Advertisement

ನಾಳೆಯಿಂದ ಶಾಲೆಗಳಲ್ಲಿ ಮಕ್ಕಳ ಕಲರವ

12:26 AM Dec 31, 2020 | Team Udayavani |

ಬೆಂಗಳೂರು: ಕೋವಿಡ್ ಮತ್ತು ಲಾಕ್‌ಡೌನ್‌ನಿಂದಾಗಿ ಮುಚ್ಚಿದ್ದ ಶಾಲೆ- ಕಾಲೇಜು ತರಗತಿಗಳು ಹೊಸ ವರ್ಷದ ಮೊದಲ ದಿನ ಮತ್ತೆ ತೆರೆಯಲಿವೆ.  ಸುಮಾರು 10 ತಿಂಗಳ ಅನಂತರ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತರಗತಿಗಳಿಗೆ ಮರಳಲಿದ್ದಾರೆ. 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮವೂ ಆರಂಭವಾಗಲಿದೆ.

Advertisement

ಮಕ್ಕಳು ಮರಳಿ ತರಗತಿಗೆ ಬರುವ ದಿನವನ್ನು ಉತ್ಸವದಂತೆ ಆಚರಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಸರಳ ಆಚರಣೆ ನಡೆಸುವಂತೆ ಇಲಾಖೆಯಿಂದ ಸೂಚಿಸಲಾಗಿದೆ. ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರು ಶಾಲೆಗೆ ಬೇಗ ಬರಲಿದ್ದಾರೆ. ಕೆಲವು ಶಾಲೆಗಳಲ್ಲಿ ತಳಿರು ತೋರಣದ ವ್ಯವಸ್ಥೆ ಮಾಡಲಾಗಿದೆ.

ಶಿಕ್ಷಣ ಇಲಾಖೆ ಆಡಳಿತಾತ್ಮಕ ಮತ್ತು ಶೈಕ್ಷಣಿಕವಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಎಲ್ಲ ಶಾಲೆಗಳಲ್ಲಿ ಸ್ವತ್ಛತೆಯ ಕಾರ್ಯ ಭರದಿಂದ ಸಾಗುತ್ತಿದೆ. ಶೌಚಾಲಯದ ಶುಚಿತ್ವ, ಶುದ್ಧ ಕುಡಿಯುವ ನೀರು, ಪೀಠೊಪಕರಣ ಸರಿಪಡಿಸುವುದು, ಶಾಲಾವರಣ ಮತ್ತು ತರಗತಿ ಕೊಠಡಿಗಳ ಸ್ಯಾನಿಟೈಸೇಶನ್‌, ನಿತ್ಯ ಸ್ಕ್ರೀನಿಂಗ್‌, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಅಗತ್ಯ ವ್ಯವಸ್ಥೆ, ಸೂಚನ ಫ‌ಲಕ, ಐಸೊಲೇಶನ್‌ ಕೊಠಡಿ ಸಹಿತ ಎಲ್ಲ ಸಿದ್ಧತೆ ಮಾಡಲಾಗಿದೆ.

ಮೊದಲ ದಿನ ಜಾಗೃತಿ
ಮೊದಲ ದಿನ ಪಠ್ಯ ಬೋಧನೆ ಕಡಿಮೆ ಇರುತ್ತದೆ. ಕೊರೊನಾ ಕುರಿತು ಮುನ್ನೆಚ್ಚರಿಕೆ ಕ್ರಮಗಳು, ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಎಸೆಸೆಲ್ಸಿ ಮತ್ತು ದ್ವಿತೀಯ ಪಿಯು ತರಗತಿಗಳ ಮಹತ್ವ ಮತ್ತು ಈ ಎರಡು ವಾರ್ಷಿಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣ ರಾಗುವುದು ಮತ್ತು ಅದರಿಂದಾಗುವ ಲಾಭದ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ಶೌಚಾಲಯದ ಶುಚಿತ್ವ, ಶುದ್ಧ ಕುಡಿಯುವ ನೀರು, ಪೀಠೊಪಕರಣ ಸರಿಪಡಿಸುವುದು, ಶಾಲಾವರಣ ಮತ್ತು ತರಗತಿ ಕೊಠಡಿಗಳ ಸ್ಯಾನಿಟೈಸೇಶನ್‌, ನಿತ್ಯ ಸ್ಕ್ರೀನಿಂಗ್‌, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಅಗತ್ಯ ವ್ಯವಸ್ಥೆ, ಸೂಚನ ಫ‌ಲಕ, ಐಸೊಲೇಶನ್‌ ಕೊಠಡಿ ಸಹಿತ ಎಲ್ಲ ಸಿದ್ಧತೆ ಮಾಡಲಾಗಿದೆ.

