Advertisement

ಅಂಕಪಟ್ಟಿ ವಿಳಂಬ: ಸೀಟು ತಪ್ಪುವ ಆತಂಕ

11:21 AM Jul 14, 2017 | |

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ದ್ವಿತೀಯ ಪಿಯುಸಿ ಅಂಕಪಟ್ಟಿ ವಿತರಿಸಲು ವಿಳಂಬವಾದ ಹಿನ್ನೆಯಲ್ಲಿ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸೆಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಸೀಟು ಕೈ ತಪ್ಪುವ ಭೀತಿ ಎದುರಾಗಿದೆ. 

Advertisement

ಮೇ ತಿಂಗಳಲ್ಲೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದರೂ, ಇನ್ನು ಅಂಕ ಪಟ್ಟಿ ವಿತರಣೆ ಮಾಡಿಲ್ಲ. ಹೀಗಾಗಿ ಐಐಟಿ ಮೊದಲಾದ ಪ್ರತಿಷ್ಠಿತ ಸಂಸ್ಥೆಯಲ್ಲಿ ಸೀಟು ಪಡೆಯಲು ರಾಜ್ಯದ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಅಂಕಪಟ್ಟಿಯ ಮೂಲಪತ್ರಿಯನ್ನು ದಾಖಲೆ ಪರಿಶೀಲನೆ ಸಂದರ್ಭದಲ್ಲಿ ನೀಡಬೇಕಾಗಿರುವುದರಿಂದ ವಿದ್ಯಾರ್ಥಿಗಳು ಹಾಗೂ ಪಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪಿಯು ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ಕತ್ತಲೆಗೆ ಜಾರುತ್ತಿದೆ. ದ್ವಿತೀಯ ಪಿಯುಸಿ ಫಲಿತಾಂಶಬಂದು ಎರಡು ತಿಂಗಳಾದರೂ ಅಂಕಪಟ್ಟಿ  ವಿತರಣೆ ಆಗದೇ ಇರುವುದರಿಂದ ಸಿಇಟಿ ಪ್ರಥಮ ಸ್ಥಾನ ಪಡೆದ ಪ್ರತೀಕ್‌ ನಾಯಕ್‌ ಅವರಿಗೆ ಐಐಟಿ ಗುವಾಹಟಿ ಸಿಗಬೇಕಿರುವ ಸೀಟು ಕೈತಪ್ಪುವ ಸಾಧ್ಯತೆ ಇದೆ. ಮೂಲ ಅಂಕಪಟ್ಟಿ ಕೊಡದೆ ಸೀಟು ನೀಡುವುದಿಲ್ಲ ಎಂದು ಐಐಟಿ ಪಟ್ಟು ಹಿಡಿದಿದೆ. 

ಇತ್ತ ಪಿಯು ಇಲಾಖೆ ಈಗಷ್ಟೆ ಅಂಕಪಟ್ಟಿ ಮುದ್ರಣಕ್ಕೆ ಹೈದರಬಾದ್‌ಗೆ ಕಳುಹಿಸಿದೆ. ಇಲಾಖೆಯು ಮೂಲ ಅಂಕ ಪಟ್ಟಿ ಬದಲಿಗೆ ನಮ್ಮಲ್ಲಿಯೇ ಅಂಕಪಟ್ಟಿ ಇದೆ ಎಂಬ ಸ್ಪಷ್ಟನೆ ಪತ್ರವನ್ನು ವಿದ್ಯಾರ್ಥಿಗಳಿಗೆ ನೀಡಿ ಕೈತೊಳೆದುಕೊಳ್ಳುತ್ತಿದೆ. ಇದೇ ರೀತಿ ವಿದೇಶಗಳ ಕಾಲೇಜುಗಳಲ್ಲಿಯೂ ಸೀಟು ಕಳೆದುಕೊಳ್ಳುವ ಆತಂಕವನ್ನು ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next