ಬದಿಯಡ್ಕ: ಶಾಲಾ ವಿದ್ಯಾರ್ಥಿ ಮೂಲಕ ಕೆಲವು ವರ್ಷಗಳಿಂದ ಮದ್ಯ ಸಾಗಿಸುತ್ತಿದ್ದ ಆರೋಪದಲ್ಲಿ ಕುಂಬಾxಜೆ ವಡಂಬಳೆ ನಿವಾಸಿ, ಮದ್ಯ ವ್ಯಾಪಾರಿ ಕೇಶವ(42)ನ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದು, ಆತ ತಲೆಮರೆಸಿಕೊಂಡಿದ್ದಾನೆ.
ಕಲಿಕೆಯಲ್ಲಿ ಆಸಕ್ತಿ ಇಲ್ಲದ ಮತ್ತು ಹಿರಿಯರ ಮಾತು ಕೇಳದ ವಿದ್ಯಾರ್ಥಿಯೋರ್ವನನ್ನು ಜುವ ನೈಲ್ ಹೋಮ್‌ಗೆ ಸೇರಿಸಿದ ಬಳಿಕ ಈ ರಹಸ್ಯ ಬಯಲಿಗೆ ಬಂದಿದೆ.
ತನ್ನದೇ ಊರಿನ ಮತ್ತು ಉತ್ತಮ ಕುಟುಂಬದ 15ರ ಹರೆಯದ ವಿದ್ಯಾರ್ಥಿಯೋರ್ವನನ್ನು ಆರೋ ಪಿಯು ಮೂರು ವರ್ಷಗಳಿಂದ ಮದ್ಯ ವ್ಯಾಪಾರಕ್ಕೆ ಬಳಸಿಕೊಂಡಿದ್ದ ಎಂದು ಆರೋಪಿಸಲಾಗಿದೆ.
ಮವ್ವಾರಿನ ಶಾಲೆಯಲ್ಲಿ 7ನೇ ತರಗತಿಯಲ್ಲಿ ಕಲಿಯುತ್ತಿದ್ದಾಗಲೇ ಬಾಲಕನನ್ನು ಪುಸಲಾಯಿಸಿ ಈತ ಮದ್ಯ ಸಾಗಾಟಕ್ಕೆ ಬಳಸಿಕೊಂಡಿದ್ದ. ಅನಂತರ ಬಾಲಕ ಬದಿಯಡ್ಕ ಬಳಿಯ ಶಾಲೆಯಲ್ಲಿ 8ನೇ ತರಗತಿಗೆ ಸೇರಿದ. ಪ್ರತಿಭಾವಂತ ನಾಗಿದ್ದ ವಿದ್ಯಾರ್ಥಿ ಶಿಕ್ಷಣದಲ್ಲಿ ನಿರಾಸಕ್ತಿ ತೋರಿಸಲಾರಂಭಿಸಿದ ಹಾಗೂ ಮನೆಯವರ ಮಾತನ್ನು ನಿರ್ಲಕ್ಷಿಸತೊಡಗಿದೆ. ಈ ಹಿನ್ನೆಲೆ ಯಲ್ಲಿ ಆತನನ್ನು ವಿಟ್ಲದ ಶಾಲೆಗೆ ಸೇರಿಸಿ ಹಾಸ್ಟೆಲ್‌ನಲ್ಲಿ ಉಳಿದು ಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಕೆಲವೇ ದಿನಗಳಲ್ಲಿ ಅಲ್ಲಿಂದ ಮನೆಗೆ ವಾಪಸಾದ ಕಾರಣ ಮನೆಯವರು ಪರವನಡ್ಕದ ಜುವನೈಲ್ ಹೋಮ್‌ಗೆ ಸೇರಿಸಿದರು.
ಅಲ್ಲಿನ ಅಧಿಕಾರಿಗಳು ಬಾಲಕನಿಗೆ ಆಪ್ತಸಲಹೆ ನೀಡುತ್ತಿದ್ದಾಗ ಈತ ಹಿಂದೆ ಮಾಡಿದ್ದ ಕಳ್ಳವ್ಯವಹಾರವನ್ನು ಬಹಿರಂಗಪಡಿಸಿದ. ತಾನು 3 ವರ್ಷಗಳಿಂದ ಆ ತಪ್ಪನ್ನು ಮಾಡು ತ್ತಿದ್ದೇನೆಂದು ಬಾಲಕ ತಿಳಿಸಿದ್ದ ಹಿನ್ನೆಲೆ ಯಲ್ಲಿ ಅಧಿಕಾರಿಗಳು ಬದಿಯಡ್ಕ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಆಗಮಿಸಿ ಬಾಲಕನಿಂದ ಮಾಹಿತಿ ಸಂಗ್ರಹಿಸಿದಾಗ ಮದ್ಯ ಮಾರಾಟ ದಂಧೆಗೆ ಈತ ಬಳಕೆ ಯಾದುದು ತಿಳಿದು ಬಂತು.
7ನೇ ತರಗತಿಯಲ್ಲಿದ್ದಾಗ ಕೇಶವ ತನ್ನನ್ನು ಮದ್ಯ ಸಾಗಾಟಕ್ಕೆ ಬಳಸಿಕೊಂಡಿದ್ದ. ಪ್ರತಿದಿನ ಆತ ಬದಿಯಡ್ಕದಿಂದ ನೀಡುವ ಚೀಲ ವನ್ನು ಕುಂಬಾxಜೆಗೆ ತಲುಪಿಸು ತ್ತಿದ್ದೆ. ಕೆಲವೊಮ್ಮೆ ಬೆಳಗ್ಗೆ ಹಾಗೂ ಮಧ್ಯಾಹ್ನವೂ ಬರುವಂತೆ ಒತ್ತಾಯಿ ಸುತ್ತಿದ್ದ. ಆಗ ಶಾಲೆಯಿಂದಲೇ ತೆರ ಳುತ್ತಿದ್ದುದ್ದಾಗಿ ಬಾಲಕ ಹೇಳಿದ್ದಾನೆ.
ಪೊಲೀಸರು ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.