Advertisement
ಹೊಸೂರ ಮತ್ತು ರಬಕವಿಗೆ ತೆರಳುವ ರಸ್ತೆ ವಿಭಾಜಕದ ಹತ್ತಿರ ಹೊಸೂರ ಕಡೆಯಿಂದ ಬರುತ್ತಿದ್ದ ಕಬ್ಬಿನ ಟ್ರ್ಯಾಕ್ಟರ್ ನ್ನು ಹಿಂದೆ ಹಾಕಿ ಬಸ್ ಬರುತ್ತಿದ್ದಂತೆ, ಮುಂದೆ ಟ್ಯಾಂಕರ್ ಬಂದಿದೆ. ಈ ಮಧ್ಯದಲ್ಲಿ ಚಾಲಕ ಬಸ್‍ನ್ನು ಚಲಿಸಿಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಬ್ರೆಕ್ ಹತ್ತದೆ ಇರುವುದರಿಂದ ಶಾಲಾ ವಾಹನಕ್ಕೆ ಢಿಕ್ಕೆ ಹೊಡೆದಿದೆ. ಇದರಿಂದಾಗಿ ಶಾಲಾ ವಾಹನ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ತಾಗಿಕೊಂಡು ನಿಂತಿತು. ಇದರಿಂದಾಗಿ ಭಾರಿ ಅನಾಹುತವಾಗುವುದು ತಪ್ಪಿದಂತಾಗಿದ್ದು, ಕೆಲವು ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
Related Articles
Advertisement
ಇದು ರಾಜ್ಯ ಹೆದ್ದಾರಿಯಾಗಿದ್ದು, ದಿನ ನಿತ್ಯ ನೂರಾರು ವಾಹನಗಳು ವೇಗವಾಗಿ ಸಂಚರಿಸುತ್ತಿವೆ. ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳಿಗೆ ಅಪಘಾತಗಳಾಗಿವೆ. ನಗರದ ಪ್ರಮುಖ ಶಾಲಾ ಕಾಲೇಜುಗಳು ಇಲ್ಲಿಯೇ ಇವೆ. ಈ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ವಿನಂತಿಸಿಕೊಂಡರೂ ಯಾವುದೆ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ನೀಡಿ ಆದಷ್ಟು ಬೇಗನೆ ಇಲ್ಲಿ ವೇಗ ತಡೆಗಳನ್ನು ಅಳವಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.