗುರಿ 1: ಬಡತನ ನಿರ್ಮೂಲನೆ

ತಮಿಳುನಾಡು, ಕೇರಳ

ಗುರಿ 2:   ಹಸಿವು ಮುಕ್ತ ರಾಜ್ಯ

ಕೇರಳ, ಚಂಡೀಗಢ

ಗುರಿ 3: ಉತ್ತಮ ಆರೋಗ್ಯ, ಯೋಗಕ್ಷೇಮ

ಗುಜರಾತ್‌,  ದಿಲ್ಲಿ

ಗುರಿ 4: ಗುಣಮಟ್ಟದ ಶಿಕ್ಷಣ

ಕೇರಳ,  ಚಂಡೀಗಢ

ಗುರಿ 5: ಲಿಂಗ ಸಮಾನತೆ

ಛತ್ತೀಸ್‌ಗಢ, ಅಂಡಮಾನ್‌-ನಿಕೋಬಾರ್‌

ಗುರಿ 6:  ಸ್ವತ್ಛ ನೀರು, ನೈರ್ಮಲ್ಯ

ಗೋವಾ, ಲಕ್ಷದ್ವೀಪ

ಗುರಿ 7: ಕೈಗೆಟಕುವ ಬೆಲೆಯಲ್ಲಿ

ಪರಿಶುದ್ಧ  ಇಂಧನ

ಕರ್ನಾಟಕ,  ಆಂಧ್ರಪ್ರದೇಶ,  ಕೇರಳ, ಗೋವಾ, ಹರಿಯಾಣ, ಹಿಮಾಚಲ  ಪ್ರದೇಶ, ಮಹಾರಾಷ್ಟ್ರ,  ಮಿಜೋರಾಂ,  ಪಂಜಾಬ್‌, ರಾಜಸ್ಥಾನ,  ಸಿಕ್ಕಿಂ,ತಮಿಳುನಾಡು,ತೆಲಂಗಾಣ, ಉತ್ತರಾಖಂಡ,  ಉ.ಪ್ರದೇಶ,ಅಂಡಮಾನ್‌-ನಿಕೋಬಾರ್‌,  ಚಂಡೀಗಢ, ದಿಲ್ಲಿ, ಜಮ್ಮು-ಕಾಶ್ಮೀರ,  ಲಡಾಖ್ ಹಿ,ಪ್ರದೇಶ, ಚಂಡೀಗಢ

ಗುರಿ 9:  ಕೈಗಾರಿಕೆ, ಆವಿಷ್ಕಾರ, ಮೂಲಸೌಕರ್ಯ

ಗುಜರಾತ್‌, ದಿಲ್ಲಿ

ಗುರಿ 10: ಅಸಮಾನತೆ    ನಿರ್ಮೂಲನೆ

ಮೇಘಾಲಯ,  ಚಂಡೀಗಢ

ಗುರಿ 11: ಸುಸ್ಥಿರ ನಗರಗಳು ,ಸಮುದಾಯಗಳ  ನಿರ್ಮಾಣ

ಪಂಜಾಬ್‌, ಚಂಡೀಗಢ

ಗುರಿ 12: ಜವಾಬ್ದಾರಿಯುತ ಬಳಕೆ ಹಾಗೂ ಸೃಷ್ಟಿ

ತ್ರಿಪುರಾ,ಜಮ್ಮು-ಕಾಶ್ಮೀರ,  ಲಡಾಖ್‌

ಗುರಿ 13: ಹವಾಮಾನ ನಿರ್ವಹಣೆ

ಒಡಿಶಾ, ಅಂಡಮಾನ್‌- ನಿಕೋಬಾರ್‌

ಗುರಿ 14: ಕಡಲ ಜೀವಿಗಳ ಜೀವನ

ಒಡಿಶಾ

ಗುರಿ 15: ಜನ-ಜಾನುವಾರು ಜೀವನ

ಆಂಧ್ರಪ್ರದೇಶ, ಚಂಡೀಗಢ

ಗುರಿ 16: ಶಾಂತಿ, ನ್ಯಾಯ ವಿಲೇವಾರಿ, ಶಕ್ತಿಶಾಲಿ ಸಂಸ್ಥೆಗಳು

ಉತ್ತರಾಖಾಂಡ, ಪುದುಚೇರಿ

ಎಸ್‌ಡಿಜಿ ವಿಷನ್‌ 2030ಕ್ಕೆ ನಿಗದಿ ಪಡಿಸಿದ ಗುರಿ ತಲುಪುವ ನಿಟ್ಟಿನಲ್ಲಿ ಕರ್ನಾಟಕ ದಾಪುಗಾಲಿಟ್ಟಿದೆ. ಯೋಜನಾ ಇಲಾಖೆಯು ರಾಜ್ಯದಲ್ಲಿ ಸುಸ್ಥಿರ ಗುರಿ ಸಾಧಿಸುವಲ್ಲಿ ನೋಡಲ್‌  ಇಲಾಖೆಯಾಗಿದೆ. ಮುಂದಿನ ವರ್ಷಗಳಲ್ಲಿ ರಾಜ್ಯವು ಸುಸ್ಥಿರ ಅಭಿವೃದ್ಧಿ ಗುರಿಯಲ್ಲಿ ಮೊದಲ ಸ್ಥಾನ ಪಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವ ಹಿಸಲಾಗುವುದು.-ಡಾ| ನಾರಾಯಣ ಗೌಡ, ಯೋಜನೆ ಮತ್ತು ಸಾಂಖ್ಯೀಕ ಇಲಾಖೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next