Advertisement

ಒಂದೇ‌ ಸಮಯದಲ್ಲಿ ನಡೆಯಲಿದೆ 8ರಿಂದ 11ನೇ ತರಗತಿ ಪರೀಕ್ಷೆ: ಶಿಕ್ಷಕರು, ಪಾಲಕರು ಹೈರಾಣು

03:27 PM Feb 17, 2022 | Team Udayavani |

ಶಿರಸಿ: ರಾಜ್ಯ ಮಟ್ಟದ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಾಗೂ ಪ್ರಥಮ‌ ಪಿಯುಸಿ ಪರೀಕ್ಷೆಗಳು ಒಂದೇ ದಿನದಂದು ನಡೆಯಲಿದು ಜಂಟಿ ಕೇಂದ್ರಗಳಿರುವಲ್ಲಿ ಗೊಂದಲ ಆಗಿದ್ದರೆ, ಇನ್ನೊಂದೆಡೆ ಶಿರಸಿ ಶೈಕ್ಷಣಿಕ ಜಿಲ್ಲೆ ಇನ್ನೊಂದು ಎಡವಟ್ಟು‌ ಮಾಡಲು ಮುಂದಾಗಿದೆ.

Advertisement

ಎಸ್ಸೆಸ್ಸೆಲ್ಸಿ‌ ಪರೀಕ್ಷೆ ನಡೆಯುವ ಕಾಲದಲ್ಲೇ 8 ಹಾಗೂ 9ನೇ ತರಗತಿಯ ಮಕ್ಕಳಿಗೂ ಪರೀಕ್ಷೆ ನಡೆಸಲು ಶಿರಸಿ ಡಿಡಿಪಿಐ ಕಚೇರಿ ಆದೇಶ ಮಾಡಿದೆ. ಇದರ ಪರಿಣಾಮ ಶಿಕ್ಷಕರು, ಪಾಲಕರು ಹೈರಾಣಾಗಿದ್ದಾರೆ.

ಮಕ್ಕಳ ಭವಿಷ್ಯದ ಪ್ರಮುಖ ಪರೀಕ್ಷೆ ನಡೆಯಬೇಕಾದರೆ ಸರಕಾರವು ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಣೆ ಹೊರಡಿಸುತ್ತದೆ. ಅಲ್ಲಿ ಅಭ್ಯರ್ಥಿ, ಪರೀಕ್ಷೆ ನಡೆಸುವ ಸಿಬಂದಿ, ಶಿಕ್ಷಕರು, ಸಂಬಂಧಿತ ಅಧಿಕಾರಿಗಳು ಬಿಟ್ಟು ಬೇರೆಯವರು ಇರುವಂತಿಲ್ಲ.

ಆದರೆ, ಪರೀಕ್ಷಾ‌ ಕೇಂದ್ರವೂ ಇರುವ 8-9 ತರಗತಿ ಮಕ್ಕಳಿಗೂ ಪರೀಕ್ಷೆ ನಡೆಸಲು ಇಲಾಖೆ ಸೂಚನೆ ನೀಡಿದ್ದು, ಕೊಠಡಿಗಳ‌ ಸಮಸ್ಯೆ ಜೊತೆ ಶಿಕ್ಷಕರ ಹಾಗೂ ಇತರ ಸಮಸ್ಯೆಗಳೂ ತಲೆ ದೋರಲಿವೆ.

ಈ‌ ಮಧ್ಯೆ ಎಲ್ಲ‌ ಮಕ್ಕಳೂ ಈ ಕೇಂದ್ರದಲ್ಲಿ‌ ಕಂಡಾಗ ಸರಕಾರದ‌ ಕೋವಿಡ್ ನಿಯಮ ಕೂಡ ಗಾಳಿಗೆ ತೂರುವ ಸಾದ್ಯತೆ ಇದೆ.

