Advertisement
ಈ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ 5ನೇ ತರಗತಿವರೆಗೆ 45 ವಿದ್ಯಾರ್ಥಿಗಳು ವ್ಯಾಸಂಗಮಾಡುತ್ತಿದ್ದಾರೆ. ಇಬ್ಬರು ಶಿಕ್ಷಕರು ಇದ್ದು, ಪಾಠ ಪ್ರವಚನ ಸುಸೂತ್ರವಾಗಿ ನಡೆಯುತ್ತಿದೆ. ಆದರೆ,ಕೊರತೆ ಇರುವುದು ಶಾಲಾ ಕಟ್ಟಡದ್ದು. ಈಗ ಇರುವಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಗೋಡೆಗಳು ಬಿರುಕು ಬಿಟ್ಟಿವೆ, ಹೆಂಚುಗಳು ಒಡೆದುಹೋಗಿವೆ, ತೊಲೆಗಳು ಬೆಂಡಾಗಿ ಚಾವಣಿ ಕಳಗೆಬಂದಿದೆ. ಕಟ್ಟಡ ಯಾವಾಗ ಬೇಕಾದ್ರೂ ಕುಸಿದು ಬೀಳುವ ಸಾಧ್ಯತೆ ಹೆಚ್ಚಿದೆ.
Related Articles
Advertisement
ಈ ಬಗ್ಗೆ ಸರ್ಕಾರ ತುರ್ತು ಕ್ರಮಕೈಗೊಳ್ಳದೆಹೋದಲ್ಲಿ ಮುಂದೊಂದು ದಿನ ಪಾಠ ಪ್ರವಚನದವೇಳೆ ಚಾವಣಿ ಕುಸಿದು ಮಕ್ಕಳಿಗೆ ತೊಂದರೆ ಆಗುವಸಂಭವವಿದೆ ಎಂದು ತಮ್ಮ ಆತಂಕ ವ್ಯಕ್ತಪಡಿಸಿದರು.
ಶಾಲೆ ಜಾಗ ಒತ್ತುವರಿ: ಪ್ರಸ್ತುತ ಶಾಲೆಗೆ ಸೇರಿದ ಭೂಮಿಯನ್ನು ಗ್ರಾಮದ ಕೆಲವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಅವುಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ.ಈಗಿರುವ ಶಾಲೆಯ ಜಾಗವನ್ನು ಸರ್ಕಾರಸರಿಯಾಗಿ ನಿರ್ವಹಿಸದೇ ಹೋದಲ್ಲಿ ಮುಂದೊಂದು ದಿನ ಅದೂ ಒತ್ತುವರಿ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಒಂದು ವೇಳೆ ಜಾಗ ಒತ್ತುವರಿ ಆದ್ರೆ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಆಟಾಟೋಪಕ್ಕೆ ನಿವೇಶನವೇ ಇಲ್ಲದಂತಾಗುತ್ತದೆ ಎಂದು ಗ್ರಾಮದ ಹಿರಿಯರೊಬ್ಬರು ತಮ್ಮ ಆತಂಕ ವ್ಯಕ್ತಪಡಿಸಿ, ಈ ಬಗ್ಗೆ ನಾವುಗಳು ಪ್ರಶ್ನಿಸಿದರೆ ಗ್ರಾಮದಲ್ಲಿ ಶಾಂತಿ ನೆಮ್ಮದಿಗೆ ಭಂಗ ಬರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ.
ಕಿರಿಯ ಪ್ರಾಥಮಿಕ ಶಾಲೆ ಮತ್ತು ಆಟದ ಮೈದಾನ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಗ್ರಾಮದವರಿಗೆ ಇದೆ. ಜೊತೆಗೆ ನೂತನ ಕಟ್ಟಡ ನಿರ್ಮಿಸುವಲ್ಲಿ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ ಗಮನ ಹರಿಸುವುದೇ ಕಾದು ನೋಡಬೇಕಿದೆ.
– ರಾಧಾಕೃಷ್ಣ ಎನ್.ಎಸ್.