Advertisement
ಈಗಾಗಲೇ ಸರ್ಕಾರ ವಲಸೆ ಕಾರ್ಮಿಕರನ್ನು ತಮ್ಮ ಸ್ವರಾಜ್ಯಗಳಿಗೆ ಕಳುಹಿಸಿಕೊಡುವ ಕಾರ್ಯ ಮಾಡುತ್ತಿದೆ. ಆದರೆ 20 ಕ್ಕೂ ಹೆಚ್ಚಿನ ಕಾರ್ಮಿಕರು ಕಳೆದ 3 ದಿನಗಳಿಂದ ರಸ್ತೆಯಲ್ಲಿಯೇ ಮಲಗಿದ್ದರೂ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಗ್ರಾಪಂ ಸದಸ್ಯ ಕೆ.ಸೋಮಶೇಖರ್ ಪ್ರಶ್ನಿಸಿದ್ದಾರೆ. ವಲಸೆ ಕಾರ್ಮಿಕ ಪಿಂಟು ಕುಮಾರ್ ಯಾದವ್ ಮಾತನಾಡಿ, ಕಳೆದ 3 ದಿನಗಳಿಂದ ರಸ್ತೆ ಪಕ್ಕದಲ್ಲಿ ಮಲಗುತ್ತಿದ್ದೇವೆ. ದಾನಿಗಳಿಂದ 3 ದಿನಗಳಿಂದ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಊಟ ನೀಡುತ್ತಿದ್ದಾರೆ. ಉತ್ತರ ಪ್ರದೇಶಕ್ಕೆ ಕಳುಹಿಸಿಕೊಡಲುಅವಕಾಶ ಕಲ್ಪಿಸಬೇಕು. ಪೊಲೀಸರಿಗೆ ಎಲ್ಲಾ ರೀತಿಯ ಮಾಹಿತಿ ನೀಡಿದ್ದೇವೆಂದರು. ವಲಸೆ ಕಾರ್ಮಿಕರಾದ ರಾಜ್ ಕುಮಾರ್ ಚೌದರಿ, ಅಮಿತ್ ಯಾದವ್, ಸಿಕಿಂದರ್ ಯಾದವ್, ಮುಕೇಶ್ ಯಾದವ್ ಮತ್ತಿತರರು ಇದ್ದರು. ತಹಶೀಲ್ದಾರ್ ಪ್ರತಿಕ್ರಿಯೆ: ಬಚ್ಚಹಳ್ಳಿ ಗೇಟ್ ಮೇಲ್ಸೇತುವೆ ಕೆಲಭಾಗದಲ್ಲಿ ಕಾರ್ಮಿಕರು ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಯಾವ ರಾಜ್ಯದವರು ಎಂದು ತಿಳಿದುಕೊಳ್ಳಲಾಗುವುದು. ಸಂಬಂಧಿಸಿದ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗುವುದು ಎಂದು ತಹಶೀಲ್ದಾರ್ ಅಜಿತ್ ಕುಮಾರ್ ರೈ ತಿಳಿಸಿದರು.