Advertisement

ವೈಜ್ಞಾನಿಕ ಕೃಷಿ ಪದ್ಧತಿ ರೈತರಿಗೆ ಪ್ರಯೋಜನಕಾರಿ

01:02 PM Jun 11, 2017 | |

ಜಗಳೂರು: ರೈತರು ತಮ್ಮ ಬೇಸಾಯದ ಕ್ರಮದಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಹೆಚ್ಚು ಇಳುವರಿ ಪಡೆಯಬೇಕೆಂದು ಶಾಸಕ ಎಚ್‌.ಪಿ. ರಾಜೇಶ್‌ ಕರೆ ನೀಡಿದರು. ಇಲ್ಲಿನ ತಾಲೂಕು ಪಂಚಾಯತ್‌ ಆವರಣದಲ್ಲಿ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ರೈತರ ಬದಕು ಹಸನಾಗಲಿ ಎಂಬ ಉದ್ದೇಶದಿಂದ ಮತ್ತು ಕೃಷಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ವೈಜ್ಞಾನಿಕ ಪದ್ಧತಿಯಲ್ಲಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲಿ ಕೃಷಿ ಭಾಗ್ಯ ಯೋಜನೆ ಪ್ರಮುಖವಾಗಿದೆ. ಇದು ರೈತರಿಗೆ ಬಹು ಉಪಯೋಗವಾಗಿದೆ ಎಂದು ತಿಳಿಸಿದರು. 

ಹವಾಮಾನದ ವೈಫರಿತ್ಯದಿಂದಾಗಿ ಮಳೆ ಕ್ಷೀಣವಾಗುತ್ತಿರುವ ಇಂದಿನ ದಿನಮಾನಗಳನ್ನು ದೂರ ಮಾಡಲು ಹಾಗೂ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಕೃಷಿ ಹೊಂಡಗಳ ಮೂಲಕ ಮಳೆಯ ನೀರನ್ನು ಶೇಖರಿಸಿ. ಅದರಿಂದ ಆ ನೀರನ್ನು ಬಳಕೆ ಮಾಡಿಕೊಂಡು ಬೆಳೆಗಳನ್ನು ಬೆಳೆಯುವಂತಹ ವೈಜ್ಞಾನಿಕ ಪದ್ಧತಿ ರೈತರಿಗೆ ಅತ್ಯಂತ ಪ್ರಯೋಜನಕಾರಿ ಎಂದರು.

ಒಂದು ಜಮೀನಿನಲ್ಲಿ ನಿರಂತರವಾಗಿ ಒಂದೇ ಬೆಳೆಯನ್ನು ಅಳವಡಿಸುವ ಪ್ರವೃತ್ತಿಯನ್ನು ರೈತರು ಕೈಬಿಡಬೇಕು. ಕೃಷಿ ಅ ಧಿಕಾರಿಗಳ ಸಲಹೆಯಂತೆ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡು ಅತ್ಯುತ್ತಮ ಇಳುವರಿ ಪಡೆದು ಹೆಚ್ಚು ಲಾಭ ಗಳಿಸುವಂತೆ ಕಿವಿ ಮಾತು ಹೇಳಿದರು. 

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ಬಸವನಗೌಡ ಈರುಳ್ಳಿ ಬೆಳೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿ, ಜಗಳೂರು ತಾಲೂಕಿನ ಮಲ್ಲಾಪುರ ಸುತ್ತಮುತ್ತ ಹೆಚ್ಚು ಈರುಳ್ಳಿ ಬೆಳೆಯಲಾಗುತ್ತಿದೆ. ಇದು ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭವನ್ನು ಪಡೆಯಬಹುದಾಗಿದೆ. ಈ ಬೆಳೆಗೆ ಕಳೆ ಶತ್ರು ಹೀಗಾಗಿ ಬಿತ್ತನೆ ಮಾಡುವ ಮುಂಚೆ ಅಂದರೆ ಮಾರ್ಚ್‌ನಲ್ಲಿ ಮಾಗಿ ಮಾಡಬೇಕು. 

