ಮಂಡ್ಯ: ಕೋವಿಡ್ ಸೋಂಕಿನ ಎರಡನೇಅಲೆ ಜಿಲ್ಲೆಯಲ್ಲಿ ಮಿತಿ ಮೀರಿದ್ದು, ಜನರುಸಂಕಷ್ಟ ಅನುಭವಿಸುವಂತಾಗಿದೆ. ಲಾಕ್‌ಡೌನ್‌ನಿಂದ ಕಾರ್ಮಿಕರು, ಬಡವರು,ನಿರ್ಗತಿಕರ ಕುಟುಂಬಗಳು ಸಂಕಷ್ಟಕ್ಕೆಸಿಲುಕಿದ್ದು, ಪಡಿತರ ಪಡೆಯಲು ಇನ್ನಿಲ್ಲದಪರದಾಟ ಆರಂಭವಾಗಿದೆ.ಮಂಡ್ಯ ನಗರದಲ್ಲಿಯೇ ಬಹುತೇಕನ್ಯಾಯಬೆಲೆ ಅಂಗಡಿಗಳ ಮುಂದೆಮಂಗಳವಾರ ಉದ್ದುದ್ದ ಸರತಿ ಸಾಲು ಕಂಡುಬಂದಿತು. ಕೆಲವು ಅಂಗಡಿ ಮಾಲೀಕರು ಬೇಗತೆರೆಯದ ಪರಿಣಾಮ ಕಾಯುತ್ತಿದ್ದ ದೃಶ್ಯಕಂಡು ಬಂದಿತು.
ಸರದಿ ಸಾಲು: ನಗರದ ಹೊಸಹಳ್ಳಿ, ಗಾಂಧಿನಗರ, ಸ್ವರ್ಣಸಂದ್ರ, ಸುಭಾಷ್‌ನಗರ,ಕ್ರಿಶ್ಚಿಯನ್ ಕಾಲೋನಿ ಸೇರಿದಂತೆ ಬಹುತೇಕನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿಸಾಲು ಕಂಡು ಬಂದಿತು. ಬೆಳಗ್ಗೆ 7ರಿಂದಲೇಅಂಗಡಿಗಳ ಮುಂದೆ ಸರದಿ ಸಾಲುಆರಂಭಗೊಂಡು ಮಧ್ಯಾಹ್ನ ಕಳೆದರೂತಗ್ಗಿರಲಿಲ್ಲ. ಅಂಗಡಿ ಮಾಲೀಕರು ಒಂದೊಂದು ಕಡೆ ಒಂದೊಂದು ಸಮಯನಿಗದಿ ಮಾಡಿಕೊಂಡು ಪಡಿತರವಿತರಿಸುತ್ತಾರೆ.
ಬೆಳಗ್ಗೆ ಹಾಗೂ ಸಂಜೆ ವೇಳೆವಿತರಣೆಗೆ ಸಮಯ ನಿಗದಿ ಮಾಡಲಾಗಿದೆ.ಅಂಗಡಿಗಳು ತೆರೆಯುವವರೆಗೂಸಾರ್ವಜನಿಕರು ಸರತಿ ಸಾಲಿನಲ್ಲಿ ತಮ್ಮಬ್ಯಾಗು ಹಾಗೂ ಪಡಿತರ ಚೀಟಿಗಳನ್ನಿಟ್ಟುಕಾಯುತ್ತಿದ್ದ ದೃಶ್ಯಕಂಡು ಬಂದಿತು.
ಸಾಮಾಜಿಕ ಅಂತರ ಮಾಯ: ಕೆಲವುಪಡಿತರ ಅಂಗಡಿಗಳ ಮುಂದೆ ಗ್ರಾಹಕರುಯಾವುದೇ ಸಾಮಾಜಿಕ ಅಂತರ ಕಾಪಾಡದೆ ನಿರ್ಲಕ್ಷ್ಯ ವಹಿಸಿದ್ದ ದೃಶ್ಯಕಂಡು ಬಂದಿತು.ಅಂಗಡಿ ಮಾಲೀಕರು ಯಾವಸಮಯದಲ್ಲಿ ತೆಗೆಯುತ್ತಾರೋ ಗೊತ್ತಿಲ್ಲ.ಆದ್ದರಿಂದ ತೆರೆಯುವ ಮುನ್ನವೇ ಸರತಿಸಾಲಿನಲ್ಲಿ ಬ್ಯಾಗುಗಳನ್ನಿಟ್ಟು ಕಾಯುತ್ತಿದ್ದೇವೆ.ಬಿಸಿಲು ಹೆಚ್ಚಾಗುತ್ತಿರುವುದರಿಂದ ಸರತಿಸಾಲಿನಲ್ಲಿ ನಿಲ್ಲಲು ಸಾಧ್ಯವಿಲ್ಲ. ಪಡಿತರಪದಾರ್ಥಗಳನ್ನು ನಂಬಿಕೊಂಡು ಸಾಕಷ್ಟುಕುಟುಂಬಗಳು ಜೀವನ ನಡೆಸುತ್ತಿವೆ. ಇದುಅವರಿಗೆ ಅನಿವಾರ್ಯವೂ ಆಗಿದೆ ಎಂದು ಗ್ರಾಹಕರೊಬ್ಬರು ಅಳಲು ತೋಡಿಕೊಂಡರು.