Advertisement
ಗುರುಗ್ರಹದ ಪ್ರಭಾವಳಿ ಉತ್ತಮವಾಗಿ ದೊರಕಿದಲ್ಲಿ ಈ ವೈಪರೀತ್ಯತಗಳೇ ಉತ್ತಮ ಫಲಗಳನ್ನು ಒದಗಿಸಿ ಕೊಡುವಲ್ಲಿ ಪ್ರಧಾನ ಭೂಮಿಕೆಯನ್ನು ನಿರ್ವಹಿಸುತ್ತದೆ. ಒಂದೊಮ್ಮೆ ಗುರುವಿನ ಫಲಾವಳಿ ದೊರಕದಿದ್ದಲ್ಲಿ ಚಂದ್ರನಿಗೆ ನೀಚಭಂಗದಂತಾ ವೈಶಿಷ್ಟ್ಯ ಹೊಂದಿ ಬಂದಾಗಲೂ ರಾಜಯೋಗವನ್ನೇ ಚಂದ್ರನ ಕಾರುಣ್ಯದಿಂದ ಪಡೆಯುವಲ್ಲಿ ಹೇರಳವಾದ ಅವಕಾಶಗಳನ್ನು ವೃಶ್ಚಿಕ ರಾಶಿಯವರು ಪಡೆದಿರುತ್ತಾರೆ. ಇದೊಂದು ಅನುಪಮವಾದ ಸಂಪನ್ನವಾದ ಅದೃಷ್ಟವೇ ಸರಿ. ಪ್ರಪಂಚ ಕಂಡ ಮಹೋನ್ನತ ಕ್ರಿಕೆಟ್ ಆಲ್ ರೌಂಡರ್ ಸರ್ ಗ್ಯಾರ್ ಫೀಲ್ಡ್ ಸೋಬರ್ಸ್ ಚಂದ್ರನ ನೀಚತ್ವಕ್ಕೆ ಭಂಗ ಪಡೆದ ಕಾರಣದಿಂದಲೂ ವೃಶ್ಚಿಕ ರಾಶಿಯಲ್ಲಿ ಚಂದ್ರನ ಜೊತೆ ಉತ್ತಮವಾದ ಗುರುಗ್ರಹದ ಪ್ರಭಾವದಿಂದ ಗಜಕೇಸರಿ ಯೋಗ ಪಡೆದು ಬಹು ದೊಡ್ಡ ಹೆಸರನ್ನು ಸಂಪಾದಿಸಿದರು. ಇಮ್ರಾನ್ ಖಾನ್ ಕಪಿಲ್ ದೇವ್ ಜಾಕ್ ಕಾಲೀಸ್ ಮುಂತಾದ ಇತ್ತೀಚಿನ ಆಲ್ ರೌಂಡರ್‌ಗಳಿಗಿಂತ ಸೋಬರ್ಸ್ ದಾಖಲೆ ಕ್ರಿಕೆಟ್ನಲ್ಲಿ ಬಹು ದೊಡ್ಡದು. ಜೊತೆಗೆ ಕ್ರೀಡಾ ಸ್ಫೂರ್ತಿ ಅತ್ಯುತ್ತಮ ನಡವಳಿಕೆ ಬಿರುಸಿನ ಆಟದ ವೈಖರಿ ಒತ್ತಡದಲ್ಲೂ ನಿಂತು ಎದುರಾಳಿಯ ಅಬ್ಬರವನ್ನು ಎದುರಿಸುವ ಸ್ಥೈರ್ಯ ಸೋಬರ್ಸ್ ರಲ್ಲಿ ಅಮೋಘವಾಗಿತ್ತು.
