Advertisement

ನಾರ್ವೆ ಮಕ್ಕಳು ನಲಿದಾಡಿದರು

03:51 PM Apr 28, 2020 | sudhir |

ನಾರ್ವೆ: ಒಂದೂವರೆ ತಿಂಗಳ ನಂತರ ನಾರ್ವೆಯಲ್ಲಿ ಮತ್ತೆ ಮಕ್ಕಳ ಕಲರವ ಶಾಲೆಯಲ್ಲಿ ಕೇಳಿಬರುತ್ತಿದೆ.
ಶೈಕ್ಷಣಿಕ ಕ್ಷೇತ್ರ ಚಟುವಟಿಕೆ ಆರಂಭಿಸಿದೆ. ಕೋವಿಡ್‌-19 ಸೋಂಕು ನಿಯಂತ್ರಣಕ್ಕಾಗಿ ಸ್ಥಗಿತಗೊಂಡಿದ್ದ ಪ್ರಾಥಮಿಕ ಶಾಲೆಗಳು ಸೋಮವಾರ ತೆರೆದಿವೆ. ಈ ಮೂಲಕ ನಾರ್ವೆ ಒಂದೊಂದೇ ಹಂತವಾಗಿ ಲಾಕ್‌ಡೌನ್‌ ನಿಯಮಗಳನ್ನು ಸಡಿಲಗೊಳಿಸುತ್ತಿದೆ.

Advertisement

ನರ್ಸರಿ ಶಾಲೆಗಳ ಪುನರಾರಂಭಿಸಿ ಒಂದು ವಾರದ ಅಂತರದಲ್ಲೇ ಒಂದರಿಂದ ಐದನೇ ತರಗತಿಗಳು ಪ್ರಾರಂಭಗೊಂಡಿವೆ. ವಿದ್ಯಾರ್ಥಿಗಳು 6 ವಾರಗಳ ನಂತರ ಶಾಲೆಯತ್ತ ಮುಖ ಮಾಡಿದ್ದಾರೆ. ಆದರೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಮಿತಿಗೊಳಿಸಿರುವ ಸರಕಾರ ಒಂದು ಕೊಠಡಿಯಲ್ಲಿ ಕೇವಲ 15 ವಿದ್ಯಾರ್ಥಿಗಳಿಗಷ್ಟೇ ಅವಕಾಶ ನೀಡಿದೆ.

ದೇಶದಲ್ಲಿ ಸೋಂಕು ಪ್ರಸರಣ ಕಡಿತವಾಗಿದ್ದು, ಸೋಂಕು ಪೀಡಿತರು ಚೇತರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸಂಪೂರ್ಣವಾಗಿ ಶಾಲೆ-ಕಾಲೇಜುಗಳನ್ನು ತೆರೆಯುವಂತೆ ತಿಳಿಸಲಾಗಿದೆ. ಆದರೆ ಈ ನಡೆ ಮಕ್ಕಳ ಪೋಷಕರಲ್ಲಿ ಆತಂಕ ಮೂಡಿಸಿದ್ದು, ಮಕ್ಕಳಿಗೆ ಸೋಂಕು ತಗುಲಬಹುದು ಎಂದು ಕೆಲವು ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ. ನರ್ಸರಿ ಶಾಲೆಗಳ ಹಲವು ಸಿಬಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರು ಹಿಂದೆ ಮುಂದೆ ನೋಡುತ್ತಿದ್ದಾರೆ.

ಶೈಕ್ಷಣಿಕ ಕ್ಷೇತ್ರದ ಹೊರತಾಗಿ ಇತರ ಕೆಲ ಕ್ಷೇತ್ರಗಳಿಗೆ ಸರಕಾರ ವಿನಾಯಿತಿ ನೀಡಿದ್ದು, ಹೇರ್‌ ಸೆಲೂನ್‌ ಮತ್ತು ಟ್ಯಾಟೋ ಅಂಗಡಿ ಮಾಲಕರಿಗೆ ತಮ್ಮ ವ್ಯವಹಾರವನ್ನು ಪುನರಾರಂಭಿಸುವಂತೆ ಆದೇಶ ನೀಡಿದೆ. ಸಾಮೂಹಿಕ ಕಾರ್ಯಕ್ರಮ ಆಯೋಜನೆ ನಿಷೇಧ ಆದರೆ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಇತರ ಯಾವುದೇ ಸಾಮೂಹಿಕ ಸಮಾರಂಭಗÙನ್ನು ಆಯೋಜಿಸುವಂತಿಲ್ಲ. ಅದರ ಮೇಲಿನ ನಿಷೇಧವನ್ನು ಮುಂದುವರಿಸಿದೆ. ಜತೆಗೆ ದೇಶದ ಜನತೆಯಲ್ಲಿ ಸಾಮಾಜಿಕ ಅಂತರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಸರಕಾರ ಸ್ಪಷ್ಟವಾಗಿ ಸೂಚಿಸಿದೆ. ಈ ನಿಯಮಗಳನ್ನು ಯಾರೂ ಮೀರುವಂತಿಲ್ಲ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next