Advertisement
ಜನವರಿಯಲ್ಲೇ ನೀರಿನ ಅಭಾವ ಕಂಡುಬಂದಿದ್ದು, ಬಾವಿಗಳಲ್ಲಿಯೂ ನೀರಿನ ಪ್ರಮಾಣ ಕುಸಿದಿದೆ. ಕೆಲವು ಮನೆಗಳಿಗೆ ವಾರಕ್ಕೊಮ್ಮೆ ಟ್ಯಾಂಕರ್ ಮೂಲಕ ನೀರು ತರಿಸಲಾಗುತ್ತಿದೆ. ಕೊಳವೆ ಬಾವಿಯ ನೀರು ಆಳಕ್ಕೆ ಹೋಗಿದೆ. ಮರವೂರು ವೆಂಟೆಡ್ ಡ್ಯಾಂ ನೀರು ಕೂಡ ಸಮರ್ಪಕವಾಗಿ ಬರುವುದಿಲ್ಲ ಎಂಬುವುದು ಈ ಪ್ರದೇಶದವರ ಅಳಲು.
Related Articles
ಕೋರಕಂಬ್ಳದಲ್ಲಿ 1ಲಕ್ಷ ರೂ.ಜಿ.ಪಂ. ಅನುದಾನದಲ್ಲಿ ಕುಡಿಯುವ ನೀರಿಗಾಗಿ ಪೈಪು ಅಳವಡಿಕೆ, 14ನೇ ಹಣಕಾಸು ಯೋಜನೆಯಡಿ 50 ಸಾವಿರ ರೂ. ಅನುದಾನದಲ್ಲಿ ಪೈಪು, ಜಿ.ಪಂ. ಅನುದಾನದಲ್ಲಿ 1ಲಕ್ಷ ರೂ.ವೆಚ್ಚದಲ್ಲಿ ಸುತ್ತು ಪುದೆಲ್ ಪ್ರದೇಶದಲ್ಲಿ ಪೈಪುಗಳನ್ನು ಅಳವಡಿಸಲಾಗಿದೆ. ಪೈಪುಗಳ ರಿಪೇರಿ ಕಾರ್ಯಕ್ಕೆ ಸುಮಾರು 15 ಸಾವಿರ ರೂ. ವೆಚ್ಚ ತಗುಲಿದೆ.
Advertisement
ಪೈಪು ಲೈನ್‌ಗಳು ಇರುವ ಪ್ರದೇಶಭಟ್ರಕೆರೆಯಿಂದ ರಾಜ್ಯ ಹೆದ್ದಾರಿಯ ಬದಿಯಲ್ಲಿ ಜಿಎಸ್‌ಬಿ ಹಾಲ್ ತನಕ, ಶನೀಶ್ವರ ದೇವಸ್ಥಾನದಿಂದ ರಾಜ ಪಲ್ಕೆ ರಸ್ತೆಯ ಬದಿಯಲ್ಲಿ, ಸ್ವಾಮಿಲ ಪದವಿನ ಒಳಗೆ ಎಲ್ಲ ರಸ್ತೆಯ ಬದಿಯಲ್ಲಿ, ಕೋರಕಂಬ್ಳ ರಸ್ತೆಬದಿ, ಅಡ್ಕಬಾರೆ ರಸ್ತೆ ಬದಿ, ಕೋಡಿ ಪಲ್ಕೆ ರಸ್ತೆ ಬದಿ, ಅಡ್ಕಬಾರೆಯಿಂದ ಚರ್ಚ್ ನ ತನಕ ಪೈಪುಗಳಿವೆ ನೀರಿನ ಪೈಪ್ ಗಳಿವೆ. 4 ತಿಂಗಳಿನಿಂದ ನೀರಿಲ್ಲ
ಸುತ್ತು ಪುದೆಲ್ ಎಂಬಲ್ಲಿ 50 ಮನೆಗಳಿಗೆ ನೀರಿನ ಸಮಸ್ಯೆ ಇದೆ. ಈ ಹಿಂದೆ ಕೊಳವೆಬಾವಿಯಿಂದ ನೇರ ನೀರು ಸರಬರಾಜು ಆಗುತ್ತಿತ್ತು. ಈಗ ಟ್ಯಾಂಕ್ ಮೂಲಕ ಪೂರೈಸಲಾಗುತ್ತಿದೆ. ಅದರೂ ನೀರು ಸಮರ್ಪಕವಾಗಿ ಬರುತ್ತಿಲ್ಲ. ನೀರು ಬಾರದೇ 4 ತಿಂಗಳಾಯಿತು. ಕೊಳವೆ ಬಾವಿಯ ನೀರಿನ ಮಟ್ಟ ತಳಕ್ಕೆ ಹೋಗಿದೆ. ಈ ಬಗ್ಗೆ ಕೇಳಿದರೆ ನೀರಿನ ರಭಸ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ.