Related Articles
Advertisement
ಬೇಗನೆ ತಾಳ್ಮೆ ಕಳೆದುಕೊಳ್ಳುವ ಪ್ರವೃತ್ತಿ ವೃಶ್ಚಿಕ ರಾಶಿಯವರದ್ದು. ನೀರಿನ ಕುರಿತು ನೀರಿನ ಸಂಬಂಧವಾದ ಅಲರ್ಜಿಗಳ ಕುರಿತು ಎಚ್ಚರವಿರಲಿ. ಅಬುìದ ರೋಗ ತಡೆಯುವುದಕ್ಕಾಗಿ ಶ್ರೀ ರಾಜರಾಜೇಶ್ವರಿ, ಮಾರುತಿ, ಈಶ್ವರ ಆರಾಧನೆ, ಸ್ತುತಿ, ಕವಚ, ಶ್ಲೋಕ ಪಠಣ ಮಾಡಿ. ಸ್ಥೈರ್ಯ ಹಾಗೂ ಧೈರ್ಯ ತೂಕ ತಪ್ಪದ ನಿಶ್ಚಲ ಹಾಗೂ ಸಮತೋಲನ ಭಾವದಲ್ಲಿರಲಿ. ಅತಿಯಾದ ಆತ್ಮಶ್ವಾಸ ಅತಿಯಾದ ಅಧೈರ್ಯ ಕೈಬಿಡಿ. ವೈವಾಹಿಕ ಜೀವನದಲ್ಲಿ ಬಾಳ ಸಂಗಾತಿಗಳ ಕುರಿತು ನಿರ್ಲಕ್ಷ್ಯ ಕೊಂಕು ಮಾತು ಬೇಡ. ಎಂಜಿನಿಯರಿಂಗ್ ಸಂಗೀತ ಸಿದ್ಧಿ ಇವುಗಳಿಂದ ಧನಾರ್ಜನೆಗೆ ವಿಪುಲ ಅವಕಾಶಗಳಿರುತ್ತವೆ. ಗುರುಗ್ರಹ ಸಂಪನ್ನತೆ ಯುಕ್ತವಾದ ರೀತಿಯಲ್ಲಿ ಶಕ್ತಿ ಪಡೆದಾಗ ವಿಜಾnನ ಮೇಧಾವಿತನ ಪಾಂಡಿತ್ಯ ಹಾಗೂ ವಿದ್ವತ್ತುಗಳು ನಿರಾಯಾಸವಾಗಿ ಒದಗಿ ಬರುತ್ತದೆ.
ಎಪಿಜೆ ಅಬ್ದುಲ್ ಕಲಾಂ ಕಂಚಿ ಗುರುಪೀಠದ ಚಂದ್ರಶೇಖರ ಸಂಸ್ಕೃತಿ ಸ್ವಾಮಿಗಳು ಸಿಖ್ ಗುರು ಗುರುಗೋಂದ ಸಿಂಗ್ ವರ್ಣಕಲಾದ ಪ್ಯಾಬ್ಲೋ, ಪಿಕಾಸೋ, ಸಿತಾರ್ ಮಾಂತ್ರಿಕ ಪಂಡಿತ್ ರವಿಶಂಕರ್, ಲೇಖಕ ಹಾಗೂ ವರ್ಣ ಕಲಾದ ಖಲೀಲ್ ಗಿಬ್ರಾನ್ ಪಾಂಡಿತ್ಯ ಹಾಗೂ ಸಂಗೀತ ಸಿದ್ಧಿಗಳಲ್ಲಿ ಹೆಸರು ಮಾಡಿದ ವೃಶ್ಚಿಕ ರಾಶಿಯ ಪ್ರಸಿದ್ಧರು. ಭಾರತದಲ್ಲಿ ಪ್ರಧಾನಿಯಾಗಲು ಭವಿಷ್ಯದಲ್ಲಿ ಅವಕಾಶ ಇರುವ ರಾಹುಲ್ ಗಾಂಧಿ, ಅವರ ಸೋದರಿ ಪ್ರಿಯಾಂಕ, ಅದ್ಭುತ ಪ್ರತಿಭೆಯ ನಟ ಕಮಲ್ ಹಾಸನ್, ವೈರುಧ್ಯಗಳ ನಡುವೆಯೂ ಪ್ರಸಿದ್ಧ ಅಂಕಣಗಾರ್ತಿಯಾದ ಶೋಭಾ ಡೇ, ತನ್ನ ಸೌಂದರ್ಯದಿಂದ ಎಲ್ಲರನ್ನೂ ಹುಚ್ಚೆಬ್ಬಿಸಿದ್ದ ನಟಿ ಎಲಿಜಿಬಿತ್ ಟೇಲರ್, ಕ್ರಿಕೆಟ್‌ಕಲಿ ಕಪಿಲ್ ದೇವ್, ಕುಬj ಕಾಯ ಆದರೆ ಆಕರ್ಷಕ ವ್ಯಕ್ತಿತ್ವದ ನಟ ಸಂಜೀವ್ ಕುಮಾರ್ ಪ್ರಸ್ತುತ ಶನಿಕಾಟದಲ್ಲಿ ಒದ್ದಾಡುತ್ತಿರುವ ಹಿಂದೆ ಸುಮಾರು ಒಂದು ದಶಕದ ಕಾಲ ಪಾಕಿಸ್ತಾನವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಜನರಲ್ ಪರ್ವೇಜ್ ಮುಶ್ರಫ್, ಇತ್ಯಾದಿ ಇತ್ಯಾದಿ ವೃಶ್ಚಿಕರಾಶಿಯವರ ಪಟ್ಟಿ ಇದೆ. ಆರ್ಮನಿಯ ಸಂಗೀತ ದಿಗ್ಗಜ ಬಿಥೋನ್ ಕೂಡಾ ಈ ರಾಶಿಯವರೇ.
ಮಿಲಿಯನ್ನ ಡಾಲರ್ ಪ್ರಶ್ನೆ ಎದುರಾಗುತ್ತಿದೆ. ಪ್ರಸ್ತುತ ಶನಿಕಾಟ ಎದುರಿಸುತ್ತಿರುವ ರಾಹುಲ್ ಗಾಂಧಿ 2019 ರ ಚುನಾವಣೆಯನ್ನು ಹೇಗೆ ಎದುರಿಸಬಹುದು? ರಾಹುಲ್ ಅವರು ಸಾಗಬೇಕಾದ ದೂರ ಸುಲಭದ ಗೆಲುವಲ್ಲಿ ಕೈ ಜೋಡಿಸುವ ಮಟ್ಟದ್ದಲ್ಲ. ಅಪ್ರಸ್ತುತ ಆಗಲಾರದು. ಆದರೆ ಪ್ರಧಾನಿ ಪಟ್ಟದ ಪ್ರಶ್ನೆ ಇದ್ದೇ ಇರುತ್ತದೆ. ಈಗ ಚಂದ್ರ ದಶಾಕಾಲ ಕೂಡಾ ನಡೆಯುತ್ತಿದೆ. ಶನಿಕಾಟವೂ ನೀಚ ಚಂದ್ರನ ದಶಾಕಾಲವೂ ರಾಹುಲರನ್ನು ಅತ್ಯಂತ ಬಿಗಿ ಬಂದೋಬಸ್ತಿನಲ್ಲಿ ಇರಿಸಿದೆ. ಕಾಯಬೇಕಾದವನು ಶನೈಶ್ಚರನೇ ಆಗಿದ್ದಾನೆ. ಕಾಯುವ, ಕಾಯ ಬೇಕಾದ ಶನೈಶ್ಚರ ನೀಚ ಚಂದ್ರನ ಬಿಗಿ ತಪ್ಪಿಸಿಕೊಳ್ಳಲು ರಾಹುಲ್ ಅಸಾಧಾರಣ ಮಾತಿನ ಚೈತನ್ಯ ಸಮಯ, ವ್ಯವಧಾನಗಳ ಸೂಕ್ತ ಉಕ್ತಿಗಳಿಂದ ಎದುರಾಳಿಗಳನ್ನು ಎದುರಿಸಬೇಕು. ಬಿಗಿ ಭದ್ರತೆಯೂ ಮುಖ್ಯ.
ಅನಂತ ಶಾಸ್ತ್ರೀ