Advertisement
ಕೇವಲ ಅಂಕವೊಂದನ್ನೇ ಮೂಲ ಗುರಿಯನ್ನಾಗಿಸಿಕೊಂಡು ಶತ ಪ್ರಯತ್ನ ಮಾಡಿ ಅತ್ಯುತ್ತಮ ರ್‍ಯಾಂಕ್ ಪಡೆಯುವಂಥಹ ವಿದ್ಯಾರ್ಥಿಗಳು, ಅನೇಕರು ವ್ಯವಹಾರಿಕ ಬದುಕಿನಲ್ಲಿ ಸೋಲುತ್ತಾರೆ. ಶಾಲೆಯಲ್ಲಿ ಮೊದಲ ಸ್ಥಾನದಲ್ಲಿರುವವರು, ಕಾಲೇಜುಗಳಲ್ಲಿ ರಾಂಕ್ ಪಡೆದವರು ನಾಲ್ಕೂ ಜನರೆದುರು ನಿಂತು ಮಾತನಾಡಲೂ ಹಿಂಜರಿಯುತ್ತಾರೆ. ಒಬ್ಬೊಬ್ಬರೆ ಹೊರಗೆ ಹೋಗಲು ಹೆದರುತ್ತಾರೆ. ಪುಸ್ತಕದ ಬದನೆ ಕಾಯಿಯೊಂದು ಬಿಟ್ಟರೆ ಬೇರೇನೂ ಗೊತ್ತಿರೋದಿಲ್ಲ ಅವರಿಗೆ. ಆದರೆ ಶಾಲಾ-ಕಾಲೇಜು ಪರೀಕ್ಷೆಯಲ್ಲಿ ಸೋತವರು ಜೀವನದ ಪರೀಕ್ಷೆಯಲ್ಲಿ ಗೆಲ್ಲುವಲ್ಲಿ ಸಫಲರಾದ ಉದಾಹರಣೆಗಳಿದೆ. ಹಾಗಂತ ಜೀವನದಲ್ಲಿ ಗೆಲ್ಲಲು ಇಂತಹದೆ ನಿರ್ದಿಷ್ಟ ಕಾರಣ ಅಥವಾ ಸೂತ್ರಗಳೇನು ಬೇಕಾಗಿಲ್ಲ. ಸಮಾಜವನ್ನು ತೆರೆದ ಕಣ್ಣಿನಿಂದ ನೋಡಬೇಕು.
Related Articles
Advertisement
ಇದರಿಂದ ಮುಂದಕ್ಕೆ ಅನಾಹುತಗಳಾಗುವ ಸಾಧ್ಯತೆಗಳಿರುತ್ತದೆ. ಮನಸ್ಸಿಲ್ಲದ ವಿಷಯಗಳ ಕುರಿತು ಅಧ್ಯಯನ ನಡೆಸಲು ಇಷ್ಟವಿಲ್ಲದಿದ್ದಾಗ, ಮಕ್ಕಳು ದಾರಿ ತಪ್ಪುತ್ತಾರೆ. ಈ ಕಾರಣದಿಂದಾಗಿ ಬಹಳ ಚಿಂತಗ್ರಸ್ಥರಾಗಿ ಬದುಕಿನ ಗುರಿ ಅಸ್ಪಷ್ಟವಾಗುತ್ತದೆ. ವಿಪರೀತ ಗೊಂದಲ ನಿರ್ಮಾಣವಾಗಿ ಬದುಕೇ ಬೇಸರವೆನಿಸುತ್ತದೆ.
