Advertisement

ಕೋವಿಡ್ 19- ಅನ್ ಲಾಕ್ 5.0; ಅ.15ರಿಂದ ಕೆಲವು ರಾಜ್ಯಗಳಲ್ಲಿ ಶಾಲಾ, ಕಾಲೇಜು ಆರಂಭ

04:09 PM Oct 12, 2020 | Nagendra Trasi |

ನವದೆಹಲಿ: ಕೋವಿಡ್ 19 ಸೋಂಕನ್ನು ತಡೆಗಟ್ಟಲು ದೇಶಾದ್ಯಂತ ಹೇರಿದ್ದ ಲಾಕ್ ಡೌನ್ ಅಂತ್ಯಗೊಂಡ ನಂತರ ಭಾರತದಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭಗೊಂಡಿದ್ದು ಈಗಾಗಲೇ ಹಲವಾರು ಸಡಿಲಿಕೆ ನೀಡಲಾಗಿದೆ. ಅನ್ ಲಾಕ್ 5.0 ಜಾರಿಯಾಗಿರುವ ನಿಟ್ಟಿನಲ್ಲಿ ಅಕ್ಟೋಬರ್ 15ರಿಂದ ಶಾಲೆಗಳನ್ನು ಪುನರಾರಂಭಿಸಲು ರಾಜ್ಯಗಳಿಗೆ ಅಧಿಕಾರ ನೀಡಿದ್ದು, ಈ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳು ಶಾಲೆ ಆರಂಭಿಸಲು ಮುಂದಾಗಿರುವುದಾಗಿ ವರದಿ ತಿಳಿಸಿದೆ.

Advertisement

ಹರ್ಯಾಣ ಮತ್ತು ಮೇಘಾಲಯ ಶಾಲೆ ಆರಂಭದ ಬಗ್ಗೆ ಇನ್ನಷ್ಟೇ ನಿರ್ಧಾರ ತೆಗೆದುಕೊಳ್ಳಬೇಕಾಗಿದ್ದು, ದಿಲ್ಲಿ, ಕರ್ನಾಟಕ ಮತ್ತು ಚತ್ತೀಸ್ ಗಢ್ ರಾಜ್ಯಗಳು ಶಾಲೆ ಆರಂಭಿಸದಿರಲು ನಿರ್ಧರಿಸಿವೆ.

ಉತ್ತರಪ್ರದೇಶ: ಅಕ್ಟೋಬರ್ 19ರಿಂದ 9ನೇ ತರಗತಿಯಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಕಾಲೇಜು ಆರಂಭಿಸುವುದಾಗಿ ಉತ್ತರಪ್ರದೇಶ ಸರ್ಕಾರ ಅ.10ರಂದು ಘೋಷಿಸಿತ್ತು.

ಪಂಜಾಬ್:

ಅಕ್ಟೋಬರ್ 15ರಿಂದ ಶಾಲೆಗಳನ್ನು ಪುನರಾರಂಭಿಸಲು ಪಂಜಾಬ್ ಸರ್ಕಾರ ಮತ್ತೆ ಹೊಸ ನಿಯಮಾವಳಿಯನ್ನು ಬಿಡುಗಡೆಗೊಳಿಸಿದೆ. ನೂತನ ನಿಯಮಾವಳಿ ಅನ್ವಯ, ಕೇವಲ 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಒಂದು ತರಗತಿಯಲ್ಲಿ 20ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇರಬಾರದು ಎಂದು ಸೂಚಿಸಿದೆ.

Advertisement

ಚತ್ತೀಸ್ ಗಢ, ಮಹಾರಾಷ್ಟ್ರ/ಗುಜರಾತ್:

ಈ ಮೂರು ರಾಜ್ಯಗಳು ಶಾಲಾ, ಕಾಲೇಜು ಆರಂಭಿಸದಿರಲು ತೀರ್ಮಾನಿಸಿವೆ. ದೀಪಾವಳಿ ನಂತರ ಶಾಲಾ ಆರಂಭದ ಬಗ್ಗೆ ನಿರ್ಧರಿಸಲಾಗುವುದು ಎಂದು ರಾಜ್ಯ ಸರ್ಕಾರಗಳು ಸ್ಪಷ್ಟಪಡಿಸಿವೆ.

ಮೇಘಾಲಯ:

ಶಾಲಾ ಪುನರಾರಂಭದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮುನ್ನ ಪೋಷಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕೆಂದು ಮೇಘಾಲಯ ಸರ್ಕಾರ ಮನವಿ ಮಾಡಿಕೊಂಡಿದೆ. 6, 7 ಮತ್ತು 8ನೇ ತರಗತಿಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದಾಗಿ ಶಿಕ್ಷಣ ಸಚಿವ ಲಾಹ್ ಮೆನ್ ರಿಂಬೈ ತಿಳಿಸಿದ್ದಾರೆ.

ಆಂಧ್ರಪ್ರದೇಶ:

ನವೆಂಬರ್ 2ರ ಮೊದಲು ಶಾಲಾ, ಕಾಲೇಜುಗಳನ್ನು ಆರಂಭಿಸದಿರಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಂಧ್ರಪ್ರದೇಶ ಸರ್ಕಾರ ತಿಳಿಸಿದೆ.

ಪಶ್ಚಿಮಬಂಗಾಳ:

ಶಾಲಾ, ಕಾಲೇಜು ಅರಂಭದ ಬಗ್ಗೆ ನವೆಂಬರ್ ನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ. ಶಾಲೆ ಆರಂಭದ ಬಗ್ಗೆ ನವೆಂಬರ್ ಮಧ್ಯಂತರದಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next