Advertisement

ಇದರಿಂದ ಬಿಸಿಲಿಗೆ ಕಳೆಯ ಬೀಜಗಳು ಸಂಪೂರ್ಣ ನಾಶವಾಗುತ್ತವೆ. ಈ ಕ್ರಮ ಅನುಸರಿಸುವುದರಿಂದ ಕಳೆ ಖರ್ಚು ಕಡಿಮೆಯಾಗುತ್ತದೆ. ಜಗಳೂರು ಮತ್ತು ಹರಪನಹಳ್ಳಿ ತಾಲೂಕಿನ ವಾತಾವರಣಕ್ಕೆ ಅವಿಷ್ಕರಿಸಿರುವಂತಹ ಬಿಮಾ ಸೂಪರ್‌ ಎಂಬ ಈರಳ್ಳಿ ಬೀಜವನ್ನು ಬಿತ್ತನೆ ಮಾಡುವಂತೆ ಅವರು ಸಲಹೆ ನೀಡಿದರು.

ಹರಪನಹಳ್ಳಿ ಕೃಷಿ ಉಪನಿರ್ದೇಶಕಿ ಸ್ಫೂರ್ತಿ ಮಾತನಾಡಿ, ತಾಲೂಕಿನ ಮೂರು ಹೋಬಳಿಯಲ್ಲಿ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಗೊಬ್ಬರ, ರಿಯಾಯಿತಿ ದರದಲ್ಲಿ ನೀಡಲು ತಯಾರಿ ನಡೆಸಿಕೊಳ್ಳಲಾಗಿದೆ. ಲೂಸ್‌ ಬೀಜಗಳನ್ನು ರೈತರು ಖರೀದಿಸಬಾರದು. ಕೃಷಿ ಇಲಾಖೆಯ ಶಿಫಾರಸ್ಸಿನ ಅ ಧಿಕೃತ ಬೀಜದ ಪಾಕೇಟ್‌ಗಳನ್ನು ಖರೀದಿಸಿ ಬಿತ್ತನೆ ಮಾಡುವಂತೆ ಸಲಹೆ ನೀಡಿದರು. 

ತಾಪಂ ಉಪಾಧ್ಯಕ್ಷ ಮುದೇಗೌಡ್ರು ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ಯು.ಜಿ.ಶಿವಕುಮಾರ್‌, ಸದಸ್ಯರಾದ ಎನ್‌.ಎಸ್‌.ರಾಜು, ಮಲ್ಲಿಕಾರ್ಜುನ್‌, ತಾಪಂ ಸದಸ್ಯರಾದ ಟಿ.ಬಸವರಾಜ್‌, ಎಸ್‌.ಸಿ.ಬಸವರಾಜ್‌, ಕುಬೇಂದ್ರಪ್ಪ, ಕೃಷಿ ಬೇಸಾಯ ತಜ್ಞ ಡಾ| ಮಲ್ಲಿಕಾರ್ಜುನ, ಮಣ್ಣು ವಿಜ್ಞಾನಿ ಎಚ್‌.ಎಂ. ಸಣ್ಣಗೌಡ್ರು,

-ಡಾ| ದೇವರಾಜ್‌, ಸಾವಯುವ ಕೃಷಿ ತಜ್ಞ ಎಚ್‌.ವಿ.ಸಜ್ಜನ್‌, ಕೃಷಿ ಸಹಾಯ ನಿರ್ದೇಶಕ ಕೆ.ಟಿ. ಬಸಣ್ಣ, ತೋಟಗಾರಿಕೆ ಉಪನಿರ್ದೇಶಕರಾದ ಡಾ| ವೇದಮೂರ್ತಿ, ರಾಘವೇಂದ್ರಪ್ರಸಾದ್‌, ಪಪಂ ಸದಸ್ಯ ಚಂದ್ರಪ್ಪ, ಕಾಡಾ ಸದಸ್ಯ ಪಲ್ಲಾಗಟ್ಟೆ ಶೇಖರಪ್ಪ, ಕೃಷಿ ಅಧಿ ಕಾರಿಗಳಾದ ಗೋವಿಂದನಾಯ್ಕ, ಉಮೇಶ್‌ ಸೇರಿದಂತೆ ಮತ್ತಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next