Advertisement
“ನೀರವ್ ಆಯೋಜಿಸಿದ್ದ ಸಮಾರಂಭವೊಂದಕ್ಕೆ ತಾವು ಹೋಗಿದ್ದನ್ನು ಪ್ರಸ್ತಾಪಿಸುತ್ತಿರುವ ಬಿಜೆಪಿ, ಇಡೀ ಹಗರಣವನ್ನು ಮತ್ತೂಂದು ದಿಕ್ಕಿನತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. 2013ರಲ್ಲಿ ನೀರವ್ ಆಯೋಜಿಸಿದ್ದ ಸಮಾರಂಭವೊಂದಕ್ಕೆ ರಾಹುಲ್ ಗಾಂಧಿ ಹೋಗಿದ್ದನ್ನು ಪ್ರಸ್ತಾಪಿಸಿರುವ ಬಿಜೆಪಿ ನಾಯಕರು, ರಾಹುಲ್ ಅವರಿಗೆ ನೀರವ್ ಅವರೊಂದಿಗೆ ಗಾಢ ನಂಟಿತ್ತು ಎಂದು ಟೀಕಿಸಿದ್ದಾರೆ. ಆನಂತರ, ಮೋದಿ ವಿರುದ್ಧ ತಮ್ಮ ವಾಗ್ಬಾಣ ಬಿಟ್ಟ ರಾಹುಲ್, “”ಪ್ರಧಾನಿ ಮೋದಿ ಅವರಿಗೆ ಈ ಹಗರಣದಲ್ಲಿ ಏನಾಗಿದೆ ಎಂಬುದು ಗೊತ್ತಿದೆ. ಹಾಗಾಗಿ, ಅವರು ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡಬೇಕು. ಅದು ಬಿಟ್ಟು, ಸಾಮಾಜಿಕ ನ್ಯಾಯ ಸಚಿವ ಹಾಗೂ ರಕ್ಷಣಾ ಸಚಿವೆಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸುವುದು ಸರಿಯಲ್ಲ. ಮಕ್ಕಳಿಗೆ ಹೇಗೆ ಪರೀಕ್ಷೆ ಎದುರಿಸಬೇಕೆಂದು 1 ಗಂಟೆ 50 ನಿಮಿಷಗಳ ಸಲಹೆ ನೀಡುವ ಪ್ರಧಾನಿಗೆ ದೇಶವನ್ನೇ ತಲ್ಲಣ ಗೊಳಿಸಿರುವ ಹಗರಣದ ಬಗ್ಗೆ ಮಾತನಾಡಲು ಸಮಯವಿ ಲ್ಲವೇ? ನೋಟು ಅಮಾನ್ಯ ಮಾಡಿ ಜನರ ದುಡ್ಡನ್ನೆಲ್ಲ ಬ್ಯಾಂಕಿಗೆ ಹಾಕಿಸಿದರು. ಈಗ ಅವರ ಗೆಳೆಯರೇ ಬ್ಯಾಂಕ್‌ನಿಂದ ದುಡ್ಡನ್ನು ಕದಿಯುತ್ತಿದ್ದಾರೆ. ಆದರೂ, ಪ್ರಧಾನಿ ಮೋದಿ ಮೌನವಹಿಸಿರುವುದೇಕೆ” ಎಂದು ಪ್ರಶ್ನಿಸಿದ್ದಾರೆ.
Related Articles
Advertisement
ಶಿವಸೇನೆ ಟೀಕೆ: ಹಗರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಶಿವಸೇನೆ, ನೀರವ್ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಮಾಡಬೇಕಿತ್ತು ಎಂದು ಲೇವಡಿ ಮಾಡಿದೆ. ಪಕ್ಷದ ಮುಖವಾಣಿಯಾದ ಸಾಮ್ನಾದಲ್ಲಿ ಈ ಬಗ್ಗೆ ಬರೆದಿರುವ ನಾಯಕ ಉದ್ಧವ್ ಠಾಕ್ರೆ, “”ದಾವೋಸ್ ಶೃಂಗದಲ್ಲಿ ಪ್ರಧಾನಿ ಜತೆ ಫೋಟೋ ಕ್ಲಿಕ್ಕಿಸಿಕೊಂಡಿರುವ ನೀರವ್, ವರ್ಷಗಳಿಂದ ಬಿಜೆಪಿ ಜತೆಗಿದ್ದು, ಬಿಜೆಪಿ ನಾಯಕರ ಕೃಪಾಕಟಾಕ್ಷ ಹೊಂದಿದ್ದು ಸ್ಪಷ್ಟವಾಗಿದೆ. ಇಂಥ ಅನೇಕ ನೀರವ್‌ಗಳಿಂದಲೇ ಬಿಜೆಪಿ ಚುನಾವಣೆಗಳನ್ನು ಗೆಲ್ಲುತ್ತಾ ಬಂದಿದೆ” ಎಂದಿದ್ದಾರೆ.
ಇದೇ ವೇಳೆ, ಹಗರಣವು ಈಗ ಅಂದುಕೊಂಡಿರುವ ಮೊತ್ತ 11,400 ಕೋಟಿ ರೂ.ಗಳಿಗೂ ಮೀರಲಿದೆ ಎಂದು ತೆರಿಗೆ ಇಲಾಖೆ ಹೇಳಿದ್ದು, ಪಿಎನ್‌ಬಿಯನ್ನು ನಂಬಿ ನೀರವ್ ಹಾಗೂ ಆತನ ಸಂಬಂಧಿಗಳ ಹೆಸರಿನಲ್ಲಿರುವ ಕಂಪನಿಗಳಿಗೆ ಭಾರತದ ಅನೇಕ ಬ್ಯಾಂಕುಗಳು ಸಾಲ ಅಥವಾ ಕಾರ್ಪೊರೇಟ್ ಖಾತ್ರಿ ನೀಡಿರುವುದು ಪತ್ತೆಯಾಗಿದ್ದು, ಸದ್ಯಕ್ಕಿರುವ ಮಾಹಿತಿಯ ಪ್ರಕಾರ, ಇದರ ಮೊತ್ತವೇ 17,600 ಕೋಟಿ ರೂ.ಗಳಿಗೆ ಮುಟ್ಟಲಿದೆ ಎಂದು ಇಲಾಖೆ ಹೇಳಿದೆ. ಇನ್ನೊಂದೆಡೆ, ನೀರವ್ ಮೋದಿ, ಸುಮಾರು 150 ನಕಲಿ ಕಂಪನಿಗಳನ್ನು ಸೃಷ್ಟಿಸಿ ಆ ಮೂಲಕ ಹಣಕಾಸು ಅವ್ಯವಹಾರ ಮಾಡಿರುವುದು ಪತ್ತೆಯಾ ಗಿದೆ ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಏನತ್ಮಧ್ಯೆ, ಭಾರತ ಮೂಲದ ನೀರವ್ ಮೋದಿ ಹಾಗೂ ಆತನ ಸಹೋದರ ನಿಶಾಲ್ ಮೋದಿ, ಬೆಲ್ಜಿಯಂನಲ್ಲೇ ಬೆಳೆದಿರುವುದರಿಂದ ಈ ಇಬ್ಬರೂ “ದ್ವಿ ಪೌರತ್ವ’ ಹೊಂದಿರ ಬಹುದೆಂದು ಮೂಲಗಳನ್ನು ಉಲ್ಲೇಖೀಸಿ ಟ್ರಿಬ್ಯೂನ್ ವರದಿ ಮಾಡಿದೆ.
ಸಿಟಿ ಯೂನಿಯನ್ ಬ್ಯಾಂಕ್‌ನಲ್ಲೂ ಹಗರಣ ಪಿಎನ್‌ಬಿಯಲ್ಲಿ ನಡೆದಂತೆಯೇ ಸಿಟಿ ಯೂನಿಯನ್ ಬ್ಯಾಂಕ್‌ನ ಚೆನ್ನೈ ಶಾಖೆಯಲ್ಲೂ ಶನಿವಾರ ಇದೇ ರೀತಿಯ ಹಗರಣ ನಡೆದಿದ್ದು, ಸುಮಾರು 12.8 ಕೋಟಿ ರೂ. ಮೌಲ್ಯದ ಮೂರು ಅಕ್ರಮ ವಹಿವಾಟುಗಳು ನಡೆದಿರುವುದು ಪತ್ತೆಯಾಗಿದೆ. ಸಿಟಿ ಯುನಿಯನ್ ಬ್ಯಾಂಕ್‌ನ ಖಾತೆಯಲ್ಲಿ ಯಾವುದೇ ನಮೂದು ಮಾಡದೆಯೇ, ಸ್ವಿಫ್ಟ್ ಫೈನಾನ್ಷಿಯಲ್ ಸಿಸ್ಟಂನಲ್ಲಿ ಎಲ್‌ಒಯುಗಳನ್ನು ನಮೂದಿಸಲಾಗಿದೆ. ಫೆ.7ರಂದು ರಿಕನ್ಸಿಲಿಯೇಶನ್ ಪ್ರಕ್ರಿಯೆಯ ವೇಳೆ ಈ ಅಂಶ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಇತರ ಬ್ಯಾಂಕ್‌ಗೆ ತಕ್ಷಣವೇ ಸೂಚನೆ ನೀಡಲಾಗಿದೆ ಎಂದು ಸಿಟಿ ಯೂನಿಯನ್ ಬ್ಯಾಂಕ ಹೇಳಿದೆ. ದೇಶದ ಕಾವಲುಗಾರ ಆಗಿರಬೇಕಾದ ಮೋದಿ, ನಿದ್ದೆ ಹೊಡೆಯುತ್ತಿದ್ದಾರೆ. ಕಳ್ಳರಿಗೆ ದೇಶವನ್ನು ಲೂಟಿ ಹೊಡೆಯಲು ಅನು ಕೂಲವಾಗುತ್ತಿದೆ. ಇದು ಮುಂದುವರಿದರೆ ದೇಶದ ಅಧಃಪತನ ನಿಶ್ಚಿತ.
ಕಪಿಲ್ ಸಿಬಲ್, ಕಾಂಗ್ರೆಸ್ ನಾಯಕ