Advertisement

ಜಗತ್ತಿನ ಅತೀ ದೊಡ್ಡ ಜ್ವಾಲಾಮುಖಿ ಪೂಹಾಹೊನು

12:29 PM Jun 11, 2020 | mahesh |

ಹವಾಯ್‌ನ ಪಪಹಾನೋಮೊಕುವಾಕಿಯಾ ಎಂಬ ಸಾಗರ ಪ್ರದೇಶದಲ್ಲಿ ಇರುವ ಪೂಹಾಹೊನು ಜ್ವಾಲಾಮುಖಿ, ಜಗತ್ತಿನ ಅತಿ ದೊಡ್ಡ, ಅತಿ ಉಷ್ಣಾಂಶವಿರುವ ಶೀಲ್ಡ್‌ ಜ್ವಾಲಾಮುಖಿ ಎಂದು ಹವಾಯ್‌ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ. ಈವರೆಗೆ ಅತಿ ದೊಡ್ಡ ಶೀಲ್ಡ್‌ ಜ್ವಾಲಾಮುಖಿ ಎಂದೇ ಖ್ಯಾತಿ ಗಳಿಸಿರುವ ಮೌನಾ ಲೋವಾಕ್ಕಿಂತ ಇದು ಎರಡು ಪಟ್ಟು ದೊಡ್ಡದಿದೆ ಎಂದು ಅವರು ತಿಳಿಸಿದ್ದಾರೆ.

Advertisement

ಶೀಲ್ಡ್‌ ಜ್ವಾಲಾಮುಖಿ ಎಂದರೇನು?
ಇವು ವಿಶೇಷ ಜ್ವಾಲಾಮುಖಿಗಳಾಗಿದ್ದು, ದೊಡ್ಡದಾದ ಹೆಬ್ಬಂಡೆಯ ಅಡಿಯಲ್ಲಿ ಭೂಮಿಯ ತಳದಲ್ಲೋ, ಸಮುದ್ರದ ಆಳದಲ್ಲೋ ಗುಪ್ತವಾಗಿರುತ್ತವೆ. ಇದರಲ್ಲಿನ ಲಾವಾರಸ ಉಕ್ಕಿ ಹರಿಯುವ ಸಂದರ್ಭ ಬಂದಾಗ ಅದು ಹೆಬ್ಬಂಡೆಯ ನಡುವೆಯೇ ದಾರಿ ಮಾಡಿಕೊಂಡು ಹೊರಕ್ಕೆ ಚಿಮ್ಮುತ್ತದೆ.

ಏನಿದರ ವಿಶೇಷತೆ?
ಸಮುದ್ರದ ನೆಲದೊಳಗೆ ಈ ಜ್ವಾಲಾಮುಖಿ, 176 ಮೈಲುಗಳ ಅಗಲ ಹಾಗೂ 56 ಮೈಲುಗಳವರೆಗೆ ಹರಡಿಕೊಂಡಿದೆ. ಈ ಪರ್ವತದ ಮೇಲೆ ಅಗಾಧವಾದ ಹೆಬ್ಬಂಡೆಯ ಹೊದಿಕೆಯಿದ್ದು ಅದರ ತುದಿಯ 170 ಅಡಿ ಮಾತ್ರ ಸಮುದ್ರದ ಮೇಲಕ್ಕೆ ಗೋಚರಿ ಸುತ್ತದೆ. ಈ ಜ್ವಾಲಾಮುಖಿಯ ಉಷ್ಣಾಂಶ 3,092 ಡಿಗ್ರಿ ಫ್ಯಾರೆನ್‌ಹೀಟ್‌ ಇದ್ದು, ಉಳಿದ ಜ್ವಾಲಾಮುಖೀಗಳಿಗಿಂತ ಅತಿ ಹೆಚ್ಚು ಎಂದು ಹೇಳಲಾಗಿದೆ.

ಪೂಹಾಹೊನು ಎಲ್ಲಿದೆ ?
ಹವಾಯ್‌ ರಾಜ್ಯದ ರಾಜಧಾನಿಯಾದ ಹೊನೊಲುಲುವಿನಿಂದ ಸುಮಾರು 620 ಮೈಲುಗಳಷ್ಟು ದೂರದಲ್ಲಿರುವ ಪಪಹಾನೋಮೊಕುವಾಕಿಯಾ ಪ್ರಾಂತ್ಯದ ಸಮುದ್ರದೊಳಗೆ ಈ ಜ್ವಾಲಾಮುಖಿಯಿದೆ. ಈ ಪ್ರದೇಶವನ್ನು ರಾಷ್ಟ್ರೀಯ ಸ್ಮಾರಕ ಎಂದು ಈ ಹಿಂದೆಯೇ ಹವಾಯ್‌ ಸರಕಾರ‌ ಘೋಷಿಸಿತ್ತು.

176 * 56 ಸಾಗರದಡಿಯಲ್ಲಿ ಜ್ವಾಲಾಮುಖೀಯ ವ್ಯಾಪ್ತಿ
3,092 ಜ್ವಾಲಾಮುಖೀಯ ಉಷ್ಣಾಂಶ ಇಷ್ಟು ಡಿಗ್ರಿ ಫ್ಯಾರೆನ್‌ಹೀಟ್‌
620 ಮೈಲು. ಹೊನೊಲುಲುವಿನಿಂದ ಜ್ವಾಲಾಮುಖಿ ಇರುವ ದೂರ

Advertisement
Advertisement

Udayavani is now on Telegram. Click here to join our channel and stay updated with the latest news.

Next