Advertisement

ಇದನ್ನೂ ಓದಿ : ಹೈಕೋರ್ಟ್ ನಲ್ಲಿ ಹಿಜಾಬ್ ವಿಚಾರಣೆ: ಧರ್ಮ ಸ್ವಾತಂತ್ರ್ಯ ದ ಬಗ್ಗೆ ಚರ್ಚೆ, ಸಮಯ ಹಾಳು ಬೇಡ

ಎಸ್ಸೆಸೆಲ್ಸಿಯಲ್ಲಿ ವಿಕಲ ಚೇತನ ಅಥವಾ ಅಂಧ ಮಕ್ಕಳಿಗೆ 9ನೇ ವರ್ಗದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವದು ವಾಡಿಕೆ. ಆ ಮಕ್ಕಳಿಗೆ ಸಮಸ್ಯೆ ಇರುವದರಿಂದ ಅವರು ಹೇಳಿದಂತೆ ಇವರು ಬರೆಯುತ್ತಾರೆ. ಈ ಬಾರಿ ಈ 9ನೇ ತರಗತಿ‌ ಮಕ್ಕಳಿಗೂ ಪರೀಕ್ಷೆ ಜೋಡಿಸಿದ್ದರಿಂದ ಆ ವಿಶೇಷ ಚೇತನ‌ ಮಕ್ಕಳಿಗೆ ಸಮಸ್ಯೆ ಆಗುವದಿಲ್ಲವಾ? ಎಂಬುದು ಈಗಿನ ಪ್ರಶ್ನೆ. ಆ ಒಂಬತ್ತನೇ ತರಗತಿಗಳಿಗೆ ಪ್ರತ್ಯೇಕ ಪರೀಕ್ಷೆ ತೆಗೆದುಕೊಳ್ಳುವ ಇಂಗಿತ ಕೂಡ ಇಲಾಖೆ ವ್ಯಕ್ತಪಡಿಸಿದೆ. ಇದು ಅವೈಜ್ಞಾನಿಕ ಎಂದೂ ಈಗಾಗಲೇ ಮನೋ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಈ ಮಧ್ಯೆ ಪ್ರೌಢ ಶಿಕ್ಷಣ ಹಾಗೂ ಪಿಯು ಇಲಾಖೆಗೆ ಹೊಂದಾಣಿಕೆ ಇಲ್ಲದ ಪರಿಣಾಮ ಎಸ್ಸೆಸ್ಸೆಲ್ಸಿ ಪರೀಕ್ಷೆ ಜೊತೆಗೆ ಪಿಯು ಪ್ರಥಮ ಪರೀಕ್ಷೆ ಕೂಡ ನಡೆಸುತ್ತಿದೆ. ಇದು ಪ್ರೌಢ ಹಾಗೂ‌ ಪಿಯು ಕಾಲೇಜು ಸಂಯುಕ್ತ ಆಗಿರುವಲ್ಲಿ ಸಮಸ್ಯೆ ಆಗುತ್ತದೆ. ಎಸ್ಸೆಸ್ಸೆಲ್ಸಿ ಪರೀಕ್ಷಾ ಸೆಂಟರ್ ಕೂಡ ಅದೇ ಆದರೆ ನಿರ್ವಹಣೆ ಕಷ್ಟವಾಗುತ್ತದೆ.

ಈ ಮಧ್ಯೆ ಒಂದರಿಂದ ಏಳನೆ ತರಗತಿ ತನಕ ನಡೆಸಲಾಗುವ ವಾರ್ಷಿಕ ಪರೀಕ್ಣೆ ಏ.10 ರಿಂದ ಜೋಡಿಸಲಾಗಿದೆ. ಅದನ್ನು ಆಯಾ ಶಾಲಾ ಹಂತದಲ್ಲೆ ಜವಬ್ದಾರಿ ಗೆ ಬಿಡಬೇಕು ಎನ್ನುತ್ತಾರೆ ಅನೇಕ ಶಾಲಾ‌ ಪ್ರಮುಖರು.

Advertisement

Udayavani is now on Telegram. Click here to join our channel and stay updated with the latest news.

Next