Advertisement
ಧ್ವನಿಯಲ್ಲಿ ಏರಿಳಿತಗಳಿರುವುದಿಲ್ಲ.ದಿನಚರಿಗಳಾದ ಸ್ನಾನ, ಶುಚಿತ್ವಗಳಿರುವುದಿಲ್ಲ. ಸಾಮಾಜಿಕ ಜವಾಬ್ದಾರಿಗಳನ್ನು ಪಾಲಿಸುವುದಿಲ್ಲ. ಕಳೆದ ಒಂದು ವರ್ಷದಲ್ಲಿ ಯಾವುದೇ ಸಂಶಯಾತ್ಮಕ ನಡವಳಿಕೆ ಅಥವಾ ಕಿವಿಯಲ್ಲಿ ಯಾರೋ ಮಾತಾಡುತ್ತಿದ್ದಾರೆ ಎಂದು ಹೇಳಿರುವುದಿಲ್ಲ ಆದರೆ ಅದಕ್ಕೆ ಮುಂಚಿನ ವರ್ಷಗಳಲ್ಲಿ ಆ ತರಹದ ಲಕ್ಷಣಗಳು ಕಂಡುಬಂದಿರುತ್ತವೆ.
ಇದು ಅತೀ ವಿರಳವಾಗಿ ಕಂಡುಬರುವ ಸ್ಕಿಝೋಫ್ರೇನಿಯಾ. ಇದು ನಿಧಾನವಾಗಿ ಆರಂಭವಾಗಿ ನಿಧಾನವಾಗಿ ಮುಂದುವರಿಯುತ್ತದೆ. ಇದರಲ್ಲಿ ಮೇಲೆ ನಮೂದಿಸಿದ ಎಲ್ಲಾ ಲಕ್ಷಣಗಳಲ್ಲಿ ಕೆಲವು ಅಲ್ಪ ಪ್ರಮಾಣಗಳಲ್ಲಿರುತ್ತವೆ. ಹೀಗಾಗಿ ಇದನ್ನು ಗುರುತಿಸುವುದು ಸ್ವಲ್ಪ ಕಷ್ಟಕರ. ಮನೆಯವರು/ಸ್ನೇಹಿತರು/
ಸಹೋದ್ಯೋಗಿಗಳು
ಗುರುತಿಸುವುದು ಹೇಗೆ?
ಮೇಲೆ ನಮೂದಿಸಿದ ಲಕ್ಷಣಗಳನ್ನು ಸಾಮಾನ್ಯ ಜನರು ವಿಂಗಡಿಸಿ ಗುರುತಿಸುವುದು ಕಷ್ಟಕರವಾಗಬಹುದು. ಆದರೆ ವ್ಯಕ್ತಿಯಲ್ಲಿ ತೊಂದರೆಯಿದೆ ಎಂದು ಗುರುತಿಸುವುದು ಅತೀ ಮುಖ್ಯ.