Advertisement

ಮೊದಲ ದಿನ ಜಾಗೃತಿ
ಮೊದಲ ದಿನ ಪಠ್ಯ ಬೋಧನೆ ಕಡಿಮೆ ಇರುತ್ತದೆ. ಕೊರೊನಾ ಕುರಿತು ಮುನ್ನೆಚ್ಚರಿಕೆ ಕ್ರಮಗಳು, ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಎಸೆಸೆಲ್ಸಿ ಮತ್ತು ದ್ವಿತೀಯ ಪಿಯು ತರಗತಿಗಳ ಮಹತ್ವ ಮತ್ತು ಈ ಎರಡು ವಾರ್ಷಿಕ ಪರೀಕ್ಷೆಗಳನ್ನು
ಯಶಸ್ವಿಯಾಗಿ ಎದುರಿಸಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣ ರಾಗುವುದು ಮತ್ತು ಅದರಿಂದಾಗುವ ಲಾಭದ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ವಿದ್ಯಾರ್ಥಿಗಳು ಏನು ಮಾಡಬೇಕು?
– ಪಾಲಕರ ಅನುಮತಿ ಪತ್ರ ಕಡ್ಡಾಯ.
– ಪ್ರತೀ ದಿನ ಬೆಳಗ್ಗೆ ಮಾತ್ರ ತರಗತಿ.
– ಮನೆಯಿಂದ ಮಾಸ್ಕ್ ಧರಿಸಿ ಬರಬೇಕು.
– ಶಾಲಾವರಣದಲ್ಲಿ ಸಾಮಾಜಿಕ ಅಂತರ ಇರಲಿ.
– ಮಾಸ್ಕ್ ಬದಲಾಯಿಸಿಕೊಳ್ಳಬಾರದು.
– ಬಿಸಿಯೂಟ ಇರುವುದಿಲ್ಲ.
– ಮನೆಯಿಂದಲೇ ಬಿಸಿನೀರು ತಂದರೆ ಉತ್ತಮ.
– ವಿದ್ಯಾಗಮ ತರಗತಿ ವಾರಕ್ಕೆ 3 ದಿನ ಮಾತ್ರ.
– ಮಾರ್ಗದರ್ಶಿ ಶಿಕ್ಷಕರ ಸಂಪರ್ಕದಲ್ಲಿರಬೇಕು.

ಪಾಲಕರ ಜವಾಬ್ದಾರಿ
– ಮಕ್ಕಳಿಗೆ ಜ್ವರ, ಕೆಮ್ಮು, ನೆಗಡಿ ಇದೆಯೇ ಎಂದು ಪರಿಶೀಲಿಸಬೇಕು.
– ಮಾಸ್ಕ್ ಹಾಕಿಸಿ ಕಳುಹಿಸಬೇಕು.
– ನಿತ್ಯದ ಪಾಠಕ್ಕೆ ಅಗತ್ಯವಿರುವಷ್ಟೇ ಪುಸ್ತಕ ಕಳುಹಿಸಿ.
– ವೈಯಕ್ತಿಕ ಶುಚಿತ್ವದ ಬಗ್ಗೆ ಮಾಹಿತಿ ನೀಡಬೇಕು.

ಶಿಕ್ಷಕರು ಏನೇನು ಮಾಡಬೇಕು?
– ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
– ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
– ಸೋಂಕು ಲಕ್ಷಣವಿದ್ದರೆ ರಜೆ ಪಡೆಯಬೇಕು.
– ಆರ್‌ಟಿಪಿಸಿಆರ್‌ ಪರೀಕ್ಷೆ ಕಡ್ಡಾಯ.
– ಮಕ್ಕಳಿಂದ ಪಾಲಕರ ಲಿಖೀತ ಹೇಳಿಕೆ ಪಡೆಯಬೇಕು.
– ಮಾಸ್ಕ್ ಇಲ್ಲದ ವಿದ್ಯಾರ್ಥಿಗಳಿಗೆ ಮಾಸ್ಕ್ ವ್ಯವಸ್ಥೆ ಮಾಡಬೇಕು.
– ಮಕ್ಕಳಿಗೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿ ನೀಡುತ್ತಿರಬೇಕು.
– ಶಾಲಾವರಣದಲ್ಲಿ ಉಗುಳದಂತೆ ಜಾಗೃತಿ ಮೂಡಿಸಬೇಕು.
– ಅಸ್ವಸ್ಥರಾಗುವ ಮಕ್ಕಳಿಗೆ ಐಸೋಲೇಶನ್‌ ಕೊಠಡಿಯಲ್ಲಿ ವ್ಯವಸ್ಥೆ ಮಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸ್ಥಳೀಯ ಆರೋಗ್ಯ ಸಿಬಂದಿಗೆ ಮಾಹಿತಿ ನೀಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next