ಇದಕ್ಕಾಗಿ ನಾವೂ ಈ ಒತ್ತಡಗಳಿಂದ ದೂರವಿರಲು ನಮಗೆ ಆಸಕ್ತಿಯಿದ್ದ ವಿಷಯದಲ್ಲಿಯೆ ಹೆಚ್ಚಿನ ವಿದ್ಯಾಬ್ಯಾಸ ಮಾಡಬೇಕು. ನಮ್ಮ ಭವಿಷ್ಯವನ್ನು ನಾವೇ ಉತ್ತಮವಾಗಿ ರೂಪಿಸಿಕೊಳ್ಳಬೇಕು. ಕೆಟ್ಟ ನಿರ್ಧಾರಗಳನ್ನು ತೆಗೆದುಕೊಂಡು ಅನಂತರ ಎಲ್ಲ ಹಣೆಬರಹ, ವಿಧಿಯಾಟ ಎಂದುಕೊಳ್ಳುವುದು ನಿಜವಾಗಿಯು ಮೂರ್ಖತನ. ಹೆಚು ಶ್ರಮವಹಿಸಿ ಅಧ್ಯಯನವನ್ನು ನಡೆಸಬೇಕು. ಪ್ರತಿಯೊಬ್ಬ ಸಾಧಕನು ತನ್ನ ಸಾಧನೆಯ ಹಾದಿಯಲ್ಲಿ ಸ್ಫರ್ದೆಗಳಿಂದಲೇ ಮುಂದೆ ಬಂದಿರುತ್ತಾನೆ. ಹಾಗೆಯೇ ನಾವು ಕೂಡ ಮುಂದುವರೆಯಬೇಕು. ಗೆಲುವನ್ನು ಬೇರೆಯವರಿಗೆ ಯಾವತ್ತಿಗೂ ಬಿಟ್ಟುಕೊಡಬಾರದು ಎಂಬ ಹಠವಿರಬೇಕು. ಇಂಥಹ ಹಠವೇ ಸಾಧನೆಯ ಮೆಟ್ಟಿಲುಗಳಾಗುತ್ತದೆ. ಈ ಬಗೆಗೆ ತಿಳಿದವರು ಹೇಳಿದ ಮಾತುಗಳು ನಿತ್ಯ-ಸತ್ಯವಾಗಿದೆ. ಸ್ವಾಮಿ ವಿವೇಕನಂದರ ಒಂದು ಉತ್ತಮ ನುಡಿಯು ಜೀವನಾದರ್ಶವಾಗಿದೆ.
ಯಾರ ಮಾತಿಗೂ ನೀ ಅಂಜಬೇಡಯಾರ ಆಸೆಯಂತೆಯು ನೀ ಇರಬೇಡ
ಯಾರನ್ನು ನೀ ನಂಬಿ ಬದುಕಬೇಡ
ನಿನ್ನ ಜೀವನ ನಿನಗೆ, ನೀ ಮರೆಯಬೇಡ
ಎಂದು ಅದ್ಭುತವಾದ ಮಾತನ್ನು ಹೇಳಿದ್ದಾರೆ. ಸೋತೆ ಎಂದು ನಾವು ಮುಂದಿಟ್ಟಹೆಜ್ಜೆಯನ್ನು ಹಿಂದಿಡಬಾರದು. ಏಕೆಂದರೇ, ಯಾರಿಗೆ ಗೊತ್ತು ಆ ಹೆಜ್ಜೆ ನಿಮ್ಮ ಇತಿಹಾಸವನ್ನೇ ಸೃಷ್ಟಿಸುವ ಹೆಜ್ಜೆಯಾಗಿರಬಾರದು, ಅಲ್ಲವೇ. ಕೆಲವೊಂದು ಬಾರಿ ಕೆಟ್ಟ ದಿನಗಳು ಬರುವುದು ಸಹಜ ಅಂದ ಮಾತ್ರಕ್ಕೆ ಜೀವನವೇ ಕೆಟ್ಟದಾಗಿರಬೇಕೆಂದಿಲ್ಲ ರಾತ್ರಿ ಕಳೆದು ಹೇಗೆ ಹಗಲು ಬರುತ್ತದೆಯೋ ಹಾಗೆಯೇ ಒಳ್ಳೆಯ ದಿನಗಳು ಬಂದೇ ಬರುತ್ತದೆ. ಆತ್ಮವಿಶ್ವಾಸ, ಕೃತಜ್ಞತ ಭಾವ, ದೃಢ ವಿಶ್ವಾಸ ಇದ್ದರೆ ಯಶಸ್ಸು ಯಾವತ್ತಿಗೂ ನಮ್ಮೊಂದಿಗಿರುತ್ತದೆ.
ನಿಶ್ಮಿತಾ ಹಳೆಮುಂಡ್ಲ, ಸಂತ ಫಿಲೋಮಿನಾ ಕಾಲೇಜು, ಪುತ್ತೂರು