Advertisement
6 ಮತ್ತು 7ನೇ ತರಗತಿ ಹಿರಿಯ ಪ್ರಾಥಮಿಕ ಶಾಲೆಯ ವಿಭಾಗದಲ್ಲಿ ಪ್ರಥಮ ಬಹುಮಾನ ಗುಜರಾತನ ರಾಜಕೋಟಾದ ಶ್ರೀ ಜಿ.ಕೆ.ದೋಲಕೈಯಾ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ನಿರ್ಮಿಸಿದ ಅಂಧರಿಗೆ ಉಪಯೋಗವಾಗುವ ಸ್ಮಾರ್ಟ್ ಸ್ಟಿಕ್‌ಗೆ ಪ್ರಥಮ ಸ್ಥಾನ ಬಂದಿದ್ದು,
Related Articles
Advertisement
ಪಿಯುಸಿ, ಐಟಿಐ ಹಾಗೂ ಡಿಪ್ಲೋಮಾ ವಿಭಾಗದಲ್ಲಿ ಬೆಳಗಾವಿಯ ಕೆಎಲ್‌ಇ ಸ್ವತಂತ್ರ ಕಾಲೇಜಿನ ವಿದ್ಯಾರ್ಥಿಗಳು ಬಹುದ್ದೇಶದ ಕುರ್ಚಿಯ ಮಾದರಿಗೆ ಪ್ರಥಮ ಬಹುಮಾನವಾಗಿ 20 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ, ಸಿಲ್ಲವಾಸ್ ಹವೇಲಿ ಜಿಲ್ಲೆಯ ಸರಕಾರಿ ಉನ್ನತ ಮಾಧ್ಯಮಿಕ ಶಾಲೆ ಮರಾಠಿ ಮಾಧ್ಯಮದ ವಿದ್ಯಾರ್ಥಿಗಳು ನಿರ್ಮಿಸಿದ ನಿರ್ಮಲೀಕಾರಕ ಪದಾರ್ಥಗಳನ್ನು ಜೈವಿಕ ಪರಿವರ್ತನೆಗೊಳಿಸುವ ಮಾದರಿಗೆ ದ್ವಿತೀಯ ಬಹುಮಾನ 10 ಸಾವಿರ ನಗದು ಹಾಗೂ ಪ್ರಶಸ್ತಿ ನೀಡಲಾಗಿದೆ.
ಉತ್ತಮ ವಿಜ್ಞಾನ ಮಾದರಿ ನಿರ್ಮಿಸಿದ್ದ ಜಿಂದಾಲ್ ವಿದ್ಯಾಮಂದಿರದ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ 10 ಸಾವಿರ ನಗದು ಹಾಗೂ ಪ್ರಶಸ್ತಿ, ದ್ವಿತೀಯ ಬಹುಮಾನ ಗದಗ ಜಿಲ್ಲೆ ಆನಂದೇಶ್ವರ ಪ್ರೌಢಶಾಲೆ ಅಬ್ಬಿಗೇರಿ ವಿದ್ಯಾರ್ಥಿಗಳಿಗೆ ದ್ವಿತೀಯ ಬಹುಮಾನ 5 ಸಾವಿರ ನಗದು ಹಾಗೂ ಪ್ರಶಸ್ತಿ ವಿತರಿಸಲಾಯಿತು. ತೃತೀಯ, ನಾಲ್ಕನೇ ಹಾಗೂ ಐದನೇ ಸ್ಥಾನದಲ್ಲಿ ಬಂದ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.
ಬಹುಮಾನ ವಿತರಣೆ: ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಪ್ರೊ| ಎನ್.ಎಚ್. ಅಯಾಚಿತ್, ಶಿಕ್ಷಣ ಎಂಬುದು ಸದಾ ಕಲಿಯುತ್ತಿರುವ ದಾರಿ. ಈ ದಾರಿಯಲ್ಲಿ ನಡೆಯುತ್ತಿರುವಾಗ ಸದಾ ಕಲಿಕೆಯೇ ನಮ್ಮ ಗುರಿಯಾಗಿರಬೇಕು ಎಂದರು.
ಯುವ ವಿಜ್ಞಾನಿ ಡಾ| ಹರೀಶ ಭಟ್ ಮಾತನಾಡಿ, ಜಗತ್ತಿನಲ್ಲಿರುವ ಸಮಸ್ಯೆಗಳ ಕುರಿತು ಎಲ್ಲ ಯುವ ವಿಜ್ಞಾನಿಗಳು ತಮ್ಮ ಮನದಲ್ಲಿರುವ ಮಾದರಿಗಳನ್ನು ಸಿದ್ಧಪಡಿಸಿ ನಾವುಗಳು ವಿಜ್ಞಾನಿಯಾಗುವ ಅರ್ಹತೆ ಹೊಂದಿದ್ದೇವೆ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದರು.
ಶಹರ ಕ್ಷೇತ್ರಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಮಾತನಾಡಿ, ಮಕ್ಕಳಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟಿದಾಗಲೇ ಅವರ ಏನನ್ನಾದರು ಸಾಧಿಸಲು ಸಾಧ್ಯ ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ತಮ್ಮ ಅನಿಸಿಕೆ ಹಂಚಿಕೊಂಡರು. ಸೋನಂ ಮೆಹತಾ, ಠಕ್ಕರ, ಅಜಿತ ಬಾಸೂರ, ಡಾ| ನೀಲಂ ಮಹೇಶ್ವರಿ, ಎಸ್. ಎಸ್. ಕಳ್ಳಿಮನಿ ಇನ್ನಿತರರು ಇದ್ದರು.