Advertisement
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಹಂತದಲ್ಲಿ ಕಾಪುವಿಗೆ 1 ಕೋ.ರೂ. ನೀಡುವ ಭರವಸೆ ನೀಡಿದರು. ಕಾಪು ಕಡಲಕಿನಾರೆಯಲ್ಲಿ ಸ್ಕೂಬಾ ಡೈವಿಂಗ್ ಸೆಂಟರ್ ನಡೆಸಲು ಅನುಮತಿ ನೀಡುವ ಕುರಿತು ಚರ್ಚಿಸಲಾಯಿತು. ಸ್ಕೈ ಡೈವಿಂಗ್ ನಡೆಸುವ ಬಗ್ಗೆಯೂ ಚರ್ಚೆ ನಡೆಯಿತು.
ಈಗಾಗಲೇ ಜಿಲ್ಲೆಯಲ್ಲಿ ಮೂರು ಹೌಸ್ ಬೋಟ್ ಉದ್ಯಮಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಬಿ.ಆರ್. ಅನಿತಾ ಮಾಹಿತಿ ನೀಡಿದರು.
Related Articles
Advertisement
ಹೋಮ್ ಸ್ಟೇ ನೋಂದಣಿಯನ್ನು ಸಮಯಮಿತಿಯೊಳಗೆ ನಡೆಸಲು ಎಸ್ಪಿ ಅವರಿಗೆ ಹಾಗೂ ಎನ್‌ಒಸಿ ನೀಡುವಗ್ರಾ.ಪಂ.ಗಳಿಗೆ ಸುತ್ತೋಲೆ ಮೂಲಕ ಮಾಹಿತಿ ನೀಡಿ ಎಂದು ಜಿಲ್ಲಾಧಿಕಾರಿಗಳಿಗೆ ಸಚಿವರು ಹೇಳಿದರು. ಹೋಂ ಸ್ಟೇ ಮತ್ತು ಸಂಬಂಧಪಟ್ಟವರ ಜತೆ ಸೇರಿ ಕಾರ್ಯಾಗಾರವೊಂದನ್ನು ನಡೆಸಿ ಎಂದೂ ಸಚಿವರು ಹೇಳಿದರು. ಬೀಚ್‌ಗಳನ್ನು ಅಭಿವೃದ್ಧಿ ಪಡಿಸಲು ಟೆಂಡರ್ ಪಡೆದ ಸಂಸ್ಥೆಗಳ ಪ್ರತಿನಿಧಿಗಳಾದ ಸುದೇಶ್, ಯತೀಶ್ ಬೈಕಂಪಾಡಿ, ಮನೋಹರ ಶೆಟ್ಟಿ, ಅಪ್ನಾ ಹಾಲಿಡೇಸ್‌ನ ನಾಗರಾಜ್ ಹೆಬ್ಟಾರ್ ಬೀಚ್ ಅಭಿವೃದ್ಧಿಗೆ ಹಲವು ಸಲಹೆಗಳನ್ನು ನೀಡಿದರು. ಏನಿದು ಸ್ಕೂಬಾ ಡೈವಿಂಗ್?
ಸಮುದ್ರದ ಆಳಕ್ಕೆ ಈಜಿಕೊಂಡು ಹೋಗುವುದು ಸ್ಕೂಬಾ ಡೈವಿಂಗ್. ಸೆಲ್ಫ್ ಕಂಟೇನ್x ಅಂಡರ್‌ವಾಟರ್ ಡೈವಿಂಗ್‌ನ್ನು ಸಂಕುಚಿತಗೊಳಿಸಿ ಸ್ಕೂಬಾ ಎಂದು ಕರೆಯಲಾಗುವುದು. ಮೊದಲು ಹೋಗುವವರಿಗೆ 30-40 ಮೀ. ಆಳಕ್ಕೆ ಬಿಡುತ್ತಾರೆ. ಹೋಗುವಾಗ ಆಕ್ಸಿಜನ್ ಸಿಲಿಂಡರ್, ನೀರಿನೊಳಗೆ ಹೋದರೂ ನೀರು ಶರೀರಕ್ಕೆ ತಾಗದಂತೆ ಬೇಕಾದ ಜಾಕೆಟ್ ಮೊದಲಾದ ಸಲಕರಣೆಗಳನ್ನು ಅಳವಡಿಸಲಾಗುತ್ತದೆ. ಇದೊಂದು ಹವ್ಯಾಸ. ಇದನ್ನು ಪ್ರವಾಸೋದ್ಯಮಕ್ಕೂ ಅನ್ವಯಿಸಬಹುದಾಗಿದೆ. ಇದಕ್ಕೆ ಹೋಗುವ ಮುನ್ನ ತರಬೇತಿ ಕೊಡುತ್ತಾರೆ. ಪ್ರಸ್ತುತ ಮುಡೇìಶ್ವರದ ನೇತ್ರಾಣಿ ದ್ವೀಪದಲ್ಲಿ ಗೋವಾದವರು ನಡೆಸುವ ಸ್ಕೂಬಾ ಡೈವಿಂಗ್ ಕೇಂದ್ರವಿದೆ. ಈಗ ಸಚಿವರು ಪ್ರಸ್ತಾವಿಸಿರುವುದು ಸರಕಾರದ ವತಿಯಿಂದ ಆರಂಭವಾಗುವ ಸ್ಕೂಬಾ ಡೈವಿಂಗ್ ಕೇಂದ್ರ.