ಧಾರವಾಡ: ಪ್ರಸಕ್ತ ವರ್ಷದ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಈ ಪೈಕಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪಟ್ಟಿ ಇಂತಿದೆ.
ವಿಜ್ಞಾನ ವಿಭಾಗದಲ್ಲಿ ಧಾರವಾಡದ ವಿ.ಪಿ. ಹಂಚಿನಮನಿ ಪಿಯು ಕಾಲೇಜಿನ ಅಕ್ಷಯ ಉಗಾರ 589 (ಶೇ.98.17) ಅಂಕ ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ.
ಉಳಿದಂತೆ ಹುಬ್ಬಳ್ಳಿಯ ಪ್ರೇರಣಾ ಪಿಯು ಕಾಲೇಜಿನ ಅರುಣ ಡಿ.ಕೆ. 588 ಅಂಕ ಪಡೆದು ದ್ವಿತೀಯ ಹಾಗೂ ಹುಬ್ಬಳ್ಳಿಯ ವಿದ್ಯಾನಿಕೇತನ ಪಿಯು ಕಾಲೇಜಿನ ಶ್ರುತಿ ಭಾರದ್ವಾಜ 587 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಅಣ್ಣಿಗೇರಿಯಅಮೃತೇಶ್ವರ ಪಿಯು ಕಾಲೇಜಿನ ತಾಹೀರಾಬಾನು ಡಂಬಳ 585 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು, ಹುಬ್ಬಳ್ಳಿಯ ಜೆಜಿಪಿಯು ಕಾಲೇಜಿನ ನೇಹಾ ಎಂ. ಬೆಂಡಿಗೇರಿ ಹಾಗೂ ಜೈನ್ ಪಿಯು ಕಾಲೇಜಿನ ಸವಿತಾ ತಲಾ 583 ಅಂಕ ಪಡೆಯುವ ಮೂಲಕ ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ.
ಹುಬ್ಬಳ್ಳಿಯ ಗೋಬಲ್ ಪಿಯು ಕಾಲೇಜಿನ ಕಾವ್ಯಾ ಕೊಲ್ಲಾರ 582 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾಳೆ. ಕಲಾ ವಿಭಾಗದಲ್ಲಿ ಹುಬ್ಬಳ್ಳಿಯ ಎಸ್‌ಜೆಎಂವಿಎಸ್ ಪಿಯು ಕಾಲೇಜಿನ ಅಕ್ಷತಾ 577 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ.
ಉಳಿದಂತೆ ಘಳಗಿ ಹುಲಕೊಪ್ಪದ ಶಿವರಾಜದೇವಿ ಪಿಯು ಕಾಲೇಜಿನ ಸವಿತಾ ಹೊಸಮಠ 563 ಅಂಕ ಹಾಗೂ ಸಿ.ಡಿ. ಲೇಖೀ 561 ಅಂಕ ಪಡೆದು ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ.