Advertisement

ಯುವಕನ ಪ್ರಾಣ ತೆಗೆದ “ಡ್ರೀಮ್‌ ಪ್ರಾಜೆಕ್ಟ್’!

11:36 PM Aug 12, 2021 | Team Udayavani |

ಯವತ್ಮಾಲ್‌ (ಮಹಾರಾಷ್ಟ್ರ): ಪುಟ್ಟದೊಂದು ಹೆಲಿಕಾಪ್ಟರ್‌ ನಿರ್ಮಿಸಲು ಮುಂದಾಗಿದ್ದ ಮಹಾರಾಷ್ಟ್ರದ ಯವತ್ಮಾಲ್‌ನ ಶೇಖ್‌ ಇಸ್ಮಾಯಿಲ್‌ ಇಬ್ರಾಹೀಂ (24) ಎಂಬ ಯುವಕ, ಅದರ ಪರೀಕ್ಷೆ ನಡೆಸುವಾಗ ಸಂಭವಿಸಿದ ದುರ್ಘ‌ಟನೆ ಯಿಂದ ಸಾವಿ ಗೀಡಾಗಿದ್ದಾನೆ.

Advertisement

8ನೇ ತರಗತಿವರೆಗೆ ಓದಿ ಅನಂತರ ಶಾಲೆ ತೊರೆದಿದ್ದ ಶೇಖ್‌, ತ್ರೀ ಈಡಿಯಟ್ಸ್‌ ಸಿನೆಮಾದಿಂದ ಸ್ಫೂರ್ತಿಗೊಂಡು, ಕಳೆದ 3 ವರ್ಷದಿಂದ ಸ್ವಂತ ಸಿಂಗಲ್‌ ಸೀಟರ್‌ ಕಾಪ್ಟರ್‌ ತಯಾರಿಕೆಯಲ್ಲಿ ತೊಡಗಿದ್ದ. ಈತ ಈ ಬಾರಿಯ ಸ್ವಾತಂತ್ರ್ಯೋತ್ಸವದಂದು ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ನಿರ್ಧರಿಸಿದ್ದ.

ತಾನೇ ಹೆಲಿಕಾಪ್ಟರ್‌ನಲ್ಲಿ ಕುಳಿತು ಇಂಜಿನ್‌ ಚಾಲನೆ ಮಾಡಿದಾಗ ಹೆಲಿಕಾಪ್ಟರ್‌ನ ರೋಟರ್‌ ಬ್ಲೇಡ್‌ ವೆಲ್ಡಿಂಗ್‌ ಕಳಚಿಕೊಂಡು ಬಂದು ಕಾಪ್ಟರ್‌ನ ಮುಖ್ಯ ರೆಕ್ಕೆಗೆ ಬಡಿದಿದ್ದು, ಆ ಬ್ಲೇಡ್‌ನ‌ ಚೂರೊಂದು ನೇರವಾಗಿ ಪೈಲಟ್‌ನ ಕ್ಯಾಬಿನ್‌ನೊಳಗೆ ಕುಳಿತಿದ್ದ ಶೇಖ್‌ರವರ ಕತ್ತನ್ನು ಸೀಳಿಕೊಂಡು ಹೋಗಿದೆ.

Advertisement

Udayavani is now on Telegram. Click here to join our channel and stay updated with the latest news.

Next