Advertisement
ಇಂದು ದೇಶದ ಧರ್ಮ, ಸಂಸ್ಕೃತಿ, ನಡವಳಿಕೆ, ಜೀವನ ಮೌಲ್ಯ ಉಳಿಸುವ ಅನಿವಾರ್ಯತೆ ಬಂದಿದೆ. ಆಂಗ್ಲ ಮಾಧ್ಯಮದ ಬಗ್ಗೆ ನಮಗಿರುವ ವ್ಯಾಮೋಹವು ನಮ್ಮ ಮಕ್ಕಳ ಅಧಃಪತನಕ್ಕೆ ಕಾರಣವಾಗಿದೆ. ನಮ್ಮದೇ ತಪ್ಪಿನ ಪರಿಣಾಮ ಮಕ್ಕಳು ದುಶ್ಚಟ, ದುವ್ಯìವಹಾರಗಳನ್ನು ಮಾಡುತ್ತಿರುವುದನ್ನು ಕಾಣಬೇಕಾಗಿ ಬಂದಿದೆ. ಮಕ್ಕಳ ಮಾತುಕತೆ, ಜೀವನ ಶೈಲಿಯಲ್ಲಿ ನಮ್ಮ ಸಂಸ್ಕೃತಿಯ ಗಂಧವೇ ಇಲ್ಲವಾಗಿದೆ. ಹಣ ಬಂದಿದೆ. ಗುಣ ಹೋಗಿದೆ ಎಂದರು.
ಸುಲ್ಕೇರಿ ಅನುದಾನಿತ ಕನ್ನಡ ಹಿ.ಪ್ರಾ. ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಾಲೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ದತ್ತು ನೀಡುವ ವಿಚಾರದಲ್ಲಿ ನಡೆದ ಸಮಾಲೋಚನ ಸಭೆಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಪ್ರಸ್ತುತ ಶಾಲೆಯಲ್ಲಿ 46 ವಿದ್ಯಾರ್ಥಿಗಳಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಮಕ್ಕಳ ಸಂಖ್ಯೆಯನ್ನು 100ಕ್ಕೆ ಹೆಚ್ಚಿಸುವ ಭರವಸೆಯನ್ನು ಪೋಷಕರು, ಹಿತೈಷಿಗಳು ನೀಡಿದರು. ದೂರದ ಮಕ್ಕಳಿಗೆ ವಾಹನ ವ್ಯವಸ್ಥೆಯನ್ನು ಮಾಡಿಕೊಳ್ಳುವ ಅಭಿಪ್ರಾಯ ವ್ಯಕ್ತವಾಯಿತು.ಅಧ್ಯಾಪಕರ ಮಟ್ಟವನ್ನು ಹೆಚ್ಚಿಸುವ ಆರ್ಥಿಕ ಕ್ರೋಢಿಕರಣಕ್ಕೆ ಹಳೆ ವಿದ್ಯಾರ್ಥಿಗಳನ್ನು, ಪರಿಸರದ ದಾನಿಗಳನ್ನು ಸಂಪರ್ಕಿಸುವ ನಿರ್ಧಾರ ಕೈಗೊಳ್ಳಲಾಯಿತು. ಶ್ರೀರಾಮಚಂದ್ರ ವಿಶ್ವಸ್ಥ ಮಂಡಳಿ ಅಧ್ಯಕ್ಷ ಚಂದ್ರಕಾಂತ ಗೋರೆ ಕುದ್ಯಾಡಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಗುಣಪಾಲ ಪೂವಣಿ ಉಪಸ್ಥಿತರಿದ್ದರು. ಸಂಚಾಲಕ ಚಂದ್ರಶೇಖರ ಶಾಲಾ ಸ್ಥಿತಿಗತಿಗಳನ್ನು ವಿವರಿಸಿದರು. ಶಾಲಾ ಸ್ಥಾಪಕ ಬಾಬು ರಾವ್ ಅವರ ಮೊಮ್ಮಗ ಅನಂತರಾಮ ರಾವ್ ಅವರ ನಿಧನಕ್ಕೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಚಂದ್ರಕಾಂತ ಗೋರೆ ಸ್ವಾಗತಿಸಿ, ಮಾಜಿ ಅಧ್ಯಕ್ಷ ಸುಧೀರ್ ವಂದಿಸಿದರು. ದಯಾಕರ್ ಕಾರ್ಯಕ್ರಮ ನಿರ್ವಹಿಸಿದರು.
Related Articles
ಭಾಷೆ ಜೀವನವನ್ನು ಎತ್ತರಿಸುತ್ತದೆ. ಮಾತೃಭಾಷೆ ನಮ್ಮ ರಕ್ತದ ಕಣ ಕಣದಲ್ಲಿದೆ. ಹೀಗಾಗಿ ಮಾತೃಭಾಷೆ ಕನ್ನಡದಲ್ಲಿ ಶಿಕ್ಷಣ ನಮ್ಮನ್ನು ರಕ್ಷಿಸುತ್ತದೆ. ಕನ್ನಡದ ಅವನತಿ ನಮಗೆ ನಾವೇ ಬೆಂಕಿ ಹಚ್ಚಿದಂತೆ.
-ಕಲ್ಲಡ್ಕ ಪ್ರಭಾಕರ ಭಟ್
Advertisement