Advertisement
ಮಣಿಪಾಲದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದಿಂದಲೇ ಒಂದು ತಂಡವನ್ನು ಕರ್ನಾಟಕ ಹಾಗೂ ತಮಿಳುನಾಡಿಗೆ ಕಳುಹಿಸಿ ವಸ್ತುಸ್ಥಿತಿಯ ಅಧ್ಯಯನಕ್ಕೆ ಮನವಿ ಮಾಡಿಕೊಂಡಿದ್ದೇವೆ. ಇದು ಎರಡು ರಾಜ್ಯಗಳ ಸಮಸ್ಯೆಯೇ ಹೊರತು, ಭಾರತ-ಪಾಕಿಸ್ಥಾನದ ಸಮಸ್ಯೆಯಲ್ಲ. ಹೀಗಾಗಿ ಬಗೆಹರಿಸಿಕೊಳ್ಳ ಬಹುದು ಎಂದರು.
Related Articles
ತಮಿಳುನಾಡಿನಲ್ಲಿರುವ ಆಡಳಿತ ಪಕ್ಷವು ಐಎನ್‌ಡಿಐಎ ಜತೆ ಇರುವುದರಿಂದ ರಾಜ್ಯದ ಮುಖ್ಯಮಂತ್ರಿ ಸಹಿತ ಪ್ರಮುಖರು ತಮಿಳುನಾಡಿನ ಮುಖ್ಯಮಂತ್ರಿಯವರೊಂದಿಗೆ ಸ್ನೇಹಯುತ ಮಾತುಕತೆ ನಡೆಸಿ, ಕಾವೇರಿ ನೀರನ್ನು ಹೆಚ್ಚುವರಿಯಾಗಿ ಬಿಡಲು ಸಾಧ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಬೇಕು. ಈ ರೀತಿಯ ಫ್ರೆàಂಡ್ಲಿ ಟಾಕ್ ಆದಷ್ಟು ಬೇಗ ಆರಂಭವಾದರೆ ಉತ್ತಮ ಎಂದರು.
Advertisement
ರಾಜ್ಯ ವೈಜ್ಞಾನಿಕ ವರದಿಯಂತೆವಾದ ಮಂಡಿಸಿದೆ: ಹೆಬ್ಬಾಳ್ಕರ್
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಪಾಲಿಸಬೇಕಾಗುತ್ತದೆ. ನೆಲ ಜಲದ ಸಂರಕ್ಷಣೆಯ ಕೆಲಸ ರಾಜ್ಯ ಸರಕಾರ ಮಾಡುತ್ತಿದೆ. ಇನ್ನಷ್ಟು ಮಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ರಾಜ್ಯ ಸರಕಾರ ಎಲ್ಲ ವರದಿಗಳನ್ನು ಇಟ್ಟುಕೊಂಡೇ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದೆ. ರಾಜ್ಯ ಸರಕಾರದ ಬಳಿ ವೈಜ್ಞಾನಿಕ ವರದಿ ಇಲ್ಲ, ವಾದ ಮಂಡಿಸಿಲ್ಲ ಎಂದು ಆರೋಪಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಹೇಗೆ ವಾದ ಮಂಡಿಸಬೇಕು ಎಂಬುದನ್ನು ಹೇಳಿಕೊಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದರು.