Advertisement
1933ರ ಜು. 20ರಂದು ಜನಿಸಿದ್ದ ನರಸಿಂಹ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಇ ಪದವಿ ಪಡೆದ ಬಳಿಕ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಹಾಗೂ ಕ್ಯಾಲಿಫೊರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಉನ್ನತ ವ್ಯಾಸಂಗ ಮತ್ತು ಸಂಶೋಧನೆ ನಡೆಸಿದ್ದರು.‘ಫ್ಲುಯಿಡ್ ಡೈನಮಿಕ್ಸ್’ ಅವರ ನೆಚ್ಚಿನ ಹಾಗೂ ಪರಿಣತಿಯ ಕ್ಷೇತ್ರವಾಗಿತ್ತು. 200ಕ್ಕೂ ಅಧಿಕ ಸಂಶೋಧನಾ ಪ್ರಕಟಣೆಗಳ ಲೇಖಕರಾಗಿ ನೂರಾರು ಯುವ ವಿಜ್ಞಾನಿಗಳಿಗೆ ಮಾರ್ಗದರ್ಶಕರಾಗಿ ಅವರು ಜನಪ್ರಿಯರಾಗಿದ್ದರು.