-ಗಿಲ್ಪರ್ಟ್ ಡಿ’ಸೋಜಾ ಕೊಳವೆ ಬಾವಿಯಲ್ಲಿ ನೀರು ಕಡಿಮೆ
ಈ ಭಾಗಕ್ಕೆ ಜನವರಿಯಿಂದಲೇ ನೀರಿಲ್ಲ. ಟ್ಯಾಂಕರ್ ಮೂಲಕ ವಾರಕ್ಕೊಮ್ಮೆ ನೀರು ತರಲಾಗುತ್ತದೆ. 3 ಸಾವಿರ ಲೀಟರ್ ನೀರಿಗೆ 350 ರೂ.. ಇಲ್ಲಿನ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿದೆ. ನೀರಿನ ಟ್ಯಾಂಕ್ ಎತ್ತರವಾಗಿ ಇರಬೇಕಿತ್ತು. ಕೊಳವೆ ಬಾವಿ ಇದ್ದವರು, ಬಾವಿ ಇದ್ದವರೂ ಪಂಚಾಯತ್ ನೀರನ್ನೇ ಉಪಯೋಗಿಸುತ್ತಿದ್ದಾರೆ. ಕೆಲವರು ತೆಂಗಿನ ಮರಕ್ಕೆ ನೀರು ಬಿಡುತ್ತಿದ್ದಾರೆ. ಇದರಿಂದ ನಮಗೆ ನೀರು ಇಲ್ಲವಾಗಿದೆ. ಇಲ್ಲಿ ಕುಡಿಯುವ ನೀರಿಗಾಗಿ ಸಮಿತಿ ರಚಿಸಿದ್ದು, ಅವರೇ ಸರಬರಾಜು ನೋಡಿಕೊಳ್ಳುತ್ತಾರೆ.
– ಸ್ಟೀವನ್, ಸುತ್ತುಪುದೆಲ್ ನಿವಾಸಿ ಓವರ್‌ಹೆಡ್ ಟ್ಯಾಂಕ್ ಅಗತ್ಯ
ಸ್ವಾಮಿಲ ಪದವು, ಸುತ್ತುಪುದೆಲ್,ಭಟ್ರಕರೆಯವರಿಗೆ ನೀರಿನ ಸಮಸ್ಯೆ ಇದೆ. ಕಳೆದ ಬಾರಿ ಪೈಪುಗಳನ್ನು ಇಂಟರ್ ಲಿಂಕ್‌ಮಾಡುವ ಮೂಲಕ ಎರಡು ದಿನಕ್ಕೊಮ್ಮೆ ನೀರು ನೀಡಲಾಗಿತ್ತು. ಹಳೆಯ ಒಂದು ಟ್ಯಾಂಕ್ ಕೆಡವಲಾಗಿದೆ. ಅದಕ್ಕೆ ಪರ್ಯಾಯವಾಗಿ ಓವರ್ ಹೆಡ್ ಟ್ಯಾಂಕ್ ಬೇಕು. ಈ ಬಗ್ಗೆ ಜಿಲ್ಲಾ ಪಂಚಾಯತ್ ಹಾಗೂ ಎಂಆರ್‌ಪಿಎಲ್ ಸಂಸ್ಥೆಗೆ ಮನವಿ ಮಾಡಲಾಗಿದೆ. ಮರವೂರು ವೆಂಟೆಡ್ ಡ್ಯಾಂನಿಂದ ನೀರು ಸಮರ್ಪಕವಾಗಿ ಬರುತ್ತಿಲ್ಲ.
– ಸುಧಾಕರ್‌ಕಾಮತ್
ಗ್ರಾ.ಪಂ. ಸದಸ್ಯ ಸುಬ್ರಾಯ ನಾಯಕ್ ಎಕ್ಕಾರು